ETV Bharat / bharat

ಸ್ಟೌನಿಂದ ಸುಟ್ಟು ಭಸ್ಮವಾದ ಮನೆ: ಒಂದೇ ಕುಟುಂಬದ ಐವರು ಸಜೀವ ದಹನ - fire accident in Uttara Pradesh

ಉತ್ತರಪ್ರದೇಶದಲ್ಲಿ ಮನೆಗೆ ಹೊತ್ತಿಕೊಂಡ ಬೆಂಕಿ- ಒಂದೇ ಕುಟುಂಬದ ಐವರು ಸಜೀವ ದಹನ- ಮೌ ಜಿಲ್ಲೆಯ ಶಹಾಪುರದಲ್ಲಿ ಘಟನೆ- ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ

5-members-of-family-die-
ಒಂದೇ ಕುಟುಂಬದ ಐವರು ಸಜೀವ ದಹನ
author img

By

Published : Dec 28, 2022, 6:52 AM IST

ಮೌ (ಉತ್ತರ ಪ್ರದೇಶ): ಅಡುಗೆ ಮಾಡಲು ಬಳಸುವ ಒಲೆಯ(ಸ್ಟೌ) ಬೆಂಕಿ ಇಡೀ ಮನೆಯನ್ನು ಸುಟ್ಟು ಭಸ್ಮ ಮಾಡಿದ್ದು, ದುರ್ಘಟನೆಯಲ್ಲಿ ಒಂದೇ ಕುಟುಂಬದ ಐವರು ಸಜೀವ ದಹನವಾದ ಘಟನೆ ಉತ್ತರಪ್ರದೇಶದ ಮೌ ಜಿಲ್ಲೆಯ ಶಹಾಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ಮಂಗಳವಾರ ರಾತ್ರಿ ಅಡುಗೆ ಮನೆಯ ಸ್ಟೌನಿಂದಾಗಿ ಹೊತ್ತಿಕೊಂಡ ಬೆಂಕಿ ಇಡೀ ಮನೆಗೆ ವ್ಯಾಪಿಸಿದೆ. ಇದರಿಂದ ಮನೆಯೊಳಗಿದ್ದ ಮಹಿಳೆ, ಪುರುಷ, 3 ಅಪ್ರಾಪ್ತ ವಯಸ್ಸಿನ ಮಕ್ಕಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಹೊರಬರಲಾಗದೇ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ತಿಳಿದ ಬಳಿಕ ಅಗ್ನಿಶಾಮಕ ದಳ, ವೈದ್ಯಕೀಯ ಸಿಬ್ಬಂದಿಯೊಂದಿಗೆ ಪೊಲೀಸ್​ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿವೆ.

ಬೆಂಕಿಯನ್ನು ನಂದಿಸಿ ಮೃತದೇಹಗಳನ್ನು ಮನೆಯಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಪರಿಹಾರವಾಗಿ ತಲಾ 4 ಲಕ್ಷ ರೂಪಾಯಿ ನೆರವು ನೀಡುವುದಾಗಿ ಸರ್ಕಾರ ಘೋಷಿಸಿದೆ.

ಓದಿ: ಬಂಡೀಪುರಕ್ಕೆ ತೆರಳುತ್ತಿದ್ದಾಗ ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.