ETV Bharat / bharat

3,648 ಬಾಲಕಿಯರು ಸೇರಿ 4,169 ಮಕ್ಕಳು ನಾಪತ್ತೆ: ಲಾಕ್​ಡೌನ್‌ನಲ್ಲಿ ಮಾನವ ಕಳ್ಳಸಾಗಣೆ ವಿಪರೀತ

author img

By

Published : Jul 19, 2021, 10:53 PM IST

ಲಾಕ್​ಡೌನ್ ಸಂದರ್ಭದಲ್ಲಿ ಮಧ್ಯಪ್ರದೇಶದಲ್ಲಿ ಮಾನವ ಕಳ್ಳಸಾಗಣೆ ಜೋರಾಗಿ ನಡೆದಿರುವುದು ತಿಳಿದು ಬಂದಿದ್ದು, ಸಾವಿರಾರು ಬಾಲಕಿ-ಬಾಲಕರು ನಾಪತ್ತೆಯಾಗಿದ್ದಾರೆ.

madhya pradesh human trafficking
madhya pradesh human trafficking

ಭೋಪಾಲ್​(ಮಧ್ಯಪ್ರದೇಶ): ಕೊರೊನಾ ವೈರಸ್​ ಸಂದರ್ಭದಲ್ಲಿ ಎಲ್ಲವೂ ಬಂದ್​ ಆಗಿತ್ತು. ವಾಹನ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿತ್ತು. ಆದರೆ ಈ ಸಂದರ್ಭದಲ್ಲೇ ಮಧ್ಯಪ್ರದೇಶದಲ್ಲಿ ಮಾನವ ಕಳ್ಳಸಾಗಣೆ ಬಲು ಜೋರಾಗಿ ನಡೆದಿರುವುದು ಬೆಳಕಿಗೆ ಬಂದಿದೆ. 2020ರ ಏಪ್ರಿಲ್​ ತಿಂಗಳಿಂದ 2021ರ ಜೂನ್​ ತಿಂಗಳಲ್ಲಿ ಒಟ್ಟು 4,169 ಮಕ್ಕಳ ಕಳ್ಳಸಾಗಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮಧ್ಯಪ್ರದೇಶದಲ್ಲಿ ಮಾನವ ಕಳ್ಳಸಾಗಣೆ ತಡೆಯಲು 'ಆಪರೇಷನ್​ ಮುಸ್ಕಾನ್' ನಡೆಸಲಾಗುತ್ತಿದ್ದು, ಈ​​ ಮೂಲಕ 1,249 ಮಕ್ಕಳ ರಕ್ಷಣೆ ಮಾಡಲಾಗಿದೆ. ಲಾಕ್​ಡೌನ್​ ಸಂದರ್ಭದಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಗಾಗಿ ಕೂಡ ಇಷ್ಟೊಂದು ಮಕ್ಕಳ ಕಳ್ಳಸಾಗಣೆ ಮಾಡಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಕೇವಲ ಏಪ್ರಿಲ್​-ಮೇ ತಿಂಗಳಲ್ಲಿ ರಾಜ್ಯದಿಂದ 1,574 ಮಕ್ಕಳು ನಾಪತ್ತೆಯಾಗಿದ್ದಾರೆ. ಜೂನ್ ತಿಂಗಳಲ್ಲಿ 912 ಬಾಲಕಿಯರು ಸೇರಿ 1,068 ಮಕ್ಕಳು ನಾಪತ್ತೆಯಾಗಿದ್ದಾರೆ.

ಮಧ್ಯಪ್ರದೇಶದಲ್ಲಿ ಸದ್ಯ ಅನ್​ಲಾಕ್​ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಹೆಚ್ಚಿನ ಮಕ್ಕಳು ಕಣ್ಮರೆಯಾಗುತ್ತಿರುವುದು ಕಂಡು ಬಂದಿದೆ. ಇದೇ ತಿಂಗಳು ರಾಜ್ಯಾದ್ಯಂತ 832 ಮಕ್ಕಳು ಕಾಣೆಯಾಗಿದ್ದು, ಇದರಲ್ಲಿ 92 ಬಾಲಕರು ಹಾಗೂ 740 ಬಾಲಕಿರು ಸೇರಿಕೊಂಡಿದ್ದಾರೆ. ಆದರೆ 543 ಮಕ್ಕಳ ರಕ್ಷಣೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಸಂಚಾರದ ವೇಳೆ ದಿಢೀರ್‌ ಕುಸಿದ ರಸ್ತೆ; ನವದೆಹಲಿಯಲ್ಲಿ ಹೊಂಡ ಸೇರಿದ ಕಾರು- ವಿಡಿಯೋ

2020ರ ಏಪ್ರಿಲ್ ತಿಂಗಳಲ್ಲಿ 271 ಮಕ್ಕಳು ಕಾಣೆಯಾಗಿದ್ದು, ಇದರಲ್ಲಿ 220 ಬಾಲಕಿಯರು ಸೇರಿಕೊಂಡಿದ್ದರು, ಅದೇ ರೀತಿ 2020ರ ಮೇ ತಿಂಗಳಲ್ಲಿ 506 ಮಕ್ಕಳಲ್ಲಿ 443 ಬಾಲಕಿಯರು ಸೇರಿಕೊಂಡಿದ್ದಾಗಿ ವರದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.