ETV Bharat / bharat

ಕೊರೊನಾ ಎದುರಿಸಲು ಭಾರತಕ್ಕೆ ಯಾವೆಲ್ಲಾ ರಾಷ್ಟ್ರಗಳು ಆಕ್ಸಿಜನ್​ ಪೂರೈಸುತ್ತಿವೆ?

ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಎದುರಿಸಲು ಭಾರತವು ಸುಮಾರು 550 ಆಮ್ಲಜನಕ ಉತ್ಪಾದಿಸುವ ಸ್ಥಾವರಗಳು, 4,000 ಆಮ್ಲಜನಕ ಸಾಂದ್ರಕಗಳು ಮತ್ತು 10,000 ಆಮ್ಲಜನಕ ಸಿಲಿಂಡರ್‌ಗಳನ್ನು ವಿದೇಶದಿಂದ ಪಡೆಯಲು ಎದುರು ನೋಡುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಶಿರಿಂಗ್ಲಾ ಹೇಳಿದರು.

oxygen
oxygen
author img

By

Published : Apr 29, 2021, 5:31 PM IST

ನವದೆಹಲಿ: ಭಾರತವು ಆಮ್ಲಜನಕದ ಆಮದಿಗೆ ಆದ್ಯತೆ ನೀಡಿದ್ದು, 40 ದೇಶಗಳು ತಮ್ಮ ಬೆಂಬಲದ ಪ್ರತಿಜ್ಞೆ ಮಾಡಿವೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶಿರಿಂಗ್ಲಾ ಹೇಳಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಎದುರಿಸಲು ಭಾರತವು ಸುಮಾರು 550 ಆಮ್ಲಜನಕ ಉತ್ಪಾದಿಸುವ ಸ್ಥಾವರಗಳು, 4,000 ಆಮ್ಲಜನಕ ಸಾಂದ್ರಕಗಳು ಮತ್ತು 10,000 ಆಮ್ಲಜನಕ ಸಿಲಿಂಡರ್‌ಗಳನ್ನು ವಿದೇಶದಿಂದ ಪಡೆಯಲು ಎದುರು ನೋಡುತ್ತಿದೆ ಎಂದು ಶಿಂಗ್ಲಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಭಿವೃದ್ಧಿ ಹೊಂದಿದ ದೇಶಗಳು ಮಾತ್ರವಲ್ಲದೆ ನಮ್ಮ ನೆರೆಹೊರೆಯ ಮಾರಿಷಸ್, ಬಾಂಗ್ಲಾದೇಶ, ಭೂತಾನ್ ದೇಶಗಳೂ ಸಹ 40ಕ್ಕೂ ಹೆಚ್ಚು ರಾಷ್ಟ್ರಗಳು ನೆರವು ನೀಡಲು ಮುಂದೆ ಬಂದಿವೆ. 700 ಸಾಂದ್ರತೆಗಳೊಂದಿಗೆ ಐರ್ಲೆಂಡ್‌ನಿಂದ ವಿಮಾನ ಬರಲಿದೆ. ಫ್ರಾನ್ಸ್‌ನ ವಿಮಾನ ಶನಿವಾರ ಆಗಮಿಸಲಿದೆ ಎಂದರು.

ನಾವು ನಾಳೆ ಮತ್ತು ಮುಂದಿನ ಎರಡು ದಿನಗಳಲ್ಲಿ ಅಮೆರಿಕದಿಂದ ಮೂರು ವಿಶೇಷ ವಿಮಾನಗಳನ್ನು ನಿರೀಕ್ಷಿಸುತ್ತಿದ್ದೇವೆ. ಅಧ್ಯಕ್ಷ ಬೈಡನ್ ಪ್ರಧಾನ ಮಂತ್ರಿಯೊಂದಿಗೆ ಮಾತನಾಡಿದ್ದು, ಹೆಚ್ಚಿನ ಸಹಾಯ ಮಾಡುವ ಭರವಸೆ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಯುನೈಟೆಡ್ ಅರಬ್ ಎಮಿರೇಟ್ಸ್, ಬಾಂಗ್ಲಾದೇಶ ಮತ್ತು ಉಜ್ಬೇಕಿಸ್ತಾನ್ ಮುಂತಾದ ದೇಶಗಳಿಂದ ಅದನ್ನು ಪಡೆಯಲು ಅನ್ವೇಷಿಸುವುದರ ಜೊತೆಗೆ ಈಜಿಪ್ಟ್‌ನಿಂದ 400,000 ಯುನಿಟ್ ರೆಮ್‌ಡೆಸಿವಿರ್ ಔಷಧಿಯನ್ನು ಖರೀದಿಸಲು ಭಾರತ ಎದುರು ನೋಡುತ್ತಿದೆ ಎಂದರು.

ನಾವು ಸಾಮಾನ್ಯವಾಗಿ ದಿನಕ್ಕೆ 67,000 ಡೋಸ್ ರೆಮ್‌ಡೆಸಿವಿರ್ ತಯಾರಿಸುತ್ತೇವೆ. ಆದರೆ ಇಂದಿನ ಅವಶ್ಯಕತೆ ದಿನಕ್ಕೆ 2-3 ಲಕ್ಷಗಳ ನಡುವೆ ಇರಬಹುದು. ಆದ್ದರಿಂದ ನಾವು ಅಂತರವನ್ನು ಕಡಿಮೆಗೊಳಿಸಬೇಕು. ಇದು ನಮ್ಮ ತಯಾರಕರಿಗೆ ಚೆನ್ನಾಗಿ ತಿಳಿದಿರುವ ಸಂಗತಿ. ಅವುಗಳ ನೈಜ ಉತ್ಪಾದನೆ ಹೆಚ್ಚಿಸಬೇಕಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.