ETV Bharat / bharat

Good News: ಕೇಂದ್ರ ಸರ್ಕಾರಿ ನೌಕರರ ಕಾಯುವಿಕೆ ಅಂತ್ಯ: ಡಿಎ ಹೆಚ್ಚಿಸಿ ಆದೇಶ.. - 7ನೇ ವೇತನಾ ಆಯೋಗ

ಕೇಂದ್ರ ಸರ್ಕಾರಿ ನೌಕರರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದ್ದು, 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ನೀಡಿಬೇಕಿದ್ದ ಡಿಎ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ.

7th Pay Commission
7th Pay Commission
author img

By

Published : Jun 30, 2021, 4:58 PM IST

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಬಂಪರ್​ ನೀಡಿದೆ. 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ನೀಡಿಬೇಕಿದ್ದ ಡಿಎ ಹೆಚ್ಚಳ ನೀಡಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ. ಹೀಗಾಗಿ ನೌಕರರ ದೀರ್ಘಕಾಲೀನ ಕಾಯುವಿಕೆಗೆ ತೆರೆ ಬೀಳಲಿದೆ. 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಬಲ್​​ ಬೋನಂಜಾ​ ಸಿಗಲಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ತಾತ್ಕಾಲಿಕವಾಗಿ ನಿಂತಿದ್ದ ಈ ಪ್ರಕ್ರಿಯೆ ಕೊನೆಗೊಳ್ಳಲಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರ ಮುಂದಿನ ತಿಂಗಳಿಂದ ಜಾರಿಗೆ ಬರಲಿದೆ. ಡಿಎ ಹೆಚ್ಚಳ ಜುಲೈ ತಿಂಗಳ ವೇತನದೊಂದಿಗೆ ದೊರೆಯಲಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಜೆಸಿಎಂ (ಸ್ಟಾಫ್ ಸೈಡ್) ಡಿಎ ಬಗ್ಗೆ ಪತ್ರವೊಂದನ್ನು ಬಿಡುಗಡೆ ಕೂಡಾ ಮಾಡಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಇದನ್ನೂ ಓದಿರಿ: 'ದೆವ್ವಗಳೆರಡು ಕೊಲೆ ಮಾಡುವ ಬೆದರಿಕೆ ಹಾಕ್ತಿವೆ'.. ರಕ್ಷಣೆಗೆ ಪೊಲೀಸರ ಮೊರೆ ಹೋದ ವ್ಯಕ್ತಿ!

ಇದರಿಂದ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಸಹಾಯವಾಗಲಿದೆ. ಕೇಂದ್ರ ಸರ್ಕಾರಿ ನೌಕರರ ಡಿಎ ಹಾಗೂ ಪಿಂಚಣಿದಾರರ ಡಿಆರ್‌ನ ಮೂರು ಕಂತುಗಳು 2020ರ ಜನವರಿ 1, 2020ರ ಜುಲೈ 1 ಮತ್ತು 2021ರ ಜನವರಿ 1ರಿಂದ ಬಾಕಿ ಉಳಿದಿದ್ದವು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.