ETV Bharat / bharat

ಜಾಗತಿಕ ಹೂಡಿಕೆದಾರರ ಶೃಂಗಸಭೆ 2023: ಯುಎಇ - ಯುಪಿ ನಡುವೆ 70 ಸಾವಿರ ಕೋಟಿ ರೂ ಒಪ್ಪಂದಕ್ಕೆ ಸಹಿ

author img

By

Published : Feb 11, 2023, 10:01 PM IST

2023ರ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ ಲುಲು ಮಾಲ್ ಮತ್ತು ಎಲಾನಾ ಗ್ರೂಪ್‌ನೊಂದಿಗೆ ಉತ್ತರ ಪ್ರದೇಶವು ಸಾವಿರಾರು ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಕಂಪನಿಯು ಅಯೋಧ್ಯೆ ಮತ್ತು ವಾರಾಣಸಿ ಸೇರಿದಂತೆ ಇತರ ಕೆಲವು ಸ್ಥಳಗಳಲ್ಲಿ ತನ್ನ ಮಾಲ್‌ಗಳನ್ನು ತೆರೆಯಲಿದೆ. ಆದರೆ, ಎಲಾನಾ ಸಮೂಹ ಆಹಾರ ಸಂಸ್ಕರಣಾ ವಲಯದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ.

Global Investors Summit 2023
2023ರ ಜಾಗತಿಕ ಹೂಡಿಕೆದಾರರ ಶೃಂಗಸಭೆ

ಲಖನೌ (ಉತ್ತರ ಪ್ರದೇಶ): ಯುಎಇ ಹಾಗೂ ಯುಪಿ ನಡುವೆ 70 ಸಾವಿರ ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಶನಿವಾರ ಸಹಿ ಹಾಕಲಾಯಿತು. ಇಲ್ಲಿ ಭಾರದ್ವಾಜ್ ಸಭಾಂಗಣದಲ್ಲಿ ಶನಿವಾರ ನಡೆದ ಎರಡನೇ ದಿನದ ಉತ್ತರ ಪ್ರದೇಶದ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ ಯುಎಇ ಪಾಲುದಾರ ದೇಶದ ಅಧಿವೇಶನ ಆಯೋಜಿಸಲಾಯಿತು.

ಎಂಎಸ್‌ಎಂಇ ಸಚಿವ ರಾಕೇಶ್‌ ಎಸ್​. ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಖೇಶ್‌ ಮೇಶ್ರಮ್‌ ಸೇರಿದಂತೆ ಹಲವು ಪ್ರತಿನಿಧಿಗಳು ಈ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಈ ಶೃಂಗಸಭೆಯ ಮೂಲಕ ಭಾರತ ಮತ್ತು ಯುಎಇ ನಡುವೆ ವರ್ಷಗಳಿಂದ ನಡೆಯುತ್ತಿರುವ ಸಾಂಪ್ರದಾಯಿಕ ಮತ್ತು ಆರ್ಥಿಕ ಸಂಬಂಧಗಳು ಮತ್ತಷ್ಟು ಗಟ್ಟಿಗೊಳಲು ಸಾಧ್ಯವಾಗಲಿದೆ. ಈ ಕಾರ್ಯಕ್ರಮವು ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಯುಎಇಗೆ ಒಂದು ಮೈಲಿಗಲ್ಲು ಆಗಲಿದೆ.

ಹೂಡಿಕೆ ಸ್ನೇಹಿ ವಾತಾವರಣದ ಲಾಭ ಪಡೆಯುತ್ತೇವೆ: ಉತ್ತರ ಪ್ರದೇಶ ಸರ್ಕಾರದ ಎಂಎಸ್‌ಎಂಇ ಸಚಿವ ರಾಕೇಶ್ ಎಸ್. ಮತ್ತು ಯುಎಇ ಸಚಿವ ಅಹ್ಮದ್ ಬಿನ್ ಅಲಿ ಅಲ್ ಸೆಜ್ ಮತ್ತು ವಿದೇಶಾಂಗ ವ್ಯಾಪಾರ ಖಾತೆ ರಾಜ್ಯ ಸಚಿವ, ಆರ್ಥಿಕ ಸಚಿವಾಲಯದ ಮುಖ್ಯಸ್ಥ ಡಾ.ಥಾನಿ ಬಿನ್ ಅಹ್ಮದ್ ಅಲ್ ಝೆಯೋದಿ ಅವರು ಶನಿವಾರ ನಡೆದ ಅಧಿವೇಶದಲ್ಲಿ ಹೂಡಿಕೆ ಹಿನ್ನೆಲೆ ಹಲವು ವಿಷಯಗಳ ಚರ್ಚಿಸಿದರು.

