ETV Bharat / bharat

700 ಕದ್ದ, 2000 ಮರಳಿಸಿದ: ಕ್ಷಮಿಸಿ ಅಂತ ಪತ್ರ ಬರೆದ ಕಳ್ಳ - ಕಳ್ಳನ ಮನಪರಿವರ್ತನೆ

ಕಳ್ಳನ ಮನಪರಿವರ್ತನೆ. ಏಳು ವರ್ಷಗಳ ನಂತರ ಪತ್ರದೊಂದಿಗೆ ಹಣ ಮರಳಿಸಿದ ಕಳ್ಳ. ಕೇರಳದಲ್ಲೊಂದು ವಿಚಿತ್ರ ಘಟನೆ.

700 ಕದ್ದ, 2000 ಮರಳಿಸಿದ; ಕ್ಷಮಿಸಿ ಅಂತ ಪತ್ರ ಬರೆದ ಕಳ್ಳ
http://10.10.50.85//kerala/11-August-2022/16072088_thumbnail_2x1_llre_1108newsroom_1660200852_283.jpg
author img

By

Published : Aug 11, 2022, 1:30 PM IST

ವಯನಾಡ್: 7 ವರ್ಷಗಳ ಹಿಂದೆ 700 ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದಿದ್ದವನೊಬ್ಬ, ಈಗ ಅದರ ಬದಲಾಗಿ 2000 ರೂಪಾಯಿ ಮರಳಿಸಿದ್ದು ಕುತೂಹಲಕರವಾಗಿದೆ. ವಸ್ತು ಹಾಗೂ ಹಣ ಮಾತ್ರವಲ್ಲದೇ ಆ ವ್ಯಕ್ತಿಯ ಪತ್ನಿಯ ಹೆಸರಲ್ಲಿ ಕ್ಷಮಾಪಣಾ ಪತ್ರವನ್ನೂ ಬರೆದಿರುವ ಕಳ್ಳ, ವಸ್ತುಗಳನ್ನು ತೆಗೆದುಕೊಂಡು ತನ್ನನ್ನು ಕ್ಷಮಿಸಬೇಕೆಂದು ಕೇಳಿಕೊಂಡಿದ್ದಾನೆ. ಇಂಥದೊಂದು ವಿಚಿತ್ರ ಘಟನೆ ವಯನಾಡಿನ ಪುಲಪಲ್ಲಿಯಲ್ಲಿ ನಡೆದಿದೆ. ವಸ್ತುಗಳೊಂದಿಗೆ ಬರೆದ ಪತ್ರದಲ್ಲಿ ಬರೆದವರ ಹೆಸರನ್ನು ನಮೂದಿಸಲಾಗಿಲ್ಲ.

ಪತ್ರದ ಒಕ್ಕಣೆ ಹೀಗಿದೆ: ಡಿಯರ್ ಮೇರಿ ಸಹೋದರಿ, ಹಲವಾರು ವರ್ಷಗಳ ಹಿಂದೆ ನಾನು ಹಿರಿಯ ಸಹೋದರ ಜೋಸೆಫ್ ಅವರಿಂದ ನಾನು 700 ರೂಪಾಯಿ ಮೌಲ್ಯದ ಕೆಲ ವಸ್ತುಗಳನ್ನು ಕಳವು ಮಾಡಿದ್ದೆ. ಈಗ ಆ ವಸ್ತುಗಳ ಮೌಲ್ಯ 2000 ರೂಪಾಯಿಗಳಾಗಬಹುದು. ನಾನು ಆ ಹಣವನ್ನು ಈ ಪತ್ರದೊಂದಿಗೆ ಕಳುಹಿಸುತ್ತಿದ್ದೇನೆ. ದಯವಿಟ್ಟು ಈ ಹಣ ತೆಗೆದುಕೊಂಡು ನನ್ನನ್ನು ಕ್ಷಮಿಸಿಬಿಡಿ.

ಪುಲಪಲ್ಲಿ ಹತ್ತಿರದ ಪೆರಿಕಲ್ಲೂರ ಪಟ್ಟನಿಕೂಪ ನಿವಾಸಿ ಮೇರಿ ಅವರು ಬುಧವಾರ ತಮಗೆ ಬಂದ ಪತ್ರ ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ತನ್ನ ಮಕ್ಕಳಿಂದ ಕ್ರಿಸ್​ಮಸ್ ಹಬ್ಬದಲ್ಲಿ ಕಾರ್ಡ್ ಬರುವುದು ಬಿಟ್ಟರೆ ಪೋಸ್ಟ್ ಮೂಲಕ ಮತ್ತೇನೂ ಅವರಿಗೆ ಯಾವತ್ತೂ ಬಂದಿರಲಿಲ್ಲ. ಪತ್ರ ಬರೆದವರ ಹೆಸರು ಕವರ್ ಮೇಲೆ ಇರದಿರುವುದು ಒಂದಿಷ್ಟು ಸಂಶಯ ಮೂಡಿಸಿದರೂ ಕೊನೆಗೆ ಪತ್ರ ಓದುವುದೇ ಸರಿ ಎಂದು ತೆರೆದು ನೋಡಿದ್ದಾರೆ. ಕವರ್​ನಲ್ಲಿ ಪತ್ರದೊಂದಿಗೆ 2000 ರೂಪಾಯಿ ಹಣ ಕೂಡ ಇರುವುದನ್ನು ನೋಡಿ ಅವರು ಒಂದು ಕ್ಷಣ ಅವಾಕ್ಕಾಗಿದ್ದಾರೆ.

ಮನಪರಿವರ್ತನೆ ಮಾಡಿಕೊಂಡ ಕಳ್ಳನನ್ನು ತಾನು ಕ್ಷಮಿಸಿರುವೆ, ಆದರೆ ಈ ವಿಷಯವನ್ನು ಆತನಿಗೆ ಹೇಳಲಾಗುತ್ತಿಲ್ಲವಲ್ಲ ಎಂಬ ನೋವಿದೆ ಎಂದು ಮೇರಿ ಹೇಳಿದರು. ಹತ್ತು ವರ್ಷಗಳ ಹಿಂದೆಯೇ ಮೇರಿ ಅವರ ಪತಿ ತೀರಿಕೊಂಡಿರುವುದರಿಂದ ಈ ಮನಪರಿವರ್ತನೆಯಾದ ಕಳ್ಳ ಯಾರೆಂಬುದನ್ನು ಕಂಡು ಹಿಡಿಯಲು ಅವರಿಂದ ಈಗ ಸಾಧ್ಯವಾಗುತ್ತಿಲ್ಲ. ಉಳಿದ ಕಳ್ಳರು ಸಹ ಇದೇ ರೀತಿ ಮನಪರಿವರ್ತನೆ ಮಾಡಿಕೊಳ್ಳಲಿ ಎಂದು ಮೇರಿ ಆಶಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.