ಮೊರೆನಾ, ಮಧ್ಯಪ್ರದೇಶ: ಜಿಲ್ಲೆಯ ಭಿಲ್ಸಯ್ಯ ಗ್ರಾಮದಲ್ಲಿ ಮೂವರು ಮಕ್ಕಳು ಹಠಾತ್ ಸಾವಿನಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಮೂವರು ಮಕ್ಕಳ ಸಾವಿನಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಆದರೆ ಸಾವಿಗೆ ಕಾರಣ ತಿಳಿದುಬಂದಿಲ್ಲ. ಮಕ್ಕಳು ವಿಚಿತ್ರ ಕಾಯಿಲೆಯೊಂದಕ್ಕೆ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದ್ರೆ.. ನಮ್ಮ ಮಕ್ಕಳು ದುಷ್ಟ ಶಕ್ತಿಯೊಂದಕ್ಕೆ ಬಲಿಯಾಗಿದ್ದಾರೆ ಎಂದು ಸಂಬಂಧಿಕರ ಮಾತಾಗಿದೆ.
ಮೂವರು ಮಕ್ಕಳ ಸಾವು: ಮಾಹಿತಿ ಪ್ರಕಾರ ಭಿಲ್ಸಯ್ಯ ಗ್ರಾಮದಲ್ಲಿ ವಾಸವಿರುವ ಕಲ್ಯಾಣ್ ಸಿಂಗ್ ಯಾದವ್ ಅವರ ಮನೆಯಲ್ಲಿ ಡಿಸೆಂಬರ್ 20ರಿಂದ 22ರವರೆಗೆ 3 ದಿನಗಳಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆರೋಗ್ಯ ಇಲಾಖೆ ಪ್ರಕಾರ, ಸಾವಿಗೆ ಅನಾರೋಗ್ಯ ಕಾರಣ ಎಂದು ಹೇಳುತ್ತಿದ್ದಾರೆ. ಆದರೆ ಸಂಬಂಧಿಕರು ದುಷ್ಟಶಕ್ತಿಗೆ ಅಂದ್ರೆ ದೆವ್ವ ಅಥವಾ ಪ್ರೇತಾತ್ಮಗಳಿಗೆ ಬಲಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಮತ್ತೊಂದೆಡೆ ಮೂವರು ಅಮಾಯಕರ ಸಾವು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ.
![children died same family in morena relatives siad shadow of ghost children died due to unknown disease in morena death of children in Madhya Pradesh ಮೂರು ದಿನದಲ್ಲಿ ಮೂರು ಮಕ್ಕಳ ಸಾವು ದೆವ್ವ ಭೂತ ಕಾಟವೆನ್ನುತ್ತಿರುವ ಕುಟುಂಬ ಮಕ್ಕಳು ಹಠಾತ್ ಸಾವನ್ನಪ್ಪಿರುವ ನೋವಿನ ಘಟನೆ ಬೆಳಕಿಗೆ ಮಕ್ಕಳ ಸಾವಿಗೆ ದುಷ್ಟ ಶಕ್ತಿಗಳ ಕಾಟ ಮಕ್ಕಳು ಹಠಾತ್ ಸಾವಿನಿಂದ ಭಯದ ವಾತಾವರಣ ನಿರ್ಮಾಣ ಆಸ್ಪತ್ರೆಯಲ್ಲಿ ರಾಧಿಕಾ ಮೃತ](https://etvbharatimages.akamaized.net/etvbharat/prod-images/17292723_jfjfj.jpg)
ಡಿಸೆಂಬರ್ 19ರಂದು ತಮ್ಮ ಹಿರಿಯ ಮಗಳು 7 ವರ್ಷದ ರಾಧಿಕಾ ಅನಾರೋಗ್ಯದಿಂದ ಬಳಲುತ್ತಿದ್ದು, ಆಕೆಯ ಚಿಕಿತ್ಸೆಗಾಗಿ ಕೈಲಾರಸಕ್ಕೆ ಕರೆತರಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿನ ಆಸ್ಪತ್ರೆಯ ವೈದ್ಯರು ರಾಧಿಕಾಳನ್ನು ಮೊರೆನಾಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಬಳಿಕ ಆಕೆಯನ್ನು ಮೊರೆನಾದಿಂದ ಕಮಲಾ ರಾಜ್ ಆಸ್ಪತ್ರೆಗೆ ರೆಫರ್ ಮಾಡಲಾಗಿದ್ದು, ಡಿಸೆಂಬರ್ 20ರಂದು ಆಸ್ಪತ್ರೆಯಲ್ಲಿ ರಾಧಿಕಾ ಮೃತಪಟ್ಟಿದ್ದಾಳೆ.
