ಪೋರಬಂದರ್(ಗುಜರಾತ್): ಜಮ್ಮು ಕಾಶ್ಮೀರದಲ್ಲಿ ಸದಾ ಉಪಟಳ ನೀಡುವ ಪಾಕಿಸ್ತಾನ ಈಗ ಜಲಗಡಿಯಲ್ಲಿಯೂ ಕಿರುಕುಳ ಮುಂದುವರೆಸುತ್ತಿದೆ. ಭಾರತದ ಜಲಗಡಿಯಲ್ಲಿದ್ದ ಸುಮಾರು 30 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಅಪಹರಿಸಿದೆ.
ಪಾಕಿಸ್ತಾನದ ಕಡಲ ಭದ್ರತಾ ಪಡೆ 5 ದೋಣಿಗಳು ಸೇರಿದಂತೆ 30 ಮೀನುಗಾರರನ್ನು ಶನಿವಾರ ಅಪಹರಿಸಿದೆ ಎಂದು ಮೂಲಗಳು ತಿಳಿಸಿವೆ. ಪೋರಬಂದರ್, ವನಕ್ಬರಾ, ಓಖಾ ಮೂಲದ ತಲಾ ಒಂದು ಬೋಟ್ ಮತ್ತು ಗಿರ್ ಸೋಮನಾಥ್ಗೆ ಸೇರಿದ 2 ಬೋಟ್‌ಗಳನ್ನು ಅಪಹರಿಸಲಾಗಿದೆ ಎಂದು ತಿಳಿದುಬಂದಿದೆ.
ಕಳೆದ 25 ದಿನಗಳಲ್ಲಿ ಒಟ್ಟು 120 ಭಾರತೀಯ ಮೀನುಗಾರರಿದ್ದ 20 ಬೋಟ್‌ಗಳನ್ನು ಪಾಕಿಸ್ತಾನ ಮೆರೈನ್ ಫೋರ್ಸ್ ಅಪಹರಿಸಿದ್ದರೂ, ಈ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಿರುವ ಬಗ್ಗೆ ಮೀನುಗಾರರಲ್ಲಿ ಅಸಮಾಧಾನವಿದೆ ಎನ್ನಲಾಗಿದೆ. ಪ್ರಸ್ತುತ ಸಾಕಷ್ಟು ಮಂದಿಯನ್ನು ಪಾಕಿಸ್ತಾನದ ಜೈಲುಗಳಲ್ಲಿ ಇರಿಸಲಾಗಿದೆ. ನ್ಯಾಷನಲ್ ಫೀ ಫೋರಂನ ಮನೀಷ್ ಲೋಧಾರಿ ಪಾಕಿಸ್ತಾನದ ಜೈಲುಗಳಲ್ಲಿರುವ ಮೀನುಗಾರರನ್ನು ಬಿಡುಗಡೆ ಮಾಡಲು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬೀಚ್ನಲ್ಲಿ ಹೆಲಿಕಾಪ್ಟರ್ ಪತನ, ಜನರು ಸೇಫ್: ವಿಡಿಯೋ ನೋಡಿ