ಶ್ರೀನಗರ : ಮೂರು ದಿನಗಳ ಹಿಂದೆ ದಕ್ಷಿಣ ಕಾಶ್ಮೀರದ ಅನಂತನಾಗ್‌ನಿಂದ ಮನೆಗೆ ಹೋಗುವಾಗ ಕಾಣೆಯಾಗಿದ್ದ ಜಮ್ಮು-ಕಾಶ್ಮೀರದ ಆರು ಜನ ಮನೆಗೆ ತಲುಪಿದ್ದಾರೆ ಎಂದು ವರದಿಯಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಯಿಂದ ಯಾವುದೇ ಮಾಹಿತಿಯನ್ನು ಅಧಿಕಾರಿಗಳು ಖಚಿತ ಪಡಿಸಿಲ್ಲ.
ಮಂಗಳವಾರ ಕಿಶ್ತ್ವಾರ್‌ನ ಚೋಯುದ್ರಮನ್ ವಾರ್ವಾನ್‌ನಿಂದ ಅನಂತನಾಗ್‌ನ ಮಾರ್ಗನ್ ಟಾಪ್ ಮೂಲಕ ಮನೆಗೆ ಹೋಗುತ್ತಿದ್ದ ಮುಹಮ್ಮದ್ ಅಕ್ಬರ್ ಕೋಕಾ, ಗುಲಾಮ್ ನಬಿ ಕೋಕಾ, ಏಜಾಜ್ ಅಹ್ಮದ್ ಕೋಕಾ, ಗುಲ್ಜಾರ್ ಅಹ್ಮದ್ ಕೋಕಾ, ಮಂಜೂರ್ ಅಹ್ಮದ್ ಕೋಕಾ ಮತ್ತು ಇದ್ರೀಸ್ ಅಹ್ಮದ್ ದಾರ್ ಕಾಣೆಯಾಗಿದ್ದರು. ಮಂಗಳವಾರ ರಾತ್ರಿ 9ಗಂಟೆಗೆ ಅವರೊಂದಿಗಿನ ಸಂಪರ್ಕ ಕಡಿತವಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ಎಲ್ಲಾ ಆರು ಮಂದಿ ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ ಎಂದು ವರದಿಗಳು ತಿಳಿಸಿವೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ಗುರುವಾರ ಕಾಣೆಯಾದವರ ಹುಡುಕಾಟ ಮುಂದುವರೆಸಿತ್ತು. ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
ಇದನ್ನೂ ಓದಿ: ವಿದೇಶಿ ರಕ್ಷಣಾ ಉತ್ಪನ್ನ ಖರೀದಿ ವಿವಾದಕ್ಕೆ ಸ್ವದೇಶಿ ಉತ್ಪನ್ನ ತಯಾರಿಕೆಯೇ ಪರಿಹಾರ - ಪ್ರಧಾನಿ ಮೋದಿ