ಸೋನಿತ್ಪುರ (ಅಸ್ಸೋಂ): ಕಳೆದ ತಿಂಗಳಷ್ಟೇ 15 ಬಾರಿ ಭೂಮಿ ಕಂಪಿಸಿದ್ದ ಅಸ್ಸೋಂನಲ್ಲಿ ಇಂದು ಮತ್ತೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.9ರಷ್ಟು ತೀವ್ರತೆ ದಾಖಲಾಗಿದೆ.
ಇಂದು ಬೆಳಗ್ಗೆ 8.33ರ ವೇಳೆಗೆ ಭೂಕಂಪ ಉಂಟಾಗಿದ್ದು, ಸೋನಿತ್ಪುರ ಜಿಲ್ಲೆಯಲ್ಲಿ ಭೂಕಂಪನದ ಕೇಂದ್ರ ಬಿಂದುವಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ (ಎನ್ಸಿಎಸ್) ಮಾಹಿತಿ ನೀಡಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಹಾಗೂ ರಾಜ್ಯದಲ್ಲಿ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ತೀವ್ರ ಸ್ವರೂಪ ಪಡೆಯಲಿರುವ ಚಂಡಮಾರುತ.. ದೇವರನಾಡಲ್ಲಿ ತೌಕ್ತೆ ಆತಂಕ
ಅಸ್ಸೋಂನಲ್ಲಿ ಏಪ್ರಿಲ್ 28 ಮತ್ತು 29ರಂದು 6.4ರಷ್ಟು ತೀವ್ರತೆಯ ಭೂಕಂಪ ಸೇರಿದಂತೆ ಎರಡೇ ದಿನದಲ್ಲಿ 15 ಬಾರಿ ಭೂಮಿ ಕಂಪಿಸಿತ್ತು. ಭಯಭೀತರಾದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದರು.