ETV Bharat / bharat

ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ.. ರಾಕ್ಷಸನಾದ ಪಕ್ಕದ ಮನೆ ವ್ಯಕ್ತಿ! - ಮೊರೆನಾ ಬಾಲಕಿ ಅತ್ಯಾಚಾರ

ಅಂಗಡಿಗೆ ತಿಂಡಿ ತರಲು ಹೋಗಿದ್ದ ಬಾಲಕಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿ ಕೊಲೆಗೈದ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

5-year-old girl allegedly raped, murdered in Madhya Pradesh
ಮಧ್ಯಪ್ರದೇಶ ಬಾಲಕಿಯ ಅತ್ಯಾಚಾರ
author img

By

Published : Jul 6, 2021, 8:03 AM IST

ಮೊರೆನಾ(ಮಧ್ಯ ಪ್ರದೇಶ): ಪಕ್ಕದ ಮನೆಯ ವ್ಯಕ್ತಿವೋರ್ವ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ, ಬಾಲಕಿ ಮನೆ ಸಮೀಪದ ಅಂಗಡಿಗೆ ಬ್ರೆಡ್ ಖರೀದಿಗೆಂದು ತೆರಳಿದಾಗ ಪಾಪಿ ಈ ದುಷ್ಕೃತ್ಯ ಎಸಗಿದ್ದಾನೆ.

ಸುಮಾರು ಒಂದೂವರೆ ಗಂಟೆಯಾದರೂ ಬಾಲಕಿ ಮನೆಗೆ ಹಿಂದಿರುಗದ್ದರಿಂದ ಮನೆಯವರು ಹುಡುಕಾಟ ನಡೆಸಿದ್ದರು. ಆದರೂ ಬಾಲಕಿ ಪತ್ತೆಯಾಗಿರಲಿಲ್ಲ. ಕೊನೆಗೆ ಬಾಲಕಿಯ ಮನೆಯವರು ಆಕೆ ತೆರಳಿದ್ದ ಅಂಗಡಿಯ ಸಿಸಿಟಿವಿ ಪರಿಶೀಲಿಸಿದಾಗ ಪಕ್ಕದ ಮನೆಯ ವ್ಯಕ್ತಿ ಚೋಟು ತೋಮರ್​ ಎಂಬಾತ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿರುವುದು ಗೊತ್ತಾಗಿದೆ.

ಓದಿ : ಪೆಟ್ರೋಲ್​ ಸುರಿದು ಹೆಂಡ್ತಿ, ಮಗಳಿಗೆ ಬೆಂಕಿ ಹಚ್ಚಿದ ಗಂಡ: ಪತ್ನಿ ಸಾವು, ಮಗಳು ಗಂಭೀರ!

ಸಿಸಿಟಿವಿ ದೃಶ್ಯ ನೋಡಿದ ಸ್ಥಳೀಯರು ಚೋಟು ತೋಮರ್​​ನ ಮನೆಗೆ ನುಗ್ಗಿ ತಕ್ಷಣ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ಕೊಂಡೊಯ್ದಿದ್ದರು. ಅಲ್ಲಿ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಚೋಟು ತೋಮರ್ ಬಾಲಕಿ ಮೇಲೆ ಅತ್ಯಾಚಾರವಸೆಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಜಿಲ್ಲಾ ಎಸ್ಪಿ ಲಲಿತ್ ಶಕ್ಯಾವರ್, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಪತ್ತೆಗಾಗಿ ಶೋಧ ನಡೆಸಲಾಗ್ತಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.