ETV Bharat / bharat

ಸಿಮ್ ಕಾರ್ಡ್ ಖರೀದಿಸಿ ಪಾಕ್ ಗುಪ್ತಚರರೊಂದಿಗೆ OTP ಹಂಚಿಕೆ: ಒಡಿಶಾದಲ್ಲಿ ಮೂವರು ಸೆರೆ

ಪ್ರೀ-ಆಕ್ಟಿವೇಟೆಡ್ ಸಿಮ್ ಕಾರ್ಡ್ ಖರೀದಿ ಹಾಗೂ ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರೊಂದಿಗೆ ಒನ್-ಟೈಮ್ ಪಾಸ್‌ವರ್ಡ್‌ (ಒಟಿಪಿ) ಹಂಚಿಕೊಂಡ ಗಂಭೀರ ಆರೋಪದಡಿ ಒಡಿಶಾದಲ್ಲಿ ಮೂವರನ್ನು ಬಂಧಿಸಲಾಗಿದೆ.

author img

By

Published : May 15, 2023, 7:57 AM IST

Representative image
ಪ್ರಾತಿನಿಧಿಕ ಚಿತ್ರ

ಭುವನೇಶ್ವರ (ಒಡಿಶಾ): ಸಿಮ್ ಕಾರ್ಡ್‌ಗಳನ್ನು ವಂಚನೆ ಮೂಲಕ ಖರೀದಿಸಿ ಕೆಲವು ಅಪರಾಧಿಗಳೊಂದಿಗೆ ಒನ್-ಟೈಮ್ ಪಾಸ್‌ವರ್ಡ್‌ಗಳನ್ನು (ಒಟಿಪಿ) ಹಂಚಿಕೊಂಡ ಆರೋಪದಡಿ ನಯಾಗರ್ ಮತ್ತು ಜಾಜ್‌ಪುರ ಜಿಲ್ಲೆಯ ಮೂವರನ್ನು ಒಡಿಶಾ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಭಾನುವಾರ ಸೆರೆ ಹಿಡಿದಿದೆ. ಬಂಧಿತರನ್ನು ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ಐಟಿಐ) ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಪಠಾಣಿಸಮಂತ್ ಲೆಂಕಾ (35), ಸರೋಜ್ ಕುಮಾರ್ ನಾಯಕ್ (26) ಮತ್ತು ಸೌಮ್ಯಾ ಪಟ್ಟನಾಯಕ್ (19) ಎಂದು ಗುರುತಿಸಲಾಗಿದೆ ಎಂದು ಎಸ್‌ಟಿಎಫ್ ಮೂಲಗಳು ತಿಳಿಸಿವೆ.

ಎಸ್‌ಟಿಎಫ್ ನೀಡಿದ ಹೇಳಿಕೆಯು, ಈ ಮೂವರು ಇತರರ ಹೆಸರಿನಲ್ಲಿ ಹೆಚ್ಚಿನ ಸಂಖ್ಯೆಯ ಸಿಮ್‌ಗಳನ್ನು ವಂಚನೆಯಿಂದ ಖರೀದಿಸುತ್ತಿದ್ದರು. ಒಟಿಪಿಗಳನ್ನು ಕೆಲವು ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರು (ಪಿಐಒ) ಅಥವಾ ಐಎಸ್‌ಐ ಏಜೆಂಟ್‌ಗಳು ಸೇರಿದಂತೆ ಪಾಕಿಸ್ತಾನ ಹಾಗೂ ಭಾರತದಲ್ಲಿ ವಿವಿಧ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ಅವರಿಗೆ ಭಾರತದಲ್ಲಿನ ಕೆಲವು ಪಾಕಿಸ್ತಾನಿ ಏಜೆಂಟ್‌ಗಳು ಹಣ ಪಾವತಿಸುತ್ತಿದ್ದರು." ಎಂದು ತಿಳಿಸಿದೆ.