ಮೃತಮಗಳ ಅಂತ್ಯಸಂಸ್ಕಾರ ಪೂರ್ಣಗೊಳಿಸಿ ಪೋಷಕರು ಮತ್ತು ಸಂಬಂಧಿಕರು ಗ್ರಾಮಕ್ಕೆ ಹಿಂತಿರುಗಿದಾಗ ಕಲ್ಯಾಣ್ ಸಿಂಗ್ ಯಾದವ್ ಅವರ ಒಂದೂವರೆ ವರ್ಷದ ಮಗು ವಿಪಿನ್ ಯಾದವ್ ಅನಾರೋಗ್ಯದಿಂದ ಬಳಲುತ್ತಿತ್ತು. ಪೋಷಕರು ಇದೊಂದು ದುಷ್ಟ ಶಕ್ತಿಯ ನೆರಳು ಎಂದು ಭಾವಿಸಿ ದೇವಸ್ಥಾನಗಳಿಗೆ ಅಲೆದಾಡಿದ್ದಾರೆ. ಆದರೆ ಮಗು ಡಿಸೆಂಬರ್ 21ರಂದು ಮೃತಪಟ್ಟಿದ್ದಾನೆ. ಇದಾದ ಬಳಿಕ ಮಗಳು ಸುಮನ್ ಮನೆಗೆ ಬಂದ ಕೂಡಲೇ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಡಿಸೆಂಬರ್ 22ರಂದು ಮಗಳು ಸುಮನ್ ಕೂಡ ಸಾವನ್ನಪ್ಪಿದ್ದಾಳೆ.
![children died same family in morena relatives siad shadow of ghost children died due to unknown disease in morena death of children in Madhya Pradesh ಮೂರು ದಿನದಲ್ಲಿ ಮೂರು ಮಕ್ಕಳ ಸಾವು ದೆವ್ವ ಭೂತ ಕಾಟವೆನ್ನುತ್ತಿರುವ ಕುಟುಂಬ ಮಕ್ಕಳು ಹಠಾತ್ ಸಾವನ್ನಪ್ಪಿರುವ ನೋವಿನ ಘಟನೆ ಬೆಳಕಿಗೆ ಮಕ್ಕಳ ಸಾವಿಗೆ ದುಷ್ಟ ಶಕ್ತಿಗಳ ಕಾಟ ಮಕ್ಕಳು ಹಠಾತ್ ಸಾವಿನಿಂದ ಭಯದ ವಾತಾವರಣ ನಿರ್ಮಾಣ ಆಸ್ಪತ್ರೆಯಲ್ಲಿ ರಾಧಿಕಾ ಮೃತ](https://etvbharatimages.akamaized.net/etvbharat/prod-images/17292723_fsd.jpg)
ದುಷ್ಟಶಕ್ತಿಯ ಅನುಮಾನ ವ್ಯಕ್ತಪಡಿಸಿದ ಕುಟುಂಬ: ಇದಾದ ಬಳಿಕ ಕಲ್ಯಾಣ ಸಿಂಗ್ ಅವರ ಪತ್ನಿ ಅವರ ಆರೋಗ್ಯವೂ ಹದಗೆಟ್ಟಿತ್ತು. ತಾಯಿ ಆರೋಗ್ಯ ಸ್ಥಿತಿ ಮತ್ತು ಮೂವರು ಮಕ್ಕಳ ಸಾವಿನ ಮಾಹಿತಿ ಮೇರೆಗೆ ಜಿಲ್ಲಾ ಆರೋಗ್ಯಾಧಿಕಾರಿ ರಾಕೇಶ್ ಶರ್ಮಾ ಆರೋಗ್ಯ ಇಲಾಖೆ ತಂಡದೊಂದಿಗೆ ಖುಡೆ ಗ್ರಾಮಕ್ಕೆ ಆಗಮಿಸಿದರು. ಸ್ಥಳದಲ್ಲಿದ್ದ ಕುಟುಂಬದ ಎಲ್ಲ ಸದಸ್ಯರಿಗೆ ಚಿಕಿತ್ಸೆ ನೀಡುವಂತೆ ಬಿಎಂಒ ಕೇಳಿದರೂ ಕುಟುಂಬಸ್ಥರು ಕಿವಿಗೊಡಲಿಲ್ಲ. ಬಳಿಕ ಆರೋಗ್ಯ ತಂಡ ಸ್ಥಳದಿಂದ ನೀರನ್ನು ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಿದ್ದಾರೆ.
ಕಲ್ಯಾಣ್ ಯಾದವ್ ಅವರ 5 ಮಕ್ಕಳಲ್ಲಿ 3 ಮಕ್ಕಳು ಸಾವನ್ನಪ್ಪಿದ್ದಾರೆ. ಮನೆಯಲ್ಲಿ ದೆವ್ವ ಕಾಡುತ್ತಿದೆ ಎಂಬ ಭಯ ಕುಟುಂಬಸ್ಥರಾಗಿದೆ. ಅಷ್ಟೇ ಅಲ್ಲದೇ ಹಿರಿಯ ಹೆಣ್ಣು ಮಕ್ಕಳಿಬ್ಬರ ಆರೋಗ್ಯ ಹದಗೆಟ್ಟಿದ್ದು, ಭಯದಿಂದ ಅವರಿಬ್ಬರನ್ನೂ ಸಂಬಂಧಿಕರಿಗೆ ಮನಗೆ ಕಳುಹಿಸಿದ್ದಾರೆ. ಪತ್ನಿಯನ್ನು ಭೂತೋಚ್ಚಾಟನೆಗಾಗಿ ಶಿವಪುರಿಯಲ್ಲಿರುವ ಓಜಾಗೆ ಕಳುಹಿಸಲಾಗಿದೆ. ಇದರ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ನೀರನ್ನು ಪರೀಕ್ಷಿಸಿದ ಬಳಿಕ ಮಾಹಿತಿ ತಿಳಿದು ಬರಲಿದೆ.