ಕೊಡೆರ್ಮಾ (ಜಾರ್ಖಂಡ್): ಜಾರ್ಖಂಡ್ನ ಕೊಡೆರ್ಮಾದಲ್ಲಿನ ಥರ್ಮಲ್ ವಿದ್ಯುತ್ ಸ್ಥಾವರದಲ್ಲಿ ಗುರುವಾರ ಚಿಮಣಿಯಲ್ಲಿನ ಲಿಫ್ಟ್ ಕೇಬಲ್ ಮುರಿದು ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಕೊಡೆರ್ಮಾ ಥರ್ಮಲ್ ಪವರ್ ಪ್ಲಾಂಟ್ ಆವರಣದಲ್ಲಿ ಚಿಮಣಿ ನಿರ್ಮಿಸಲಾಗುತ್ತಿದೆ. ಕಾರ್ಮಿಕರು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ವೇಳೆ ಲಿಫ್ಟ್ನ ವೈರ್ಗಳು ಮುರಿದು ಬಿದ್ದಿದ್ದು, ಈ ವೇಳೆ ನಾಲ್ವರು ಗಾಯಗೊಂಡಿದ್ದರು. ಇವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೆ ನಾಲ್ವರೂ ಸಾವನ್ನಪ್ಪಿದ್ದರು. ಚಿಮಣಿಯ ಮೇಲೆ ಸಿಲುಕಿದ್ದ 20 ಕಾರ್ಮಿಕರನ್ನು ರಕ್ಷಿಸಿ, ಕೆಳಗೆ ತರಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಗೌರವ್ ತಿಳಿಸಿದ್ದಾರೆ.
ಕರ್ನಾಟಕದ ಇಂಜಿನಿಯರ್ ಸಾವು
ಮೃತ ಕಾರ್ಮಿಕರಲ್ಲಿ ಒಬ್ಬರು ರಾಯಚೂರು ಮೂಲದ ಇಂಜಿನಿಯರ್ ಕಾರ್ತಿಕ್ ಸಾಗರ್ ಎಂದು ಗುರುತಿಸಲಾಗಿದೆ. ಉಳಿದವರನ್ನು ಮಹಾರಾಷ್ಟ್ರದ ವಿಜಯ ಕನ್ಸ್ಟ್ರಕ್ಷನ್ ಕಂಪನಿಯ ಆಪರೇಟರ್ ಕೃಷ್ಣ ಪ್ರಸಾದ್ ಕೊಡಲಿ, ಅದೇ ಕಂಪನಿಯ ಎಂಡಿ ಡಾ.ವಿನೋದ್ ಕುಮಾರ್ ಚೌಧರಿ, ಬಿಹಾರ ಮೂಲದ ಅಧಿಕಾರಿ ನವೀನ್ ಕುಮಾರ್ ಎಂದು ಗುರುತಿಸಲಾಗಿದೆ.