ಅಲ್ವಾರ್(ರಾಜಸ್ಥಾನ): ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ದೆಹಲಿಯ ನಂತರ ಇದೀಗ ರಾಜಸ್ಥಾನದ ಅಲ್ವಾರ್ನಲ್ಲೂ ಬುಲ್ಡೋಜರ್ ಸದ್ದು ಮಾಡಿದೆ. ಸುಮಾರು 300 ವರ್ಷಗಷ್ಟು ಹಳೆಯ ಶಿವನ ದೇವಾಲಯ ನೆಲಸಮ ಮಾಡಲಾಗಿದೆ. ಈ ನಿರ್ಧಾರಕ್ಕೆ ಬಿಜೆಪಿ ಕೆಂಡಾಮಂಡಲವಾಗಿದ್ದು, ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪುರಾತನ ಕಾಲದ ದೇವಾಲಯವನ್ನು ಧ್ವಂಸ ಮಾಡಲಾಗಿದ್ದು, ಇದು ರಾಜಸ್ಥಾನ ಸರ್ಕಾರದ ಸೆಕ್ಯುಲರಿಸಂ ಎಂದು ಟೀಕಿಸಿದೆ.
ದೇವಾಲಯ ನೆಮಸಮ ಮಾಡುತ್ತಿರುವ ವಿಡಿಯೋ ತುಣುಕೊಂದನ್ನು ಟ್ವೀಟ್ ಮಾಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕರೌಲಿ ಮತ್ತು ಜಹಾಂಗೀರಪುರಿಯಲ್ಲಿ ಹಿಂದೂಗಳ ನಂಬಿಕೆಗೆ ಧಕ್ಕೆ ತಂದಿರುವ ಕಾಂಗ್ರೆಸ್ ಇದೀಗ ರಾಜಸ್ಥಾನದಲ್ಲೂ ಈ ರೀತಿಯಾಗಿ ನಡೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಘಡದ ಅಲ್ವಾರ್ನಲ್ಲಿರುವ ಪುರಾತನ ಹಿಂದೂ ದೇವಾಲಯ ನೆಲಸಮ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಿವೆ. ಆದರೆ, ಇದುವರೆಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ದೇವರ ವಿಗ್ರಹ ಧ್ವಂಸಗೊಳಿಸಿರುವ ಕಾರಣ ಜನರು ಕೋಪಗೊಂಡು ಪ್ರತಿಭಟನೆ ನಡೆಸಲು ಮುಂದಾಗಿದ್ದಾಗ ಅವರನ್ನು ಬಲವಂತವಾಗಿ ಸ್ಥಳದಿಂದ ಓಡಿಸಲಾಗಿದೆ ಎಂದಿದ್ದಾರೆ.
ರಾಜಸ್ಥಾನದಲ್ಲಿ ಇಂತಹ ಪ್ರಕರಣ ಮೇಲಿಂದ ಮೇಲೆ ಕೇಳಿ ಬರಲು ಶುರುವಾಗಿವೆ. ರಾಜ್ಗಢ ಶಾಸಕ ಹೋಹ್ರಿ ಲಾಲ್ ಮೀನಾ ಮುನ್ಸಿಪಲ್ ಇಒ ಬನ್ವಾರಿ ಲಾಲ್ ಮೀನಾ ಪಿತೂರಿ ಇದರಲ್ಲಿ ಎದ್ದು ಕಾಣುತ್ತಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿಲ್ಲ. ರಾಜಕೀಯ ಪ್ರಭಾವ ಬಳಸಿಕೊಂಡು ಈ ಪ್ರಕರಣ ಹತ್ತಿಕ್ಕುವ ಯತ್ನ ನಡೆದಿದೆ ಎಂದು ಬಿಜೆಪಿ ಆರೋಪ ಮಾಡಿದೆ.