ಹಜಾರಿಬಾಗ್(ಜಾರ್ಖಂಡ್): ಮಹಾಮಾರಿ ಕೊರೊನಾ ಸೋಂಕಿಗೆ ಪ್ರತಿದಿನ ಸಾವಿರಾರು ಜನರು ಸಾವನ್ನಪ್ಪುತ್ತಿದ್ದು, ಒಂದೇ ಕುಟುಂಬದ ಅನೇಕರು ಈ ಡೆಡ್ಲಿ ವೈರಸ್ಗೆ ಬಲಿಯಾಗುತ್ತಿದ್ದಾರೆ.
ಸದ್ಯ ಜಾರ್ಖಂಡ್ನ ಹಜಾರಿಬಾಗ್ನಲ್ಲಿ ಕೊರೊನಾ ಸೋಂಕಿಗೆ ಒಂದೇ ಕುಟುಂಬದ ಆರು ಮಂದಿ ಪ್ರಾಣ ಕಳೆದುಕೊಂಡಿದ್ದು, ಇದರಿಂದ ಗ್ರಾಮದ ಜನರಲ್ಲಿ ಮೌನ ಆವರಿಸಿದ್ದು, ಇನ್ನಿಲ್ಲದ ಭಯ ಉಂಟಾಗಿದೆ.
ಇದನ್ನೂ ಓದಿ: ಅಪ್ಪ-ಅಮ್ಮ-ಮಗ ಸಾವು.. 13 ತಾಸುಗಳಲ್ಲಿ ಇಡೀ ಕುಟುಂಬವೇ ಕೊರೊನಾಗೆ ಬಲಿ!
ಕಳೆದ 14 ದಿನಗಳಲ್ಲಿ 6 ಜನರು ಮಹಾಮಾರಿಗೆ ಬಲಿಯಾಗಿದ್ದು, ಘಟನೆಯಿಂದ ಇಡೀ ಕುಟುಂಬದಲ್ಲಿ ಯಾರು ಇಲ್ಲದಂತಾಗಿದೆ. ಹಜಾರಿಬಾಗ್‌ನ ದಾರು ಬ್ಲಾಕ್‌ನ ಪೆಟೊ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಕಳೆದ 14 ದಿನಗಳಲ್ಲಿ ಪತಿ ಕಿಶೋರ್, ಪತ್ನಿ ಮಂಜು ದೇವಿ ಮತ್ತು ತಂದೆ ಸೇರಿದಂತೆ ಮೂವರು ಪ್ರಾಣ ಕಳೆದುಕೊಂಡಿದ್ದರು.
ಇದಾದ ಬಳಿಕ ಕುಟುಂಬದಲ್ಲಿದ್ದ ಮತ್ತೆ ಮೂವರು ಕೋವಿಡ್ ಸೋಂಕಿಗೊಳಗಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದಂತಹ ಸ್ಥಿತಿ ನಿರ್ಮಾಣಗೊಂಡಿದೆ.