ನವದೆಹಲಿ : ನಿಷೇಧಿತ ಸಿಖ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಕಾರ್ಯಕರ್ತರು ಪಂಜಾಬ್‌ನ ಮೊಗಾದಲ್ಲಿರುವ ಸರ್ಕಾರಿ ಕಟ್ಟಡವೊಂದರಲ್ಲಿ ಖಲಿಸ್ತಾನಿ ಧ್ವಜವನ್ನು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿದೆ.
ನಿಷೇಧಿತ ಸಿಖ್ ಫಾರ್ ಜಸ್ಟೀಸ್ನ ಸದಸ್ಯರಾದ ಇಂದ್ರಜಿತ್ ಸಿಂಗ್, ಜಸ್ಪಾಲ್ ಸಿಂಗ್, ಆಕಾಶ್‌ದೀಪ್ ಸಿಂಗ್, ಜಗ್ವಿಂದರ್ ಸಿಂಗ್, ಗುರ್ಪತ್ವಂತ್ ಸಿಂಗ್ ಪನ್ನುನ್ ಮತ್ತು ಹರ್ಪ್ರೀತ್ ಸಿಂಗ್ ಅಕಾ ರಂಜಿತ್ ಸಿಂಗ್ ಎಂಬುವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಆರೋಪಪಟ್ಟಿ ಸಲ್ಲಿಸಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 5ರಂದು ಪಂಜಾಬ್‌ನ ಮೊಗಾದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಎಸ್‌ಎಫ್‌ಜೆ ಕಾರ್ಯಕರ್ತರು ಖಲಿಸ್ತಾನಿ ಧ್ವಜವನ್ನು ಹಾರಿಸಿದ್ದು, ಈ ಪ್ರಕರಣ ಕುರಿತು ಎನ್‌ಐಎ ತನಿಖೆ ನಡೆಸುತ್ತಿದೆ.
ಪ್ರಕರಣದ ಆರೋಪಿಗಳಾದ ಇಂದ್ರಜಿತ್ ಸಿಂಗ್, ಜಸ್ಪಾಲ್ ಸಿಂಗ್ ಮತ್ತು ಆಕಾಶ್‌ದೀಪ್ ಸಿಂಗ್, 202ರ ಆಗಸ್ಟ್ 14ರಂದು ಮೊಗಾದ ಡಿಸಿ ಆಫೀಸ್ ಕಾಂಪ್ಲೆಕ್ಸ್‌ನಲ್ಲಿ ಖಲಿಸ್ತಾನಿ ಧ್ವಜವನ್ನು ಹಾರಿಸಿದ್ದ ಪ್ರಕರಣದಲ್ಲೂ ಆರೋಪಿಗಳಾಗಿದ್ದು, ಡಿಸಿ ಕಚೇರಿಯ ಆವರಣದಲ್ಲಿ ಹಾರಿಸಲಾದ ಭಾರತದ ರಾಷ್ಟ್ರ ಧ್ವಜವನ್ನು ಹರಿದು ಹಾಕಿದ್ದರು.
ಇದನ್ನೂ ಓದಿ:ಮಾರ್ಚ್ 28 ರಿಂದ 22 ಇಂಡಿಗೊ ವಿಮಾನಗಳ ಹಾರಾಟ