ETV Bharat / bharat

ನಕಲಿ ಪಾಸ್‌ಪೋರ್ಟ್ ದಂಧೆ: ತೆಲಂಗಾಣದಲ್ಲಿ 6 ಮಂದಿಯ ಬಂಧನ - 6 ಮಂದಿಯ ಬಂಧನ

ನಕಲಿ ದಾಖಲೆಗಳನ್ನು ಬಳಸಿಕೊಂಡು ಪಾಸ್‌ಪೋರ್ಟ್ ದಂಧೆಯಲ್ಲಿ ತೊಡಗಿದ್ದ 6 ಮಂದಿಯನ್ನು ನಿಜಾಮಾಬಾದ್ ಪೊಲೀಸರು ಬಂಧಿಸಿದ್ದಾರೆ.

6 arrested in passport racket in Telangana
ನಕಲಿ ಪಾಸ್‌ಪೋರ್ಟ್ ದಂಧೆ
author img

By

Published : Feb 22, 2021, 10:03 AM IST

ನಿಜಾಮಾಬಾದ್: ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಕಲಿ ದಾಖಲೆಗಳನ್ನು ಬಳಸಿ ಪಾಸ್‌ಪೋರ್ಟ್‌ ಪಡೆಯುವ ದಂಧೆಯನ್ನು ಬೇಧಿಸಲಾಗಿದ್ದು, ಈ ಸಂಬಂಧ 6 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರು ಇದುವರೆಗೆ 6 ಜನರನ್ನು ಬಂಧಿಸಿದ್ದಾರೆ. ದಂಧೆ ಸಂಬಂಧ ವಿವರವಾದ ತನಿಖೆ ನಡೆಯುತ್ತಿದೆ. ಯಾರಿಗೆ ಪಾಸ್‌ಪೋರ್ಟ್‌ಗಳು ದೊರೆತಿವೆ ಎಂಬ ಬಗ್ಗೆ ನಾವು ಮಾಹಿತಿ ಕಲೆ ಹಾಕುತ್ತಿದ್ದೇವೆ. ಬಾಂಗ್ಲಾದೇಶದ ಪ್ರಜೆಗಳೂ ಈ ದಂಧೆಯ ಭಾಗವಾಗಿದ್ದಾರೆಯೇ ಎಂಬ ಬಗ್ಗೆಯೂ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಓದಿ: ಸಾರಿಗೆ ಬಸ್​-ಕಾರ್ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಐವರು ಸಾವು!

ನಿಜಾಮಾಬಾದ್‌ನ ಬಿಜೆಪಿ ಮುಖಂಡ ಮತ್ತು ಪಕ್ಷದ ಸಂಸದ ಧರ್ಮಪುರಿ ಅರವಿಂದ ಈ ಹಿಂದೆ ನಿಜಾಮಾಬಾದ್ ಜಿಲ್ಲೆಯ ಬೋಧನ್ ಪಟ್ಟಣದಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಪಾಸ್‌ಪೋರ್ಟ್‌ಗಳನ್ನು ಪಡೆಯಲಾಗಿದೆ ಎಂದು ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.