ಮುಜಾಫರ್‌ನಗರ (ಉತ್ತರ ಪ್ರದೇಶ): ಪೊಲೀಸ್ ಠಾಣೆಯಿಂದಲೇ ವೈನ್ ಬಾಟಲ್ಗಳಿದ್ದ 578 ಡಬ್ಬಿಗಳು ನಾಪತ್ತೆಯಾದ ಹಿನ್ನೆಲೆ ಮಹಿಳಾ ಹೆಡ್ ಕಾನ್‌ಸ್ಟೇಬಲ್ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾ ಪೊಲೀಸ್ ಠಾಣೆಯ ಗೋದಾಮಿನಲ್ಲಿ ಸರ್ಕಲ್ ಆಫೀಸರ್ ಪ್ರದೀಪ್ ಸಿಂಗ್ ನೇತೃತ್ವದಲ್ಲಿ ದಾಳಿ ನಡೆಸಿ, 12 ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮದ್ಯ ಇದಾಗಿತ್ತು. ಕೈರಾನಾ ಠಾಣೆಯ ಮಹಿಳಾ ಹೆಡ್ ಕಾನ್‌ಸ್ಟೇಬಲ್ ತಾರೇಶ್ ಶರ್ಮಾ ವರ್ಗಾವಣೆಯಾಗುವ ವೇಳೆ ವೈನ್ ಡಬ್ಬಿಗಳು ಕಾಣೆಯಾಗಿದ್ದವು.
ಇದನ್ನೂ ಓದಿ: ಹೀಗೂ ಆಗತ್ತೆ! ರನ್‌ವೇನಿಂದ ವಿಮಾನ ತಳ್ಳಿದ ಪ್ರಯಾಣಿಕರು.. ವಿಡಿಯೋ ವೈರಲ್
ಈ ಪ್ರಕರಣದ ಹಿಂದೆ ತಾರೇಶ್ ಶರ್ಮಾ ಕೈವಾಡವಿರುವುದು ಬೆಳಕಿಗೆ ಬಂದಿದ್ದು, ಪೊಲೀಸ್ ಅಧೀಕ್ಷಕರ ಆದೇಶದ ಮೇರೆಗೆ ಇವರ ವಿರುದ್ಧ ಐಪಿಸಿ ಸೆಕ್ಷನ್ 409 (ಸಾರ್ವಜನಿಕ ಸೇವಕರಿಂದ ನಂಬಿಕೆ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.