ETV Bharat / bharat

ಯುಪಿಯಲ್ಲಿ ಡಬಲ್ ಡೆಕ್ಕರ್ ಬಸ್‌ ಅಪಘಾತ; 8 ಸಾವು, 16 ಜನರಿಗೆ ಗಂಭೀರ ಗಾಯ - ಬಾರಾಬಂಕಿಯಲ್ಲಿ ಬಸ್ ಅಪಘಾತ

ಅತೀ ವೇಗದಲ್ಲಿ ಬಂದ ಡಬಲ್ ಡೆಕ್ಕರ್ ಬಸ್​ವೊಂದು ನಿಂತಿದ್ದ ಡಬಲ್ ಡೆಕ್ಕರ್ ಬಸ್‌ಗೆ ಡಿಕ್ಕಿ ಹೊಡೆದು ಉತ್ತರ ಪ್ರದೇಶದಲ್ಲಿ ಭೀಕರ ದುರ್ಘಟನೆ ಸಂಭವಿಸಿದೆ.

double decker buses collide in Uttar Pradesh, Bus accident in Barabanki, Uttar Pradesh accident news, ಉತ್ತರ ಪ್ರದೇಶದಲ್ಲಿ ಡಬಲ್ ಡೆಕ್ಕರ್ ಬಸ್‌ಗಳು ಡಿಕ್ಕಿ, ಬಾರಾಬಂಕಿಯಲ್ಲಿ ಬಸ್ ಅಪಘಾತ, ಉತ್ತರ ಪ್ರದೇಶ ಅಪಘಾತ ಸುದ್ದಿ,
ಡಬಲ್ ಡೆಕ್ಕರ್ ಬಸ್‌ಗಳ ಮಧ್ಯೆ ಡಿಕ್ಕಿ
author img

By

Published : Jul 25, 2022, 12:54 PM IST

ಬಾರಾಬಂಕಿ(ಉತ್ತರ ಪ್ರದೇಶ): ಶರವೇಗವಾಗಿ ಬಂದ ಡಬಲ್ ಡೆಕ್ಕರ್ ಬಸ್​ವೊಂದು ನಿಂತಿದ್ದ ಡಬಲ್ ಡೆಕ್ಕರ್ ಬಸ್‌ಗೆ ಡಿಕ್ಕಿ ಹೊಡೆದು ಎಂಟು ಮಂದಿ ಸಾವನ್ನಪ್ಪಿ, 16 ಮಂದಿ ಗಾಯಗೊಂಡಿರುವ ಘಟನೆ ಇಲ್ಲಿನ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಲೋನಿಕ್ತ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ನರೇಂದ್ರಪುರ ಮದ್ರಹಾ ಗ್ರಾಮದ ಬಳಿ ಅಪಘಾತ ಘಟಿಸಿತು. ಎರಡೂ ಬಸ್‌ಗಳು ಬಿಹಾರದ ಸೀತಾಮರ್ಹಿ ಮತ್ತು ಸುಪೌಲ್‌ನಿಂದ ದೆಹಲಿಗೆ ತೆರಳುತ್ತಿದ್ದವು ಎಂದು ತಿಳಿದು ಬಂದಿದೆ.

ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ರಸ್ತೆ ಅಪಘಾತ ದುಃಖಕರ. ಪರಿಹಾರ, ರಕ್ಷಣಾ ಕಾರ್ಯ ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಆಟೋ-ಕಾರು ಭೀಕರ ಅಪಘಾತ: ಮಹಿಳೆ ಸಾವು, ಪತಿ-ಮಕ್ಕಳು ಗಂಭೀರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.