ETV Bharat / bharat

ಕೋವಿಡ್​ಗೆ ತುತ್ತಾದ ಶೇ.50ರಷ್ಟು ಜನ ವಾಸನೆ ಗ್ರಹಿಕೆಯನ್ನೇ ಕಳೆದುಕೊಂಡಿದ್ದಾರೆ: ಅಧ್ಯಯನ

ಸ್ವೀಡನ್‌ನ ಪ್ರಾಥಮಿಕ ಸಂಶೋಧನೆಯ ಪ್ರಕಾರ, 2020 ರಲ್ಲಿ ಆರಂಭವಾದ ಮೊದಲ ಸೋಂಕಿನ ಅಲೆಯ ಸಮಯದಲ್ಲಿ ಕೋವಿಡ್​​​-19 ಸೋಂಕಿಗೆ ತುತ್ತಾದ ಸುಮಾರು 50 ಪ್ರತಿಶತದಷ್ಟು ಜನರು, ತಮ್ಮ ವಾಸನೆ ಗ್ರಹಿಕೆಯನ್ನು ದೀರ್ಘಕಾಲದವರೆಗೆ ಮತ್ತು ಶಾಶ್ವತವಾಗಿ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಾಸನೆ ಗ್ರಹಿಕೆ
ವಾಸನೆ ಗ್ರಹಿಕೆ
author img

By

Published : Jan 25, 2022, 5:17 PM IST

Updated : Jan 25, 2022, 5:26 PM IST

ಕೊರೊನಾ ಸೋಂಕು ಆರಂಭವಾದಾಗಿನಿಂದ ಇಲ್ಲಿಯ ತನಕ ಹಲವರು ವಾಸನೆ ಗ್ರಹಿಕೆಯನ್ನೇ ಕಳೆದುಕೊಂಡಿದ್ದಾರೆ ಎಂದು ವರದಿಯೊಂದರಿಂದ ಬಹಿರಂಗವಾಗಿದೆ. ಜ್ವರ, ಶೀತ, ಮೂಗು ಸೋರುವಿಕೆ, ಆಯಾಸದ ಜೊತೆಗೆ ವಾಸನೆ ಮತ್ತು ರುಚಿಯ ಸಾಮರ್ಥ್ಯ ಕಳೆದುಕೊಳ್ಳುವಿಕೆ ಪ್ರಮುಖ ಕೊರೊನಾ ಸೋಂಕಿನ ಪ್ರಮುಖ ಲಕ್ಷಣಗಳೆಂದು ಹೇಳಲಾಗುತ್ತದೆ. ಹಲವರು ಈ ಸೋಂಕಿಗೆ ತುತ್ತಾಗಿ ಪುನಃ ವಾಸನೆ ಗ್ರಹಿಕೆಯನ್ನು ಪಡೆದುಕೊಂಡರೇ, ಕೆಲವರು ಈಗಲೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಈ ಬಗ್ಗೆ ಸಂಶೋಧನೆ ನಡೆಸಲು ಸ್ಟಾಕ್‌ಹೋಮ್‌ನ ಕರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು 2020 ರಲ್ಲಿ ಸೋಂಕಿನ ಮೊದಲ ಅಲೆಯಲ್ಲಿ ಕೋವಿಡ್​ ಸೋಂಕಿತ 100 ವ್ಯಕ್ತಿಗಳ ಮೇಲೆ ಪರೀಕ್ಷೆಗಳನ್ನು ನಡೆಸಿದ್ದಾರೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. ಈ ಸಂಶೋಧನೆ ಪ್ರಕಾರ, ಕೋವಿಡ್​​ನಿಂದ ಚೇತರಿಸಿಕೊಂಡ 18 ತಿಂಗಳ ನಂತರ, 4 ಪ್ರತಿಶತದಷ್ಟು ಜನರು ತಮ್ಮ ವಾಸನೆ ಗ್ರಹಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹಾಲುಣಿಸುವ ತಾಯಂದಿರಿಗೆ ಆಹಾರ ಸಲಹೆಗಳು..

ವಾಸನೆ ಗ್ರಹಿಕೆ ಕಳೆದುಕೊಳ್ಳಲು ಕಾರಣ: ನಾಲಿಗೆ ಕಾರ್ಯನಿರ್ವಹಿಸದಿರುವುದು ಆಗಿರಬಹುದು. ಆದರೆ ಇದು ಮೂಗಿಗೆ ಸಹ ಸಂಬಂಧಿಸಿದೆ. ವಾಸ್ತವದಲ್ಲಿ ಕೊರೊನಾ ಸೋಂಕಿನ ನಂತರ ವಾಸನೆ ಶಕ್ತಿ ಹದಗೆಡುತ್ತದೆ ಮತ್ತು ಇದು ನಿಮ್ಮ ರುಚಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಕೊರೊನಾ ಸೋಂಕಿನ ಸಮಯದಲ್ಲಿ, ವೈರಸ್ ಮೂಗಿನಲ್ಲಿರುವ ವಾಸನೆಯ ಕೋಶಗಳನ್ನು ನಾಶಪಡಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಕೋಶಗಳು ಮತ್ತೆ ರೂಪುಗೊಂಡರೂ, ಅನೇಕ ರೋಗಿಗಳಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡ ನಂತರ ದೀರ್ಘಕಾಲದವರೆಗೆ ವಾಸನೆ ಗ್ರಹಿಸುವ ಸಾಮರ್ಥ್ಯವು ಹಿಂದಿರುಗುವುದಿಲ್ಲ ಅಥವಾ ಶಾಶ್ವತವಾಗಿ ಕಳೆದುಹೋಗುತ್ತದೆ ಎನ್ನಲಾಗುತ್ತದೆ.

