ETV Bharat / bharat

ರೈತರ ವಿರುದ್ಧ ಮಮತಾ ತೆಗೆದುಕೊಂಡ ನಿರ್ಧಾರ ನೋವು ತಂದಿದೆ: ಮೋದಿ

ಪಿಎಂ ಕಿಸಾನ್ ಯೋಜನೆಯ ಕಂತು ಬಿಡುಗಡೆ ಮಾಡಿ ರೈತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಮಮತಾ ಬ್ಯಾನರ್ಜಿಯ ಸಿದ್ಧಾಂತವು ಪಶ್ಚಿಮ ಬಂಗಾಳವನ್ನು ನಾಶಪಡಿಸಿದೆ. ರೈತರ ಹಿತದೃಷ್ಟಿಯಿಂದ ರಾಜ್ಯದಲ್ಲಿ ಈ ಯೋಜನೆಯನ್ನು ಜಾರಿಗೆ ತರದ ನಿರ್ಧಾರಕ್ಕೆ ಪ್ರತಿಪಕ್ಷಗಳ ಮೌನವನ್ನು ಪ್ರಶ್ನಿಸಿದ್ದಾರೆ.

Modi- Mamatha
ಮೋದಿ- ಮಮತಾ
author img

By

Published : Dec 25, 2020, 3:11 PM IST

ನವದೆಹಲಿ: ರಾಜಕೀಯ ಕಾರಣಗಳಿಂದಾಗಿ ಪಶ್ಚಿಮ ಬಂಗಾಳದ ರೈತರಿಗಾಗಿ ಪಿಎಂ ಕಿಸಾನ್ ಯೋಜನೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರ್ಬಂಧಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಪಿಎಂ ಕಿಸಾನ್ ಯೋಜನೆಯ ಕಂತು ಬಿಡುಗಡೆ ಮಾಡಿ ರೈತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಬ್ಯಾನರ್ಜಿಯ ಸಿದ್ಧಾಂತವು ಪಶ್ಚಿಮ ಬಂಗಾಳವನ್ನು ನಾಶಪಡಿಸಿದೆ. ರೈತರ ಹಿತದೃಷ್ಟಿಯಿಂದ ರಾಜ್ಯದಲ್ಲಿ ಈ ಯೋಜನೆಯನ್ನು ಜಾರಿಗೆ ತರದ ನಿರ್ಧಾರಕ್ಕೆ ಪ್ರತಿಪಕ್ಷಗಳ ಮೌನವನ್ನು ಪ್ರಶ್ನಿಸಿದ್ದಾರೆ.

ಓದಿ: 'ಕಮಲ್'​ ಬಿಟ್ಟು 'ಕಮಲ' ಹಿಡಿದ ಅರುಣಾಚಲಂ

ಅಟಲ್ ಬಿಹಾರಿ ವಾಜಪೇಯಿ ಅವರು ರೈತರ ನೀತಿಗಳಲ್ಲಿನ ಭ್ರಷ್ಟಾಚಾರವನ್ನು ರಾಷ್ಟ್ರೀಯ ರೋಗವೆಂದು ಹೇಳುತ್ತಿದ್ದರು. ತಂತ್ರಜ್ಞಾನದ ಮೂಲಕ ಯೋಜನೆಯಲ್ಲಿ ಯಾವುದೇ ಲೋಪದೋಷಗಳಿಲ್ಲ ಎಂಬುದನ್ನು ಖಚಿತಪಡಿಸಲಾಗಿದೆ. ಈ ಯೋಜನೆಯಡಿ ಭಾರತದಾದ್ಯಂತ ರೈತರು ಸವಲತ್ತು ಪಡೆಯುತ್ತಿದ್ದಾರೆ ಎಂಬುದು ನನಗೆ ಖುಷಿಯಾಗಿದೆ. ಪಶ್ಚಿಮ ಬಂಗಾಳ ಸರ್ಕಾರವನ್ನು ಹೊರತುಪಡಿಸಿ ಎಲ್ಲಾ ರಾಜ್ಯ ಸರ್ಕಾರಗಳು ಈ ಯೋಜನೆಗೆ ಅನುಮತಿ ನೀಡಿವೆ ಎಂದು ಹೇಳಿದರು.

ಬಂಗಾಳದ 70 ಲಕ್ಷ ರೈತರಿಗೆ ಈ ಯೋಜನೆಯಡಿ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ರಾಜಕೀಯ ಕಾರಣಗಳಿಂದಾಗಿ ಪಶ್ಚಿಮ ಬಂಗಾಳ ಸರ್ಕಾರ ಇದನ್ನು ಕಾರ್ಯಗತಗೊಳಿಸಲು ಒಪ್ಪುತ್ತಿಲ್ಲ ಎಂದು ದೀದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

ಮಮತಾ ಬ್ಯಾನರ್ಜಿಯ ಸಿದ್ಧಾಂತವು ಬಂಗಾಳವನ್ನು ನಾಶಪಡಿಸಿದೆ. ರೈತರ ವಿರುದ್ಧ ಅವರು ಕೈಗೊಂಡ ಕ್ರಮಗಳು ನನಗೆ ತುಂಬಾ ನೋವುಂಟು ಮಾಡಿದೆ. ಈ ಬಗ್ಗೆ ಪ್ರತಿಪಕ್ಷಗಳು ಏಕೆ ಶಾಂತವಾಗಿವೆ? ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.