''ಮುಂಬರುವ ದಿನಗಳಲ್ಲಿ ನಮ್ಮ ಅನೇಕ ಹೂಡಿಕೆದಾರರು ಯುಪಿ ಕಡೆಗೆ ಹೋಗುತ್ತಾರೆ ಮತ್ತು ಯುಪಿಯಲ್ಲಿ ಯೋಗಿ ಸರ್ಕಾರ ತಂದಿರುವ ಹೂಡಿಕೆ ಸ್ನೇಹಿ ವಾತಾವರಣದ ಲಾಭವನ್ನು ಪಡೆದುಕೊಳ್ಳುತ್ತಾರೆ'' ಎಂದು ಯುಎಇ ಸಚಿವರು ಹೇಳಿದರು.

ರಫ್ತು- ಆಮದು 50 ಬಿಲಿಯನ್ ಡಾಲರ್​ಗೆ ತಲುಪಿದೆ: ಎಂಎಸ್​ಎಂಇ, ಖಾದಿ ಮತ್ತು ಗ್ರಾಮೋದ್ಯೋಗ ಸಚಿವ ರಾಕೇಶ್ ಮಾತನಾಡಿ, ''2021ರ ಸೆಪ್ಟೆಂಬರ್ 23ರಂದು ಭಾರತ ಸರ್ಕಾರ ಮತ್ತು ಯುಎಇ ನಡುವೆ ಆರ್ಥಿಕ ಸಹಕಾರಕ್ಕಾಗಿ ಪಾಲುದಾರಿಕೆ ಹೊಂದಲಾಗಿತ್ತು. ಇದರಿಂದ ಬಹಳ ಧನಾತ್ಮಕ ಫಲಿತಾಂಶಗಳು ಕಂಡು ಬಂದಿವೆ. ಈ ಪಾಲುದಾರಿಕೆಯಿಂದ ಯುಎಇ ಮತ್ತು ಭಾರತದ ನಡುವಿನ ವ್ಯಾಪಾರವು ಅನೇಕ ಪಟ್ಟು ಹೆಚ್ಚಾಗಿದೆ. ಯುಎಇಯಿಂದ ರಫ್ತು ಮತ್ತು ಆಮದು 50 ಬಿಲಿಯನ್ ಡಾಲರ್‌ಗೆ ತಲುಪಿದೆ. ಉತ್ತರ ಪ್ರದೇಶದಲ್ಲಿ ಯುಎಇಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ನಾವು ಬಯಸುತ್ತೇವೆ'' ಎಂದರು.

''ಕಳೆದ ತಿಂಗಳು ನಮ್ಮ ತಂಡವು ಯುಎಇಗೆ ಭೇಟಿ ನೀಡಿತು. ಅಲ್ಲಿ ಡಾ.ಥಾನಿ ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅಬುಧಾಬಿ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಕೂಡ ಸಾಕಷ್ಟು ಸಹಕಾರ ನೀಡಿದೆ. ಅಲ್ಲಿ ಲುಲು ಮಾಲ್ ನಮ್ಮೊಂದಿಗೆ 3,300 ಕೋಟಿ ರೂಪಾಯಿಗಳ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಲಾಗಿದೆ. ಅದರ ಅಡಿಯಲ್ಲಿ ಅದು ಅಯೋಧ್ಯೆ ಮತ್ತು ವಾರಾಣಸಿ ಮತ್ತು ಇತರ ಕೆಲವು ಸ್ಥಳಗಳಲ್ಲಿ ತನ್ನ ಮಾಲ್‌ಗಳನ್ನು ತೆರೆಯಲಿದೆ ಎಂದು ತಿಳಿಸಿದರು.

