ETV Bharat / bharat

ಸುಭಾಷ್‌ ಚಂದ್ರ ಬೋಸರಿಗೆ ಬ್ರಿಟೀಷರ ಬ್ರೇಕ್‌ಫಾಸ್ಟ್‌ ಬ್ರೆಡ್‌ ಇಷ್ಟವಾಗಿತ್ತು, ಯಾಕೆ ಗೊತ್ತೇ? - ಬ್ರಿಟಿಷರ ಬ್ರೇಕ್‌ಫಾಸ್ಟ್‌ ಬ್ರೇಡ್‌

ಹಚ್ಚಹಸಿರಿನ ಬೆಟ್ಟಗಳನ್ನು ಸುತ್ತುವರಿದ ಟಾರ್ ರಸ್ತೆ. ರಸ್ತೆಯಿಂದ ಮೇಲಕ್ಕೇರುತ್ತಿದ್ದಂತೆ ತಂಪಾದ ಗಾಳಿಯ ಜೊತೆಗೆ ಮಂಜಿನ ಹೊದಿಕೆ. ಹೀಗೆ, ಡಾರ್ಜಿಲಿಂಗ್ ಬೆಟ್ಟಗಳ ನಡುವೆ ಕಾಣಸಿಗುವುದೇ ಗಿಡ್ಡಾ ಪಹಾರ್. ಪಶ್ಚಿಮ ಬಂಗಾಳದ ಈ ಗಿಡ್ಡಾ ಪಹಾರ್‌ ಭಾರತದ ಅಪ್ಪಟ ಸ್ವಾತಂತ್ರ್ಯ ಹೋರಾಟಗಾರರ ರಹಸ್ಯ ಇತಿಹಾಸವನ್ನು ಜಗತ್ತಿಗೆ ಸಾರಿ ಹೇಳುತ್ತದೆ. 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಕುರಿತ ಒಂದು ವಿಶೇಷ ವರದಿ ಇಲ್ಲಿದೆ.

75 years of independence know the mystery behind netaji subhas love for english breakfast
ಸುಭಾಷ್‌ ಚಂದ್ರಬೋಸ್‌ಗೆ ಬ್ರಿಟಿಷರ ಬ್ರೇಡ್‌ ಇಷ್ಟವಾಗಿತ್ತು ಯಾಕೆ ಗೊತ್ತಾ?
author img

By

Published : Nov 28, 2021, 9:21 AM IST

ಡಾರ್ಜಿಲಿಂಗ್ (ಪಶ್ಚಿಮ ಬಂಗಾಳ): ಗಿಡ್ಡಾ ಪಹಾರ್. ಬೆಟ್ಟಗಳಲ್ಲಿರುವ ಒಂದು ಕುಗ್ರಾಮ. ಹಾಂ, ಕೇವಲ ಕುಗ್ರಾಮವಲ್ಲ, ಸ್ವಾತಂತ್ರ್ಯ ಹೋರಾಟಗಾರನ ಪರಿಶ್ರಮ, ಅದಮ್ಯ ಮನೋಭಾವಕ್ಕಿದು ಜೀವಂತ ಸಾಕ್ಷಿ.

ತಾಯ್ನಾಡಿಗಾಗಿ ಪರಮ ತ್ಯಾಗ ಮಾಡಬೇಕೆಂದು ಕರೆ ನೀಡಿದ ವ್ಯಕ್ತಿಯೊಬ್ಬ, ತನ್ನ ಒಡನಾಡಿಗಳು, ಪ್ರೀತಿಪಾತ್ರರಿಗೆ ಇಲ್ಲಿಂದಲೇ ಪತ್ರಗಳನ್ನು ರಹಸ್ಯವಾಗಿ ಬರೆಯುತ್ತಿದ್ದನಂತೆ. ಡಾರ್ಜಿಲಿಂಗ್ ಬೆಟ್ಟಗಳ ಕುರ್ಸಿಯಾಂಗ್ ಬ್ಲಾಕ್‌ನಲ್ಲಿರುವ ಗಿಡ್ಡಾಪಹಾರ್‌ನಲ್ಲಿ ಇದ್ದದ್ದು ಬೇರಾರೂ ಅಲ್ಲ, ಅವರೇ ನೇತಾಜಿ ಸುಭಾಷ್ ಚಂದ್ರ ಬೋಸ್.

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವು ನೇತಾಜಿ ಅವರಿಲ್ಲದೆ ಇದ್ದರೆ ಅದು ಅಪೂರ್ಣ. ಯಾಕೆಂದರೆ, ಬ್ರಿಟೀಷ್ ಸಾಮ್ರಾಜ್ಯ ಮತ್ತು ಭಾರತದಲ್ಲಿನ ಇವರ ವಸಾಹತುಶಾಹಿ ಆಳ್ವಿಕೆಯ ಸಾಮ್ರಾಜ್ಯದ ಬುಡವನ್ನು ಏಕಾಂಗಿಯಾಗಿ ಅಲುಗಾಡಿಸಿದವರು ಅಪ್ಟಟ ಹೋರಾಟಗಾರ ನೇತಾಜಿ. ಇದೇ ಕಾರಣಕ್ಕೆ, ಬ್ರಿಟೀಷರು ಬೋಸ್‌ ಅವರನ್ನು ಸದಾ ತನ್ನ ಕಣ್ಗಾವಲಿನಲ್ಲಿಡಲು ಬಯಸಿದ್ದರು. ಇದಕ್ಕಾಗಿಯೇ ಗಿಡ್ಡಾಪಹಾರ್‌ನ ಈ ಕುಗ್ರಾಮದ ಮನೆಯಲ್ಲಿ ಅವರನ್ನು 1936ರ ಜೂನ್‌ನಿಂದ 6 ತಿಂಗಳ ಕಾಲ ಗೃಹಬಂಧನದಲ್ಲಿ ಇರಿಸಿದ್ದರು.

