ನವದೆಹಲಿ: 5ಜಿ ಮೊಬೈಲ್‌ಗಳನ್ನು ಖರೀದಿಸಲು ಆಸಕ್ತಿ ಇರುವವರು ಮುಂದಿನ ವರ್ಷ ಸಂತಸದ ಸುದ್ದಿ ನಿರೀಕ್ಷಿಸಬಹುದು. ಮೊಬೈಲ್ ಕಂಪನಿಗಳು ಮತ್ತು ಜಾಗತಿಕ ಚಿಪ್‌ಸೆಟ್ ತಯಾರಿಕೆದಾರರು 5ಜಿ ಮೊಬೈಲ್ ಅನ್ನು ಮುಂದಿನ ವರ್ಷದ ಮಾರ್ಚ್ ವೇಳೆಗೆ 10 ಸಾವಿರ ರೂಪಾಯಿ ದರದಲ್ಲಿ ನೀಡಲು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಟೆಲಿಕಾಂ ಕಂಪನಿಗಳು ಕೂಡಾ ದೇಶದಲ್ಲಿ 5ಜಿ ಸೇವೆ ನೀಡುವ ನಿರೀಕ್ಷೆಯೂ ಇದೆ.
5 ಜಿ ಬಗ್ಗೆ ಒಂದಿಷ್ಟು ಮಾಹಿತಿ:
1. 5ಜಿ ನೆಟ್‌ವರ್ಕ್ ದೂರಸಂಪರ್ಕ ಕ್ರಾಂತಿಯಲ್ಲಿ ಭವಿಷ್ಯದ ಪ್ರಮುಖ ಬೆಳವಣಿಗೆ. 2. ಇದು ಸೂಪರ್‌ಫಾಸ್ಟ್ ಇಂಟರ್‌ನೆಟ್ ಕನೆಕ್ಟಿವಿಟಿ ನೀಡುತ್ತದೆ. 3. ಅತ್ಯಂತ ವೇಗದ ಇಂಟರ್‌ನೆಟ್ ಸೌಲಭ್ಯವು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. 4. ಟೆಲಿಕಾಂ ದೈತ್ಯ ಕಂಪನಿಗಳಾದ ಏರ್‌ಟೆಲ್, ವೊಡಾಫೋನ್, ಜಿಯೋ ಮತ್ತು ಬಿಎಸ್‌ಎನ್‌ಎಲ್ 5ಜಿ ಸೇವೆ ಆರಂಭಿಸಿಲ್ಲ.
ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಾದ ಸ್ಯಾಮ್‌ಸಂಗ್, ರಿಯಲ್ಮಿ, ಕ್ಸಿಯೋಮಿ ಮತ್ತು ಎಂಐಗಳು ಈಗಾಗಲೇ 5ಜಿ ಫೋನ್‌ಗಳನ್ನು ಲಾಂಚ್ ಮಾಡಿದ್ದು, 15 ಸಾವಿರ ರೂ.ದರ ನಿಗದಿ ಮಾಡಿವೆ. 20 ಸಾವಿರ ರೂಪಾಯಿ ದರದಲ್ಲಿ ಸದ್ಯ ದೇಶದ ಮಾರುಕಟ್ಟೆಯಲ್ಲಿರುವ 5 ಜಿ ಫೋನ್‌ಗಳೆಂದರೆ, ಒಪ್ಪೋ A74 5G, ರಿಯಲ್ಮಿ X7 5ಜಿ, ರಿಯಲ್ಮಿ ನಾರ್ಜೋ 30 ಪ್ರೋ, ಒನ್ ಪ್ಲಸ್ ನಾರ್ಡ್ ಸಿಇ 2 ಲೈಟ್ 5 ಜಿ.
ಇದನ್ನೂ ಓದಿ: mRNA ತಂತ್ರಜ್ಞಾನ ಆಧಾರಿತ ಸ್ವದೇಶಿ ಕೋವಿಡ್ ಲಸಿಕೆ ಅಭಿವೃದ್ಧಿಸಿದ ಸಿಸಿಎಂಬಿ ವಿಜ್ಞಾನಿಗಳು!