ನವದೆಹಲಿ: ಕಲಾಪಕ್ಕೆ ಅಡ್ಡಿಪಡಿಸಿರುವ ಕಾರಣ ತೃಣಮೂಲ ಕಾಂಗ್ರೆಸ್ನ ಆರು ಸದಸ್ಯರು ಇದೀಗ ರಾಜ್ಯಸಭೆಯಿಂದ ಅಮಾನತುಗೊಂಡಿದ್ದಾರೆ. ಒಂದು ದಿನದ ಮಟ್ಟಿಗೆ ಅವರನ್ನ ಅಮಾನತು ಮಾಡಿ ಸದನದಿಂದ ಹೊರಹಾಕಲಾಗಿದೆ ಎಂದು ಸಂಸತ್ನ ಸೆಕ್ರೆಟರಿ ಜನರಲ್ ದೇಶ್ ದೀಪಕ್ ವರ್ಮಾ ತಿಳಿಸಿದ್ದಾರೆ.
ಪೆಗಾಸಸ್ ವಿಚಾರವನ್ನಿಟ್ಟುಕೊಂಡು ಸದನದಲ್ಲಿ ಗದ್ದಲ ಮಾಡಿರುವ ಜೊತೆಗೆ ಅಲ್ಲಿನ ನಿಯಮ ಉಲ್ಲಂಘನೆ ಮಾಡಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ತೃಣಮೂಲ ಕಾಂಗ್ರೆಸ್ನ ದೋಲಾ ಸೇನ್, ನದೀಮುಲ್ಲಾ ಹಾಕ್ವ್, ಅಭೀರ್ ರಂಜನ್ ಬಿಸ್ವಾಸ್, ಶಾಂತ ಚೆತ್ರೀ, ಅರ್ಪಿತಾ ಘೋಷ್, ಮೌಸಮ್ ನೂರ್ ಅಮಾನತುಗೊಂಡಿದ್ದಾರೆ.
![6 TMC MPs suspended from Rajya Sabha](https://etvbharatimages.akamaized.net/etvbharat/prod-images/12672220_twdfdfdf.jpg)
ಇದನ್ನೂ ಓದಿರಿ: 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಮೃತದೇಹ ಮರಕ್ಕೆ ಕಟ್ಟಿ ಹಾಕಿದ ಕಾಮುಕರು
ಮುಂಗಾರು ಅಧಿವೇಶನ ಆರಂಭಗೊಂಡಾಗಿನಿಂದಲೂ ವಿಪಕ್ಷಗಳು ಪೆಗಾಸಸ್ ವಿಚಾರವನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ನಿತ್ಯ ಇದೇ ವಿಚಾರವಾಗಿ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿರುವ ವಿಪಕ್ಷಗಳು ಸುಗಮ ಕಲಾಪಕ್ಕೆ ದಾರಿ ಮಾಡಿಕೊಟ್ಟಿಲ್ಲ. ಇಂದು ಕೂಡ ಸದನದಲ್ಲಿ ಗದ್ದಲ ನಡೆಸಿರುವುದಕ್ಕಾಗಿ ಅಮಾನತುಗೊಳಿಸಲಾಗಿದೆ.