ETV Bharat / bharat

ಗುಂಪು ಘರ್ಷಣೆಯಲ್ಲಿ 5 ತಿಂಗಳ ಮಗುವಿನ ಮೇಲೂ ಹಲ್ಲೆ! ಆಸ್ಪತ್ರೆಯಲ್ಲಿ ಕೊನೆಯುಸಿರು - ಈಟಿವಿ ಭಾರತ ಕನ್ನಡ

ಬಿಹಾರದ ಗ್ರಾಮವೊಂದರಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿದ್ದು, ಐದು ತಿಂಗಳ ಹಸುಳೆ ಪ್ರಾಣ ಕಳೆದುಕೊಂಡಿದೆ.

Nalanda
ಬಲಿಯಾದ ಹಸುಗೂಸು
author img

By

Published : Jan 2, 2023, 1:33 PM IST

Updated : Jan 2, 2023, 1:38 PM IST

ನಳಂದಾ (ಬಿಹಾರ): ಬಿಹಾರದ ನಳಂದಾದಲ್ಲಿ ಹೃದಯವಿದ್ರಾವಕ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಇಲ್ಲಿನ ಚಂದೂರು ಗ್ರಾಮದಲ್ಲಿ ನಡೆದ ಎರಡು ಗುಂಪುಗಳ ನಡುವಿನ ಜಗಳದ ವೇಳೆ 5 ತಿಂಗಳ ಶಿಶುವನ್ನು ಹೊಡೆದು ಕೊಲ್ಲಲಾಗಿದೆ.

ಹಳೆಯ ವೈಷಮ್ಯದಿಂದ ದುಷ್ಕೃತ್ಯ: ಕೆಲವು ದಿನಗಳ ಹಿಂದೆ ಗ್ರಾಮದಲ್ಲಿ ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಮೃತ ಮಗುವಿನ ತಂದೆ ಮಧ್ಯಪ್ರವೇಶಿಸಿದ್ದರು. ಇದರಿಂದ ಕೋಪಗೊಂಡಿದ್ದ ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ದಾಳಿ ಮಾಡಿದ್ದಾನೆ. ಈ ವೇಳೆ ಐವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಮಗು ಸಾವನ್ನಪ್ಪಿದೆ. ಆರೋಪಿ ಘಟನೆಯ ನಂತರ ಪರಾರಿಯಾಗಿದ್ದಾನೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

'ಚಿಕಿತ್ಸೆ ಪಡೆಯುತ್ತಿದ್ದಾಗ ಮಗು ಸಾವನ್ನಪ್ಪಿದೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ. ಗ್ರಾಮಸ್ಥರು ಹಿಂದಿನ ಜಗಳದ ಬಗ್ಗೆ ಹೇಳಿದ್ದಾರೆ. ಶೀಘ್ರವೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಮೆಕ್ಸಿಕೊ ಗಡಿ ಜೈಲಿನ ಮೇಲೆ ಗುಂಡಿನ ದಾಳಿ: 10 ಗಾರ್ಡ್ಸ್‌, ನಾಲ್ವರು ಕೈದಿಗಳ ಹತ್ಯೆ

Last Updated : Jan 2, 2023, 1:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.