ಕಿನ್ನೌರ್ (ಹಿಮಾಚಲ ಪ್ರದೇಶ): ಜಿಲ್ಲೆಯಲ್ಲಿ ಸಂಭವಿಸಿದ ಭಾರಿ ಹಿಮಪಾತದಿಂದಾಗಿ ಚಾರಣಕ್ಕೆ ತೆರಳಿದ್ದ ಮೂವರು ಮೃತಪಟ್ಟಿದ್ದಾರೆ, 10 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರ ಮೂಲದ 12 ಮಂದಿ ಹಾಗೂ ಪಶ್ಚಿಮ ಬಂಗಾಳದ ಒಬ್ಬರು ಅಕ್ಟೋಬರ್ 17 ರಂದು ಕಿನ್ನೌರ್ ಜಿಲ್ಲೆಯ ರೋಹ್ರುವಿನಿಂದ ಬುರುವಾ ಹಳ್ಳಿಗೆ ಪ್ರವಾಸ ಕೈಗೊಂಡಿದ್ದರು. ಬುರುವಾ ಪ್ರದೇಶದಲ್ಲಿ ಹೆಚ್ಚು ಹಿಮಪಾತವಾಗಿದ್ದು, 15 ಸಾವಿರ ಅಡಿಯ ಮೇಲೆ ತೆರಳಿದ್ದ ತಂಡದಲ್ಲಿ ಮೂವರು ಮೃತಪಟ್ಟಿದ್ದಾರೆ. ಮೃತದೇಹಗಳು ಹಿಮದಲ್ಲಿ ಹೂತು ಹೋಗಿದ್ದು, ಐಟಿಬಿಪಿ ಸಿಬ್ಬಂದಿ ಶೋಧ ನಡೆಸುತ್ತಿದೆ. ಮೃತರನ್ನು ರಾಜೇಂದ್ರ ಪಾಠಕ್, ಅಶೋಕ್ ಭಲೇರಾವ್ ಮತ್ತು ದೀಪಕ್ ರಾವ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಬೈಕ್ಗೆ ಟಿಪ್ಪರ್ ಡಿಕ್ಕಿಯಾಗಿ ತಾಯಿ-ಮಗು ಸಾವು: ಹೆಲ್ಮೆಟ್ನಿಂದ ಉಳಿಯಿತು ಚಾಲಕನ ಪ್ರಾಣ
ಕಳೆದ ವಾರವಷ್ಟೇ, ಕಿನ್ನೌರ್ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದ ಉತ್ತರಾಖಂಡದ ಐವರು ಪ್ರವಾಸಿಗರು ಭಾರಿ ಹಿಮಪಾತಕ್ಕೆ ಸಿಲುಕಿ ಮೃತಪಟ್ಟಿದ್ದರು.