ನವದೆಹಲಿ: ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಯುನಿಸೆಫ್ ಬಿಡುಗಡೆ ಮಾಡಿದ ಹೊಸ ವಿಶ್ಲೇಷಣೆಯ ಪ್ರಕಾರ, ಭಾರತ ಸೇರಿದಂತೆ ಐದು ದೇಶಗಳು ವಿಶ್ವದ ಒಟ್ಟು ಬಾಲ್ಯ ವಿವಾಹಗಳ ಪೈಕಿ ಅರ್ಧದಷ್ಟು ಪಾಲನ್ನು ಹೊಂದಿವೆ.
ವಿಶ್ವಾದ್ಯಂತ ಅಂದಾಜು 650 ಮಿಲಿಯನ್ ಹುಡುಗಿಯರು ಮತ್ತು ಮಹಿಳೆಯರು ಬಾಲ್ಯದಲ್ಲಿ ವಿವಾಹವಾಗಿದ್ದು, ಅದರಲ್ಲಿ ಅರ್ಧದಷ್ಟು ವಿವಾಹಗಳು ಬಾಂಗ್ಲಾದೇಶ, ಬ್ರೆಜಿಲ್, ಇಥಿಯೋಪಿಯಾ, ಭಾರತ ಮತ್ತು ನೈಜೀರಿಯಾದಲ್ಲಿ ನಡೆದಿವೆ ಎಂದು ಯುನಿಸೆಫ್ ವಿಶ್ಲೇಷಣೆ ತಿಳಿಸಿದೆ.
'ಕೋವಿಡ್-19: ಬಾಲ್ಯವಿವಾಹದ ವಿರುದ್ಧದ ಪ್ರಗತಿಗೆ ಬೆದರಿಕೆ' ಎಂಬ ವಿಶ್ಲೇಷಣೆಯ ಪ್ರಕಾರ, ಈ ದಶಕದ ಅಂತ್ಯದ ಮೊದಲು 10 ಮಿಲಿಯನ್ ಹೆಚ್ಚುವರಿ ಬಾಲ್ಯ ವಿವಾಹಗಳು ಸಂಭವಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಳೆದ ಒಂದು ದಶಕದಲ್ಲಿ 25 ದಶಲಕ್ಷ ಬಾಲ್ಯ ವಿವಾಹಗಳನ್ನು ತಪ್ಪಿಸಲಾಗಿದ್ದು, ಬಾಲ್ಯ ವಿವಾಹಗಳಿಂದಾಗಿ ಬಾಲಕಿಯರ ಜೀವನ ಗಂಭೀರ ಅಪಾಯದಲ್ಲಿದೆ ಎಂದು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಯನಿಸೆಫ್ ಎಚ್ಚರಿಸಿದೆ.
ತನ್ನ ಹಿಂದಿನ ವರದಿಯನ್ನು ಉಲ್ಲೇಖಿಸಿ ಯುನಿಸೆಫ್, ವಿಶ್ವದ ಮೂರು ಬಾಲ್ಯ ವಧುಗಳ ಪೈಕಿ ಒಬ್ಬರು ಭಾರತದವರಾಗಿದ್ದಾರೆ ಎಂದು ಹೇಳಿದೆ.