ಮೂರನೇ ಒಂದು ಭಾಗದಷ್ಟು ಜನರಲ್ಲಿ ವಾಸನೆಯನ್ನು ಗ್ರಹಿಸುವ ಸಾಮರ್ಥ್ಯವನ್ನು ಈ ಕೊರೊನಾ ಕಡಿಮೆ ಮಾಡಿದೆ. ಅಲ್ಲದೇ ಸುಮಾರು ಅರ್ಧದಷ್ಟು ಜನರು ಪರೋಸ್ಮಿಯಾಗೆ ತುತ್ತಾಗಿದ್ದಾರೆ. ಅಂದರೆ ಅವರಲ್ಲಿ ವಾಸನೆ ಗ್ರಹಿಕೆಯ ಸಾಮರ್ಥ್ಯವೇ ಇಲ್ಲದಂತಾಗಿದೆ. ಕೊರೊನಾದಿಂದ ಚೇತರಿಸಿಕೊಂಡವರಲ್ಲಿ 65 ಪ್ರತಿಶತದಷ್ಟು ಜನರು18 ತಿಂಗಳ ನಂತರ ವಾಸನೆ ಗ್ರಹಿಕೆ ಕಳೆದುಕೊಂಡಿದ್ದಾರೆ ಎಂದು ಈ ಅಧ್ಯಯನ ತಂಡವು ಹೇಳಿದೆ.

ಓಮಿಕ್ರಾನ್​ನಲ್ಲಿ ವಾಸನೆ ಅಥವಾ ರುಚಿಯ ನಷ್ಟ ಕಡಿಮೆ: ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿಯ ಪ್ರಕಾರ, ಡೆಲ್ಟಾ ರೂಪಾಂತರಕ್ಕಿಂತ ಓಮಿಕ್ರಾನ್​ನಲ್ಲಿ ವಾಸನೆ ಅಥವಾ ರುಚಿಯ ನಷ್ಟವು ಕಡಿಮೆ ಇದೆ. ಆದರೆ ಓಮಿಕ್ರಾನ್ ವಾಸನೆ ಗ್ರಹಿಕೆಯ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ ಎಂದು ಸಾಬೀತುಪಡಿಸುವ ಯಾವುದೇ ವಿಶ್ವಾಸಾರ್ಹ ಡೇಟಾ ಇಲ್ಲವೆಂದು ಕರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಶೋಧನೆಯ ನೇತೃತ್ವ ವಹಿಸಿದ್ದ ಜೋಹಾನ್ ಲುಂಡ್‌ಸ್ಟ್ರಾಮ್ ಹೇಳಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ವಾಸನೆಯ ತೀವ್ರ ನಷ್ಟವು ಖಿನ್ನತೆಗೆ ಕಾರಣವಾಗಬಹುದು ಮತ್ತು ಜನರು ತಮ್ಮ ಆಹಾರಕ್ರಮವನ್ನು ಬದಲಾಯಿಸಬಹುದು. ಅಲ್ಲದೇ ಇದು ತೂಕವನ್ನು ಹೆಚ್ಚಿಸಲು ಕಾರಣವಾಗಬಹುದು ಎಂದು ಲುಂಡ್‌ಸ್ಟ್ರಾಮ್ ಹೇಳಿದ್ದಾರೆ. ವಾಸನೆ ಗ್ರಹಿಕೆ ಶಕ್ತಿ ಕಡಿಮೆಯಾದ್ರೆ, ಜನರು ಹೆಚ್ಚಾಗಿ ಸಕ್ಕರೆ ಮತ್ತು ಕೊಬ್ಬನ್ನು ಸೇವಿಸಲು ಪ್ರಾರಂಭಿಸುತ್ತಾರೆ ಅಥವಾ ಕರಿದ ಆಹಾರಕ್ಕೆ ಹೆಚ್ಚು ಒತ್ತನ್ನು ನೀಡುತ್ತಾರೆ. ಈ ರೀತಿ ಆಹಾರವನ್ನು ಅವರು ತಿನ್ನುವುದರಿಂದ ಸ್ವಲ್ಪ ಆನಂದವನ್ನು ಪಡೆಯುತ್ತಾರೆ ಎಂದು ಅವರು ಹೇಳಿದ್ದಾರೆ.

Last Updated : Jan 25, 2022, 5:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.