1935ರ ನಂತರ ತಮ್ಮ ಗಿಡ್ಡಾ ಪಹಾರ್‌ ಮನೆಯಲ್ಲಿ ನೇತಾಜಿಯನ್ನು ಗೃಹಬಂಧನದಲ್ಲಿ ಇರಿಸಿದಾಗ ಎಲ್ಲವೂ ಬದಲಾಗಿತ್ತು. ಬೋಸ್‌ ಅವರ ವೈಯಕ್ತಿಕ ಅಡುಗೆ ಭಟ್ಟ ಕಲು ಸಿಂಗ್ ಲಾಮಾ ಅವರು ಹೊರಗಿನ ಪ್ರಪಂಚದೊಂದಿಗಿನ ಕೊಂಡಿಯಂತೆ ಇವರಿಗೆ ಕೆಲಸ ಮಾಡಿದ್ದರು. ಅವರ ಬರವಣಿಗೆಗಳು ಹಾಗೂ ಸಂದೇಶಗಳನ್ನು ರಹಸ್ಯ ರೀತಿಯಲ್ಲಿ ಹೊರಗಿನವರಿಗೆ ತಲುಪಿಸುತ್ತಿದ್ದರು. ಇದಕ್ಕಾಗಿ ಅವರು ಅನುಸರಿಸಿದ ಮಾರ್ಗ ಬ್ರೆಡ್‌ ಪೀಸ್‌ ಹಾಗೂ ಬೂಟುಗಳು.

ನೇತಾಜಿಯವರ ಗೃಹಬಂಧನದ ದಿನಗಳಲ್ಲಿ ಅವರು ಹೊರಗಿನವರನ್ನು ಭೇಟಿಯಾಗಲು ಅಥವಾ ಮಾತನಾಡಲು ಅವಕಾಶವಿರಲಿಲ್ಲ. ಅವರ ವೈಯಕ್ತಿಕ ಅಡುಗೆ ಭಟ್ಟ ಕಲು ಸಿಂಗ್ ಲಾಮಾಗೆ ಮಾತ್ರ ಈ ಅವಕಾಶವಿತ್ತು. ನೇತಾಜಿ ಅವರು ತನಗೆ ನೀಡುತ್ತಿದ್ದ ಬೆಳಗಿನ ಉಪಹಾರದ ಬ್ರೆಡ್‌ನೊಳಗೆ ದಾಖಲೆಗಳು ಹಾಗೂ ಪತ್ರಗಳನ್ನು ಕಳುಹಿಸುತ್ತಿದ್ದರು.

ಲಾಮಾ ನಂತರ ಕುರ್ಸಾಂಗ್‌ನಲ್ಲಿರುವ ಚಮ್ಮಾರನ ಮನೆಗೆ ಹೋಗಿ ಶೂಗಳ ಅಡಿಭಾಗದೊಳಗೆ ಅವುಗಳನ್ನು ಬಚ್ಚಿಟ್ಟುಕೊಂಡು ಹೋಗುತ್ತಿದ್ದ. ನೇತಾಜಿಯವರ ಪತ್ರಗಳೊಂದಿಗೆ ಕೋಲ್ಕತ್ತಾಗೆ ತಲುಪಿಸಿ ಮತ್ತೆ ಈ ಕಡೆಯಿಂದ ನೀಡುವ ಉತ್ತರಗಳನ್ನು ತೆಗೆದುಕೊಂಡು ಹೋಗಲು ಕಾಯುತ್ತಿದ್ದ. ನೇತಾಜಿ ಇಲ್ಲಿ ಗೃಹಬಂಧನದಲ್ಲಿದ್ದಾಗಲೂ ಹೀಗೆ ಹೊರ ಜಗತ್ತಿನೊಂದಿಗೆ ಸಂವಹನ ನಡೆಸುತ್ತಿದ್ದರು.

ಈ ಮನೆಯಲ್ಲಿ ಗೃಹಬಂಧನದಲ್ಲಿದ್ದಾಗ ಬೋಸ್‌ ಅವರು ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ ವಂದೇ ಮಾತರಂನಲ್ಲಿ ಕೆಲವು ಪದಗಳ ಬಳಕೆಯನ್ನು ಸೇರಿಸುವಂತೆ ರವೀಂದ್ರನಾಥ ಠಾಗೋರ್ ಅವರಿಗೆ ಪತ್ರ ಬರೆದಿದ್ದರು. 1996ರಲ್ಲಿ ಬಂಗಾಳ ಸರ್ಕಾರ ಈ ಮನೆಯನ್ನು ಸ್ವಾಧೀನಪಡಿಸಿಕೊಂಡ ನಂತರ ನೇತಾಜಿ ಇನ್‌ಸ್ಟಿಟ್ಯೂಟ್ ಫಾರ್ ಏಷ್ಯನ್ ಸ್ಟಡೀಸ್ ಎಂದು ಮರುನಾಮಕರಣ ಮಾಡಿ ಮನೆಯನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.