ETV Bharat / bharat

ಆಮ್ಲಜನಕ ಸಿಗದೆ ಜೈಪುರದ ಆಸ್ಪತ್ರೆಯಲ್ಲಿ ನಾಲ್ವರು ಸೋಂಕಿತರು ಸಾವು - ಜೈಪುರದಲ್ಲಿ ಕೊರೊನಾ ರೋಗಿಗಳ ಸಾವು

ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ನಾಲ್ವರು ಕೋವಿಡ್ ರೋಗಿಗಳು ಮೃತಪಟ್ಟಿರುವ ಘಟನೆ ಸಂಭವಿಸಿದೆ.

4-patients-died-due-to-lack-of-oxygen-in-a-private-hospital-of-jaipur
ಜೈಪುರದಲ್ಲಿ ಆಮ್ಲಜನಕ ಕೊರತೆ: ಖಾಸಗಿ ಆಸ್ಪತ್ರೆಯಲ್ಲಿ ನಾಲ್ವರು ಕೊರೊನಾ ಸೋಂಕಿತರ ಸಾವು
author img

By

Published : Apr 28, 2021, 8:23 AM IST

ಜೈಪುರ(ರಾಜಸ್ಥಾನ): ಆಮ್ಲಜನಕದ ಕೊರತೆಯಿಂದಾಗಿ ನಾಲ್ವರು ಕೋವಿಡ್ ಸೋಂಕಿತರು ಜೈಪುರ ಜಿಲ್ಲೆಯ ಕಲವಾಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಮೃತಪಟ್ಟ ನಾಲ್ವರು ರೋಗಿಗಳ ಆರೋಗ್ಯ ಪರಿಸ್ಥಿತಿ ಗಂಭೀರವಾಗಿತ್ತು. ಇದ್ರ ಜೊತೆಗೆ ಆಮ್ಲಜನಕರ ಕೊರತೆಯಿಂದಾಗಿ ಅವರು ಮೃತಪಟ್ಟಿರುವುದಾಗಿ ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ನಾಲ್ವರು ರೋಗಿಗಳ ದಾರುಣ ಸಾವು

ರಾತ್ರಿ 9 ಗಂಟೆಯ ವೇಳೆಗೆ ದುರ್ಘಟನೆ ನಡೆದಾಗ ಕೆಲವು ರೋಗಿಗಳು ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಆಸ್ಪತ್ರೆಯಿಂದ ಓಡಿಹೋಗಿದ್ದಾರೆ. ಮೊದಲಿಗೆ ಇಬ್ಬರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದ್ದು, ತದನಂತರ ಒಟ್ಟು ನಾಲ್ವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.