ETV Bharat / bharat

5G ಆದಾಯ 2023 ಕ್ಕೆ $315 ಶತಕೋಟಿ ನಿರೀಕ್ಷೆ: ಜುನಿಪರ್ ಸಂಸ್ಥೆ ವರದಿ - 2023 ರಲ್ಲಿ600 ಮಿಲಿಯನ್ ಚಂದಾದಾರರು

ಜಾಗತಿಕವಾಗಿ 5G ಸೇವೆಯ ಆದಾಯವು 2023 ರಲ್ಲಿ $315 ಶತಕೋಟಿಗೆ ತಲುಪಲಿದೆ ಎಂದು 5G ಬಿಲ್ ಆಪರೇಟರ್ ಜುನ್ನಿಫರ್ ರಿಸರ್ಚ್ ಸಂಸ್ಥೆ ಅಂದಾಜಿಸಿದೆ. 2027 ರ ಹೊತ್ತಿಗೆ ಜಾಗತಿಕ ಶೇಕಡಾ 95ಕ್ಕಿಂತ ಹೆಚ್ಚು 5G ಸಂಪರ್ಕಗಳಿಗೆ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಮೊಬೈಲ್ ಬ್ರಾಡ್‌ಬ್ಯಾಂಡ್ ರೂಟರ್‌ಗಳಂತಹ ವೈಯಕ್ತಿಕ ಸಾಧನಗಳ ಬಳಕೆ ಹೆಚ್ಚಾಗಲಿದೆ.

5G network
5G ನೆಟವರ್ಕ್​
author img

By

Published : Oct 24, 2022, 3:47 PM IST

ನವದೆಹಲಿ: ಜಾಗತಿಕವಾಗಿ 5G ಸೇವೆಯ ಆದಾಯವು 2023 ರಲ್ಲಿ $315 ಶತಕೋಟಿಗೆ ತಲುಪುವ ನಿರೀಕ್ಷೆಯಿದೆ. ಈ ಪ್ರಸಕ್ತ ವರ್ಷ $195 ಶತಕೋಟಿ ಇದೆ. ಮುಂದಿನ ದಿನಗಳಲ್ಲಿ ಭಾರಿ ಏರಿಕೆಯಾಗಲಿದೆ ಎಂದು ಸೋಮವಾರ 5G ಸೇವಾ ಆದಾಯದ ಬಿಲ್ ಆಪರೇಟರ್ ಜುನ್ನಿಫರ್ ರಿಸರ್ಚ್ ಸಂಸ್ಥೆಯು ಮಾಹಿತಿ ನೀಡಿದೆ.

"ಇಂಟರ್‌ನೆಟ್ ಆಫ್ ಥಿಂಗ್ಸ್‌ನ ಬೆಳವಣಿಗೆಯ ಹೊರತಾಗಿಯೂ, ಗ್ರಾಹಕ ಸಂಪರ್ಕಗಳಿಂದ ಬರುವ ಆದಾಯವು 5G ಆಪರೇಟರ್ ಆದಾಯ ಹೆಚ್ಚಳದ ಮೂಲಾಧಾರವಾಗಿ ಮುಂದುವರಿಯುತ್ತದೆ" ಎಂದು ಸಂಸ್ಥೆಯ ಸಂಶೋಧನಾ ಸಹ-ಲೇಖಕಿ ಒಲಿವಿಯಾ ವಿಲಿಯಮ್ಸ್ ತಿಳಿಸಿದ್ದಾರೆ. 2027 ರಲ್ಲಿ ಜಾಗತಿಕ ಶೇಕಡಾ 95ಕ್ಕಿಂತ ಹೆಚ್ಚು 5G ಸಂಪರ್ಕಗಳಿಗೆ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಮೊಬೈಲ್ ಬ್ರಾಡ್‌ಬ್ಯಾಂಡ್ ರೂಟರ್‌ಗಳಂತಹ ವೈಯಕ್ತಿಕ ಸಾಧನಗಳ ಬಳಕೆ ಹೆಚ್ಚಾಗಲಿದೆ ಎಂದಿದ್ದಾರೆ.

2023 ರಲ್ಲಿ 600 ಮಿಲಿಯನ್ ಚಂದಾದಾರರು: 5G ನೆಟ್‌ವರ್ಕ್‌ಗೆ ಚಂದಾದಾರರು ಆಸಕ್ತಿ ಹೊಂದಿದ್ದು, ಮುಂದಿನ ದಿನಗಳಲ್ಲಿ ಆದಾಯದಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆ ಇದೆ. ಆರ್ಥಿಕ ಕುಸಿತದ ನಡುವೆಯೂ ಮುಂದಿನ ವರ್ಷ 2023ರಲ್ಲಿ ನಿರೀಕ್ಷಿತ 600 ಮಿಲಿಯನ್ ಹೊಸ 5G ಚಂದಾದಾರರು ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿದೆ. 2027ರ ವೇಳೆಗೆ 5G ಸಂಪರ್ಕವು 80 ಪ್ರತಿಶತದಷ್ಟು ಬೆಳವಣಿಗೆ ಹೊಂದಿ, ಜಾಗತಿಕ ಆಪರೇಟರ್-ಬಿಲ್ ಆದಾಯದಲ್ಲೂ ಏರಿಕೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

5G ನೆಟವರ್ಕ್​ ಹೊಸ ಆಶಾಭಾವನೆ: 5G ನೆಟ್‌ವರ್ಕ್‌ಗಳು ಉತ್ತಮ ಸ್ವ ಸಾಮರ್ಥ, ತೀವ್ರ ವೇಗದ ಕಾರ್ಯನಿರ್ವಹಣೆಯಿಂದ ಸಂಪರ್ಕ ಜಾಲವನ್ನು ವಿಸ್ತರಿಸಿಕೊಳ್ಳಲಿವೆ. ಹೊಸ ತಂತ್ರಕೌಶಲದ ನೆಟ್‌ವರ್ಕ್ ಸ್ಲೈಸಿಂಗ್ನ್ ನ್ನು ಮುಂದಿನ ಪೀಳಿಗೆಯು ಒಪ್ಪಿಕೊಂಡು ಕೋರ್ ನೆಟ್‌ವರ್ಕ್‌ ಬಳಸುವುದು ಅನಿವಾರ್ಯ ಎನಿಸುತ್ತದೆ. ಈ ನಿಟ್ಟಿನಲ್ಲಿ ಖಾಸಗಿ 5G ನೆಟ್‌ವರ್ಕ್ ಹಾರ್ಡ್‌ವೇರ್ ವೆಚ್ಚವನ್ನು ತಗ್ಗಿಸಲು, ಹೆಚ್ಚಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ಜಗತ್ತಿನ ಹದಗೆಡುತ್ತಿರುವ ಸ್ಥೂಲ-ಆರ್ಥಿಕ ಪರಿಸ್ಥಿತಿಗಳಲ್ಲೂ 5G ನೆಟವರ್ಕ್​ ಹೊಸ ಆಶಾಭಾವನೆ ಮೂಡಿಸಿದೆ ಎಂದು ವರದಿಯಲ್ಲಿ ಪ್ರಸ್ತುತ ಪಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.