ETV Bharat / bharat

ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು: ಜಮ್ಮು ಕಾಶ್ಮೀರದಲ್ಲಿ ಮೂವರು ಸರ್ಕಾರಿ ನೌಕರರು ವಜಾ

author img

By

Published : Jul 17, 2023, 2:23 PM IST

ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ ಗಂಭೀರ ಆರೋಪದ ಮೇಲೆ ಮೂವರು ಸರ್ಕಾರಿ ನೌಕರರನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ವಜಾಗೊಳಿಸಿದೆ.

sacked
ಮೂವರು ಸರ್ಕಾರಿ ನೌಕರರು ಸೇವೆಯಿಂದ ವಜಾ

ಶ್ರೀನಗರ : ಉಗ್ರವಾದ ಮತ್ತು ಪ್ರತ್ಯೇಕತಾವಾದವನ್ನು ಬೆಂಬಲಿಸಿ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತಿದ್ದ ಆರೋಪದ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಮೂವರು ಸರ್ಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಿ ಕಠಿಣ ಕ್ರಮ ಜರುಗಿಸಿದೆ. ಈ ಮೂಲಕ ಕಳೆದ ಮೂರು ವರ್ಷಗಳಲ್ಲಿ ವಜಾಗೊಂಡಿರುವ ನೌಕರರ ಸಂಖ್ಯೆ 52ಕ್ಕೆ ತಲುಪಿದೆ.

ವರದಿಗಳ ಪ್ರಕಾರ, ಲೆಫ್ಟಿನೆಂಟ್ ಗವರ್ನರ್ ಆಡಳಿತವು ಈ ಉದ್ಯೋಗಿಗಳನ್ನು ಭಾರತದ ಸಂವಿಧಾನದ 311ನೇ ವಿಧಿಯ ಅಡಿಯಲ್ಲಿ ವಜಾಗೊಳಿಸಿದೆ. ಕಾಶ್ಮೀರ ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಫಹೀಮ್ ಅಸ್ಲಾಂ, ಹಣಕಾಸು ಇಲಾಖೆಯ ಉದ್ಯೋಗಿ (ಕಂದಾಯ ಅಧಿಕಾರಿ) ಮಾರ್ವತ್ ಹುಸೇನ್ ಮಿರ್ ಮತ್ತು ಪೊಲೀಸ್ ಕಾನ್ಸ್‌ಟೇಬಲ್ ಅರ್ಷದ್ ಅಹ್ಮದ್ ಥೋಕರ್ ಇಂದು ವಜಾಗೊಂಡ ಉದ್ಯೋಗಿಗಳು.

ಫಹೀಮ್ ಅಸ್ಲಾಂ ಮಾಜಿ ಪತ್ರಕರ್ತನಾಗಿದ್ದು, ಶ್ರೀನಗರದ ಹಜರತ್ ಬಿಲ್ ಪ್ರದೇಶಕ್ಕೆ ಸೇರಿದವನಾಗಿದ್ದಾನೆ. ಈತನನ್ನು ವಿಶ್ವವಿದ್ಯಾಲಯಕ್ಕೆ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ನೇಮಿಸಲಾಗಿತ್ತು. ಮಾರ್ವತ್ ಹುಸೇನ್ ಎಂಬಾತ ಪುಲ್ವಾಮಾ ಜಿಲ್ಲೆಯ ಪನ್ಪುರ್ ಪಟ್ಟಣಕ್ಕೆ ಸೇರಿದವನಾಗಿದ್ದು, ರಾಜಕೀಯ ಪಕ್ಷಗಳು ಮತ್ತು ಕಾರ್ಮಿಕ ಸಂಘಗಳೊಂದಿಗೆ ಸಂಪರ್ಕ ಹೊಂದಿದ್ದಾನೆ. ಅರ್ಷದ್ ಅಹ್ಮದ್ ಥೋಕರ್ ಬುದ್ಗಾಮ್ ಜಿಲ್ಲೆಯ ಚಡೋರಾ ಪ್ರದೇಶದ ನಿವಾಸಿ.

ಇದನ್ನೂ ಓದಿ : Robbery case : 1.4 ಕೋಟಿ ರೂ. ದರೋಡೆ ಆರೋಪ ಪ್ರಕರಣ : 7 ಪೊಲೀಸರು ವಜಾ

ಭಾರತದ ಸಂವಿಧಾನದ 311ನೇ ವಿಧಿಯ ಅಡಿಯಲ್ಲಿ ಭಾರತದ ರಾಷ್ಟ್ರಪತಿ, ರಾಜ್ಯಪಾಲರು ಅಥವಾ ಲೆಫ್ಟಿನೆಂಟ್ ಗವರ್ನರ್ ಯಾವುದೇ ತನಿಖೆಯಿಲ್ಲದೆ ದೇಶ ವಿರೋಧಿ ಅಥವಾ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿರುವ ನೌಕರರನ್ನು ವಜಾಗೊಳಿಸುವ ಅಧಿಕಾರ ಹೊಂದಿದ್ದಾರೆ. ದೇಶ ವಿರೋಧಿ ಚಟುವಟಿಕೆಗಳು ಅಥವಾ ಉಗ್ರಗಾಮಿತ್ವದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಇದುವರೆಗೆ 52 ನೌಕರರನ್ನು ವಜಾಗೊಳಿಸಿದೆ.

ಇದನ್ನೂ ಓದಿ : ಗಡ್ಡ ಬೋಳಿಸಿದ ವಿದ್ಯಾರ್ಥಿಗಳು ವಜಾ : ಗಡ್ಡ ಕಡ್ಡಾಯಗೊಳಿಸಿ​ ಇಸ್ಲಾಮಿಕ್‌ ಶಿಕ್ಷಣ ಸಂಸ್ಥೆ ಆದೇಶ

ಏಪ್ರಿಲ್ 2021ರಲ್ಲಿ ಲೆಫ್ಟಿನೆಂಟ್ ಗವರ್ನರ್ ಆಡಳಿತವು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಿಐಡಿ ವಿಂಗ್ ಆರ್.ಆರ್. ಸ್ವೈನ್ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಿತು. ಇದು ಸರ್ಕಾರಿ ನೌಕರರು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದೆ. 370ನೇ ವಿಧಿಯನ್ನು ರದ್ದುಗೊಳಿಸಿದ ಎರಡು ವರ್ಷಗಳ ನಂತರ ಈ ಕಾರ್ಯಪಡೆಯನ್ನು ರಚಿಸಲಾಗಿದೆ. ಸಮಿತಿಯ ಆಂತರಿಕ ಮತ್ತು ಗೌಪ್ಯ ತನಿಖೆಯ ನಂತರ 52 ನೌಕರರನ್ನು ವಜಾಗೊಳಿಸಲು ಇದುವರೆಗೆ ಶಿಫಾರಸು ಮಾಡಿದ್ದು, ಲೆಫ್ಟಿನೆಂಟ್ ಗವರ್ನರ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ : ಜಮ್ಮು ಕಾಶ್ಮೀರ : ಭಾರತದೊಳಗೆ ನುಸುಳುತ್ತಿದ್ದ ಇಬ್ಬರು ಪಾಕ್‌ ಉಗ್ರರಿಗೆ ಗುಂಡಿಟ್ಟು ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.