ಕೋಡಗಾವ್: ಆ ಗ್ರಾಮದಲ್ಲಿ 195 ಜನ ವಾಸಿಸುತ್ತಿದ್ದಾರೆ. ಆದ್ರೆ ಆ ಪುಟ್ಟ ಗ್ರಾಮಕ್ಕೆ ಮಹಾಮಾರಿ ಕೊರೊನಾ ವಕ್ಕರಿಸಿದ್ದು, ಸುಮಾರು 80ಕ್ಕೂ ಹೆಚ್ಚು ಜನರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದಾರೆ.
![Corona havoc in Kondagaon Corona bomb erupted in Kondagaon 80 cases of cor found in the same village of Kondagaon 80 corona infected in a single locality of Kondagaon Kondagaon News Kondagaon Corona News Kondagaon Health Department Kondagaon District Administration ಅರ್ಧ ಗ್ರಾಮಕ್ಕೆ ವಕ್ಕರಿಸಕೊಂಡ ಕೊರೊನಾ ಕೋಡಗಾವ್ ಅರ್ಧ ಗ್ರಾಮಕ್ಕೆ ವಕ್ಕರಿಸಕೊಂಡ ಕೊರೊನಾ ಕೋಡಗಾವ್ ಕೊರೊನಾ ಸುದ್ದಿ ಅರ್ಧ ಗ್ರಾಮಕ್ಕೆ ವಕ್ಕರಿಸಕೊಂಡ ಕೊರೊನಾ ಸುದ್ದಿ](https://etvbharatimages.akamaized.net/etvbharat/prod-images/cg-knd-01-corona-positive-breaking-vid-cg10017_29042021210701_2904f_1619710621_676.jpg)
ಕೊರೊನಾ ಸೋಂಕು ಅತೀ ವೇಗವಾಗಿ ಹಬ್ಬುತ್ತಿದ್ದು, ಜಿಲ್ಲೆಯ ಕುಮ್ಹಾರ್ಪಾರಾ ಗ್ರಾಮದ 80 ಜನರಿಗೆ ಸೋಂಕು ತಗುಲಿದೆ. ಕೋಡಗಾವ್ ಜಿಲ್ಲೆಯಲ್ಲಿ ಗುರುವಾರದಂದು 1331 ಕೊರೊನಾ ಪ್ರಕರಣಗಳು ಪತ್ತೆಯಾಗಿತ್ತು. ಈ ಪೈಕಿ ಕುಮ್ಹಾರ್ ಗ್ರಾಮದ 80 ಜನರಿಗೆ ಕೊರೊನಾ ಸೋಂಕು ಹರಡಿರುವುದಾಗಿ ತಿಳಿದು ಬಂದಿದೆ.
ಮದುವೆಯೇ ಕಾರಣ
ಕೆಲ ದಿನಗಳ ಹಿಂದೆ ಕುಮ್ಹಾರ್ಪಾರ್ನಲ್ಲಿ ಅನೇಕ ಮದುವೆಗಳು ನಡೆದಿದ್ದವು. ಹೀಗಾಗಿ ಈ ಗ್ರಾಮದಲ್ಲಿ ಹೆಚ್ಚಾಗಿ ಕೊರೊನಾ ಪ್ರಕರಣಗಳು ಕಂಡು ಬಂದಿವೆ. ಇವರೆಲ್ಲರನ್ನು ಐಟಿಐ ಕಟ್ಟದಲ್ಲಿ ಕ್ವಾರಂಟೈನಲ್ಲಿರಿಸಲಾಗಿದೆ ಎಂದು ಕೋಡಗಾವ್ ಜಿಲ್ಲೆಯ ಸಿಎಂಎಚ್ಒ ಡಾ. ಟಿ.ಆರ್.ಕುಂವಾರ್ ಹೇಳಿದ್ದಾರೆ.
![Corona havoc in Kondagaon Corona bomb erupted in Kondagaon 80 cases of cor found in the same village of Kondagaon 80 corona infected in a single locality of Kondagaon Kondagaon News Kondagaon Corona News Kondagaon Health Department Kondagaon District Administration ಅರ್ಧ ಗ್ರಾಮಕ್ಕೆ ವಕ್ಕರಿಸಕೊಂಡ ಕೊರೊನಾ ಕೋಡಗಾವ್ ಅರ್ಧ ಗ್ರಾಮಕ್ಕೆ ವಕ್ಕರಿಸಕೊಂಡ ಕೊರೊನಾ ಕೋಡಗಾವ್ ಕೊರೊನಾ ಸುದ್ದಿ ಅರ್ಧ ಗ್ರಾಮಕ್ಕೆ ವಕ್ಕರಿಸಕೊಂಡ ಕೊರೊನಾ ಸುದ್ದಿ](https://etvbharatimages.akamaized.net/etvbharat/prod-images/cg-knd-01-corona-positive-breaking-vid-cg10017_29042021210701_2904f_1619710621_590.jpg)
57 ಜನ ಸಾವು
ಕುಮ್ಹಾರ್ಪಾರಾವನ್ನು ಕಂಟೋನ್ಮೆಂಟ್ ಝೋನ್ ಮಾಡಲಾಗಿದೆ. ಗ್ರಾಮದ ಜನರಿಗೆ ಕೊರೊನಾ ಪರೀಕ್ಷೆ ಮುಂದುವರೆಸಲಾಗಿದೆ. ಮತ್ತಷ್ಟು ಕೊರೊನಾ ಸೋಂಕಿತರು ಪತ್ತೆಯಾಗುವ ಸಾಧ್ಯತೆಯಿದೆ. ಈಗಾಗಲೇ ಈ ಗ್ರಾಮದಲ್ಲಿ ಇದುವರೆಗೆ ಕೊರೊನಾದಿಂದಾಗಿ 57 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.