ಆಹಾರ ಸಂಸ್ಕರಣಾ ವಲಯದಲ್ಲಿ ಹೂಡಿಕೆ: ''ಎಲಾನಾ ಗ್ರೂಪ್ ಆಹಾರ ಸಂಸ್ಕರಣಾ ವಲಯದಲ್ಲಿ ಹೂಡಿಕೆಯನ್ನು ಘೋಷಿಸಿದೆ. ಸ್ವಸಹಾಯ ಗುಂಪುಗಳಿಗೆ ಲುಲು ಮಾಲ್‌ನೊಂದಿಗೆ ಒಪ್ಪಂದಕ್ಕೂ ಸಹಿ ಹಾಕಲಾಗಿದೆ. ಸ್ವಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ಉತ್ಪನ್ನಗಳು ಈ ಮಾಲ್‌ಗಳ ಮೂಲಕ ಜನರಿಗೆ ತಲುಪಬಹುದು. ಮುಖ್ಯಮಂತ್ರಿ ಯೋಗಿ ನೀಡಿದ ‘ಕೈಗೆ ದುಡಿಮೆ, ಮುಖದಲ್ಲಿ ನಗು’ ಎಂಬ ಮಂತ್ರವನ್ನು ಎಲ್ಲ ರೀತಿಯಲ್ಲೂ ಯಶಸ್ವಿಗೊಳಿಸಬೇಕಿದೆ. ಯುಎಇ ಹೂಡಿಕೆದಾರರು ಯುಪಿಗೆ ಬಂದು ಹೂಡಿಕೆ ಮಾಡುವಂತೆ ನಾನು ಮನವಿ ಮಾಡುತ್ತೇನೆ. ಯೋಗಿ ಸರ್ಕಾರ ನಿಮಗೆ ಎಲ್ಲ ರೀತಿಯಿಂದಲೂ ಬೆಂಬಲ ನೀಡುತ್ತದೆ'' ಎಂದು ಭರವಸೆ ನೀಡಿದರು.

ರಕ್ಷಣೆ, ಬಾಹ್ಯಾಕಾಶ ಕ್ಷೇತ್ರಕ್ಕೂ ಒತ್ತು: ಯುಎಇಯ ರಾಜ್ಯ ಸಚಿವ ಎಚ್‌ಇ ಅಹ್ಮದ್ ಬಿನ್ ಅಲಿ ಅಲ್ ಸೆಜ್ ಮಾತನಾಡಿ, ''ನಾವು ಉತ್ತರ ಪ್ರದೇಶದೊಂದಿಗೆ ಪರಸ್ಪರ ಸಂಬಂಧವನ್ನು ಹೊಂದಿದ್ದೇವೆ. ನಾವು ಇತ್ತೀಚೆಗೆ ಪರಸ್ಪರ ಸರ್ಕಾರದ ಸಹಕಾರವನ್ನು ಮುಂದಕ್ಕೆ ಕೊಂಡೊಯ್ದಿದ್ದೇವೆ. ಈ ಸಹಕಾರವು ಹೊಸ ಎತ್ತರವನ್ನು ಮುಟ್ಟುತ್ತದೆ ಎಂದು ನಾನು ಭಾವಿಸುತ್ತೇನೆ. ಉತ್ತರ ಪ್ರದೇಶದಲ್ಲಿ ಸಾಂಪ್ರದಾಯಿಕ ಹೂಡಿಕೆಗಳ ಹೊರತಾಗಿ, ನಾವು ಹೊಸ ಮತ್ತು ಉದಯೋನ್ಮುಖ ವಲಯಗಳತ್ತ ಗಮನಹರಿಸುತ್ತಿದ್ದೇವೆ. ಇವುಗಳಲ್ಲಿ ರಕ್ಷಣೆ, ಬಾಹ್ಯಾಕಾಶ, ಆಹಾರ ಸಂಸ್ಕರಣೆ, ಕೃಷಿ ಸಂಸ್ಕರಣೆ, ಹವಾಮಾನ, ಡ್ರೋನ್ ತಂತ್ರಜ್ಞಾನ, ಲಾಜಿಸ್ಟಿಕ್ಸ್ ಮತ್ತು ಇತರ ಹಲವು ಕ್ಷೇತ್ರಗಳು ಸೇರಿವೆ''ಎಂದರು .

