ಭುವನೇಶ್ವರ್(ಒಡಿಶಾ): ಸರ್ಕಾರಕ್ಕೆ ಇಂಧನ ವೆಚ್ಚದ ನಕಲಿ ಬಿಲ್ಗಳನ್ನು ಸಲ್ಲಿಸಿದ ಆರೋಪದ ಮೇಲೆ ಮೂವರು ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಅಮಾನತುಗೊಳಿಸಿರುವ ಘಟನೆ ಒಡಿಶಾದ ಸಂಬಲ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನೂ ಹಿರಿಯ ಅಧಿಕಾರಿಗಳು ಕೈಗೊಂಡಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಐದು ಹಂತಗಳಲ್ಲಿ ಪಂಚಾಯಿತಿ ಚುನಾವಣೆಗಳು ನಡೆದಿದ್ದವು. ಈ ಚುನಾವಣಾ ಕರ್ತವ್ಯಕ್ಕಾಗಿ ಬಾಡಿಗೆ ವಾಹನಗಳನ್ನು ಬಳಕೆ ಮಾಡಲಾಗಿತ್ತು. ಆದರೆ, ಸಂಬಲ್‌ಪುರ ಜಿಲ್ಲೆಯಲ್ಲಿ ವಾಹನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಕಾನ್‌ಸ್ಟೇಬಲ್‌ಗಳು ವಾಹನಗಳು ಸಂಚರಿಸಿದ್ದಕ್ಕಿಂತ ಹೆಚ್ಚಿನ ಇಂಧನ ಬಿಲ್ಗಳನ್ನು ಲಗತ್ತಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು.
ಈ ಬಿಲ್ಗಳನ್ನು ಪರಿಶೀಲಿಸಿದಾಗ ಬಿಲ್ಗಳ ಅಸಲೀಯತ್ತು ಗೊತ್ತಾಗಿದೆ. ವಾಹನಗಳು ಸಂಚರಿಸಿದ ದೂರ ಮತ್ತು ಇವರು ಸಲ್ಲಿಸಿದ್ದ ಇಂಧನ ಬಿಲ್‌ಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಆದ್ದರಿಂದ ಮೂವರನ್ನು ಸೇವೆಯಿಂದ ಅಮಾನತುಗೊಳಿಸಿದ್ದೇವೆ. ಅಲ್ಲದೇ, ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾರೋ, ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದೇವೆ ಸಂಬಲ್‌ಪುರ ಎಸ್‌ಪಿ ಬತ್ತುಲ ಗಂಗಾಧರ್ ತಿಳಿಸಿದ್ದಾರೆ.
ಇದನ್ನೂ ಓದಿ: ಅರ್ಥಶಾಸ್ತ್ರದಲ್ಲಿ ಪದವಿ ಪಡೆದ್ರೂ ಸಿಗದ ಕೆಲಸ, ಚಹಾ ಅಂಗಡಿಯಲ್ಲಿ ಬದುಕು ಕಟ್ಟಿಕೊಂಡ ಪದವೀಧರೆ!