ಪುರ್ನಿಯಾ (ಬಿಹಾರ): ಏಷ್ಯಾ ಮತ್ತು ಪೆಸಿಫಿಕ್ ದ್ವೀಪಗಳಲ್ಲಿ ಕಂಡುಬರುವ ಟೋಕೇ ಗೆಕ್ಕೊ ಹಲ್ಲಿಯನ್ನು ಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಐದು ಜನರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಹಲ್ಲಿಯನ್ನು ದೆಹಲಿಗೆ ಕಳ್ಳಸಾಗಣೆ ಮೂಲಕ ಕೊಂಡೊಯ್ಯಲಾಗುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಲ್ಲಿಯ ಅಂದಾಜು ಮೌಲ್ಯ 1 ಕೋಟಿ ರೂ.
ಬಿಹಾರದ ಬೈಸಿ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್ ಮೆಡಿಸಿನ್ ಹಾಲ್ ಎಂಬ ಹೆಸರಿನ ಮೆಡಿಕಲ್ ಶಾಪ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ನಂತರ ಬಿಹಾರ್ ಪೊಲೀಸರು ಹಲ್ಲಿಯನ್ನು ವಶಪಡಿಸಿಕೊಂಡಿದ್ದಾರೆ.
"ಈ ಹಲ್ಲಿಯನ್ನು ಪಶ್ಚಿಮ ಬಂಗಾಳದ ಕರಂಡಿಘಿಯಿಂದ ತರಲಾಗಿದೆ. ಪೊಲೀಸರು ಪ್ರಕರಣದಲ್ಲಿ ಇದುವರೆಗೆ ಐವರನ್ನು ಬಂಧಿಸಿದ್ದಾರೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಮೆಡಿಕಲ್ ಶಾಪ್ ಮಾಲೀಕರು ಮತ್ತು ಇತರರನ್ನು ಹುಡುಕುತ್ತಿದ್ದಾರೆ", ಎಂದು ಎಸ್‌ಡಿಪಿಒ ಆದಿತ್ಯ ಕುಮಾರ್ ತಿಳಿಸಿದರು.