'ಐ ಟೂ, ಯೂ ಟೂ' ಯಶಸ್ವಿ: ''ಕೆಲವು ಯುಎಇ ಕಂಪನಿಗಳು ಉತ್ತರ ಪ್ರದೇಶದಲ್ಲಿ ಫುಡ್ ಪಾರ್ಕ್‌ಗಳನ್ನು ಸ್ಥಾಪಿಸಲಿವೆ. ಮುಂದಿನ 5 ವರ್ಷಗಳಲ್ಲಿ ಭಾರತದೊಂದಿಗೆ ಯುಎಇಯ ಒಟ್ಟು ವ್ಯಾಪಾರ 100 ಬಿಲಿಯನ್ ಡಾಲರ್​ ತಲುಪುವ ಗುರಿಯನ್ನು ನಾವು ಹೊಂದಿದ್ದೇವೆ. ಕಳೆದ ವರ್ಷ, ಭಾರತ - ಯುಎಇ ಆರ್ಥಿಕ ಸಂಬಂಧಗಳನ್ನು ಬಲಪಡಿಸಲು, ನಾವು 'ಐ ಟೂ, ಯೂ ಟೂ' ಅನ್ನು ಪ್ರಾರಂಭಿಸಿದ್ದೇವೆ. ಇದು ಸಾಕಷ್ಟು ಯಶಸ್ವಿಯಾಯಿತು.

ಈ ಅಧಿವೇಶನದಲ್ಲಿ, ಯುಎಇ ಮತ್ತು ಉತ್ತರ ಪ್ರದೇಶದ ನಡುವೆ ಸುಮಾರು 70 ಸಾವಿರ ಕೋಟಿ ಮೌಲ್ಯದ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಜೊತೆಗೆ ಉಭಯ ದೇಶಗಳ ನಡುವೆ ಪ್ರವಾಸೋದ್ಯಮ ಮತ್ತು ಉದ್ಯಮ ವಲಯದಲ್ಲಿ ಹೂಡಿಕೆ ಕುರಿತು ಮಹತ್ವದ ಚರ್ಚೆಗಳು ನಡೆದವು.

70 ಸಾವಿರ ಕೋಟಿ ರೂ. ಹೂಡಿಕೆಯ ಗುರಿ ಪೂರ್ಣ: ಉತ್ತರ ಪ್ರದೇಶದ ಪ್ರವಾಸೋದ್ಯಮ ವಿಭಾಗದ ಪ್ರಧಾನ ಕಾರ್ಯದರ್ಶಿ ಮುಖೇಶ್ ಕುಮಾರ್ ಮೆಶ್ರಾಮ್ ಮಾತನಾಡಿದ ಅವರು, ಹೂಡಿಕೆ ವಿಷಯದಲ್ಲಿ ಯುಎಇ ಯಾವಾಗಲೂ ನಮಗೆ ಉತ್ತಮ ಪಾಲುದಾರ. ದೇಶದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಮತ್ತು ಉದ್ಯಮ ವಲಯದಲ್ಲಿ ಹೂಡಿಕೆಯ ಸಾಧ್ಯತೆ ಹೆಚ್ಚಿವೆ. ಪ್ರವಾಸೋದ್ಯಮ, ವೈದ್ಯಕೀಯ ವಲಯದಲ್ಲಿ ಕೈಗೆಟುಕುವ ಆರೋಗ್ಯ ರಕ್ಷಣೆಯ ಅಗತ್ಯವಿದೆ.

ಉತ್ತರ ಪ್ರದೇಶದಲ್ಲಿ ಯುಎಇ ಭವಿಷ್ಯದಲ್ಲಿ ಗರಿಷ್ಠ ಹೂಡಿಕೆ ಮಾಡಲಿದೆ ಎಂದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ 40 ಸಾವಿರ ಕೋಟಿ ರೂ. ಹೂಡಿಕೆಯ ಗುರಿ ಇತ್ತು, ಆದರೆ, ನಾವು ಅದನ್ನು ಉತ್ತಮವಾಗಿಸುವ ಮೂಲಕ 70 ಸಾವಿರ ಕೋಟಿ ರೂ. ಹೂಡಿಕೆಯ ಗುರಿಯನ್ನು ಪೂರ್ಣಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಉತ್ತರ ಪ್ರದೇಶದ 30 ಪ್ರಮುಖ ನಗರಗಳಲ್ಲಿ ಹೋಟೆಲ್‌ ತೆರೆಯಲಿರುವ ಎಚ್​ಎಂಐ ಕಂಪನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.