"ಈ ವ್ಯಕ್ತಿಗಳು ಹಂಚಿಕೊಂಡ ಒಟಿಪಿಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ(Whatsapp, Telegram, Facebook) ಮತ್ತು ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿ (Amazon ಮತ್ತು Flipkart) ವಿವಿಧ ಖಾತೆಗಳು / ಚಾನಲ್‌ಗಳನ್ನು ರಚಿಸಲು ಬಳಸಲಾಗಿದೆ. ಇಮೇಲ್ ಖಾತೆಗಳನ್ನು ತೆರೆಯಲು ಸಹ ಇವುಗಳನ್ನು ಬಳಸಲಾಗಿದೆ. ಅಂತಹ ಉದ್ದೇಶಗಳಿಗಾಗಿ ಭಾರತದ ಮೊಬೈಲ್ ಸಂಖ್ಯೆಗಳನ್ನು ಬಳಸುವುದರಿಂದ ಈ ಖಾತೆಗಳು ಭಾರತೀಯರ ಒಡೆತನದಲ್ಲಿದೆ ಎಂದು ಜನರು ಭಾವಿಸುತ್ತಾರೆ. ವಾಸ್ತವವಾಗಿ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದವು" ಎಂದು ಎಸ್‌ಟಿಎಫ್ ಐಜಿ ಜೆ.ಎನ್ ಪಂಕಜ್ ಹೇಳಿದರು.

"ಈ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ವಿವಿಧ ರೀತಿಯ ಭಾರತ ವಿರೋಧಿ ಚಟುವಟಿಕೆಗಳಾದ ಬೇಹುಗಾರಿಕೆ, ಭಯೋತ್ಪಾದಕರೊಂದಿಗೆ ಸಂವಹನ, ಸಾಮಾಜಿಕ ಮಾಧ್ಯಮಗಳಲ್ಲಿ ಭಾರತ-ವಿರೋಧಿ/ವಿಭಜಕ ಭಾವನೆಗಳನ್ನು ಉತ್ತೇಜಿಸುವುದು, ಲೈಂಗಿಕ ದೌರ್ಜನ್ಯ ಮತ್ತು ಹನಿ-ಟ್ರ್ಯಾಪಿಂಗ್‌ನಲ್ಲಿ ಬಳಸಲು ಯೋಜಿಸಿದ್ದರು" ಎಂದು ಎಸ್‌ಟಿಎಫ್ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

ಈ ಖಾತೆಗಳನ್ನು ಭಾರತೀಯ ಮೊಬೈಲ್ ಸಂಖ್ಯೆಯಲ್ಲಿ ಲಿಂಕ್ ಮಾಡಲಾಗಿದೆ. ಜನರು ಅದನ್ನು ಸುಲಭವಾಗಿ ನಂಬುತ್ತಾರೆ. ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ತೆರೆಯಲಾದ ಖಾತೆಗಳನ್ನು ಭಯೋತ್ಪಾದಕರು ಮತ್ತು ಭಾರತ ವಿರೋಧಿ ಅಂಶಗಳಿಗೆ ವಸ್ತುಗಳನ್ನು ಪೂರೈಸಲು ಬಳಸಲಾಗುತ್ತದೆ ಎಂದು ಎಸ್‌ಟಿಎಫ್ ಹೇಳಿದೆ. ಬಂಧಿತರಲ್ಲಿ ಒಬ್ಬರು ಅಧಿಕೃತ ರಹಸ್ಯ ಕಾಯಿದೆ/ ಹನಿಟ್ರ್ಯಾಪ್ ಪ್ರಕರಣದಲ್ಲಿ ಕಳೆದ ವರ್ಷ ರಾಜಸ್ಥಾನದಲ್ಲಿ ಬಂಧಿಸಲ್ಪಟ್ಟ ಪಾಟ್ನಾ ಮೂಲದ ಮಹಿಳಾ ಪಿಐಒ ಏಜೆಂಟ್‌ನೊಂದಿಗೆ ಸಂಪರ್ಕದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

ದಾಳಿಯ ಸಂದರ್ಭದಲ್ಲಿ ಎಸ್‌ಟಿಎಫ್ 19 ಮೊಬೈಲ್ ಫೋನ್‌ಗಳು, 47 ಪ್ರೀ-ಆಕ್ಟಿವೇಟೆಡ್ ಸಿಮ್ ಕಾರ್ಡ್‌ಗಳು ಮತ್ತು ಕವರ್‌ಗಳು, 61 ಎಟಿಎಂ ಕಾರ್ಡ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು ಸೇರಿದಂತೆ ದೋಷಾರೋಪಣೆಯ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಇದನ್ನೂ ಓದಿ: ಅಬಕಾರಿ ನೀತಿ ಹಗರಣ ಪ್ರಕರಣ: ಸಿಸೋಡಿಯಾಗೆ ಜೂನ್ 2ರವರೆಗೆ ನ್ಯಾಯಾಂಗ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.