ಹಜಾರಿಭಾಗ್(ಜಾರ್ಖಂಡ್): ಕೊಳದಲ್ಲಿ ಮುಳುಗಿ ಐವರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಹಜಾರಿಭಾಗ್ ಜಿಲ್ಲೆಯ ಗದೋಖರ್ ಗ್ರಾಮದಲ್ಲಿ ನಡೆದಿದೆ.
ನಾಲ್ವರು ಬಾಲಕಿಯರು ಮತ್ತು ಓರ್ವ ಬಾಲಕ ಮೃತಪಟ್ಟಿದ್ದು, ಎಲ್ಲರೂ ಕೂಡಾ 12ರಿಂದ 13 ವರ್ಷದವರಾಗಿದ್ದಾರೆ. ಕಾಜಲ್ ಕುಮಾರಿ (12), ಗೋಲು ಕುಮಾರ್ (12), ನಿವಿತಾ ಕುಮಾರಿ (13), ದುರ್ಗ್ ಕುಮಾರಿ (12), ರಿಯಾ ಕುಮಾರಿ (12) ಮೃತಪಟ್ಟವರಾಗಿದ್ದಾರೆ.
ಸ್ನಾನ ಮಾಡಲು ಕೊಳದ ಬಳಿ ತೆರಳಿದ್ದ ಮಕ್ಕಳು ಸಾವನ್ನಪ್ಪಿದ್ದು, ಎಲ್ಲಾ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.