ETV Bharat / bharat

ಮೌಂಟ್​ ಎವರೆಸ್ಟ್​ ಏರಿದ ತೆಲಂಗಾಣದ 24 ವರ್ಷದ ಯುವತಿ

author img

By

Published : May 17, 2022, 3:25 PM IST

ತೆಲಂಗಾಣದ ಯುವತಿ ಅನ್ವಿತಾ ರೆಡ್ಡಿ ತನ್ನ ಯಶೋಗಾಥೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಯರ್ರಂಬಳ್ಳಿ ಗ್ರಾಮದ ನಿವಾಸಿ ಅನ್ವಿತಾ ರೆಡ್ಡಿ ಮೌಂಟ್ ಎವರೆಸ್ಟ್ ಏರಿ ಸಾಧನೆ ಮಾಡಿದ ಯುವತಿಯಾಗಿದ್ದಾರೆ.

24 years Telangana woman climbed Mount Everest
ಮೌಂಟ್​ ಎವರೆಸ್ಟ್​ ಏರಿದ ತೆಲಂಗಾಣದ 24 ವರ್ಷದ ಯುವತಿ

ಹೈದರಾಬಾದ್​​(ತೆಲಂಗಾಣ): ಮಹಿಳೆ ಪುರುಷರಗಿಂತ ಯಾವುದರಲ್ಲಿ ಕಮ್ಮಿ ಇಲ್ಲ ಎಂಬುದನ್ನು ತೋರಿಸಿ ಯಾವುದೋ ಕಾಲ ಆಯಿತು. ಮಹಿಳೆಯರು ಈಗ ಎಲ್ಲ ರಂಗಗಳಲ್ಲಿ ಅತ್ಯುತ್ತಮ ಸಾಧನೆ ತೋರಿಸುತ್ತಿದ್ದಾರೆ. ಅಂತಹ ಸಾಲಿಗೀಗ ತೆಲಂಗಾಣದ ಯುವತಿಯೊಬ್ಬರು ಸೇರ್ಪಡೆಯಾಗಿದ್ದಾರೆ.

ತೆಲಂಗಾಣದ ಯುವತಿ ಅನ್ವಿತಾ ರೆಡ್ಡಿ ತನ್ನ ಯಶೋಗಾಥೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಯರ್ರಂಬಳ್ಳಿ ಗ್ರಾಮದ ನಿವಾಸಿ ಅನ್ವಿತಾ ರೆಡ್ಡಿ ಮೌಂಟ್ ಎವರೆಸ್ಟ್ ಏರಿದ್ದಾರೆ. ಅವರು ಸಮುದ್ರ ಮಟ್ಟದಿಂದ 8,848.86 ಮೀಟರ್ ಎತ್ತರದಲ್ಲಿರುವ ವಿಶ್ವದ ಅತ್ಯಂತ ಎತ್ತರದ ಎವರೆಸ್ಟ್ ಏರಿ ಈ ಮಹತ್​ ಸಾಧನೆ ಮಾಡಿದ್ದಾರೆ.

ಮೂಲ ಶಿಬಿರದಿಂದ ಐದು ದಿನಗಳಲ್ಲಿ ಮೌಂಟ್ ಎವರೆಸ್ಟ್ ಏರಿ ಎಲ್ಲರ ಗಮನ ಸೆಳೆದಿದ್ದಾರೆ ಈ ಅನ್ವಿತಾ ರೆಡ್ಡಿ. ಹೈದರಾಬಾದ್‌ನ ಟ್ರಾನ್ಸ್‌ಸೆಂಡ್ ಅಡ್ವೆಂಚರ್ಸ್ ಮುಖ್ಯಸ್ಥ ಶೇಖರ್ ಬಾಬು ಬಾಚಿನೆಪಲ್ಲಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಈ ಪ್ರಯತ್ನವನ್ನು ಅನಿತಾ ರೆಡ್ಡಿ ಅವರು ಮಾಡಿದ್ದಾರೆ.

ಅನ್ವಿತಾ ರೆಡ್ಡಿ ಅವರು ಗುರಿ ತಲುಪಿದ್ದು ಹೇಗೆ?: ಅನ್ವಿತಾ ರೆಡ್ಡಿ ಅವರು ಏಪ್ರಿಲ್ 2 ರಂದು ಹೈದರಾಬಾದ್‌ನಿಂದ ನೇಪಾಳಕ್ಕೆ ಹೊರಟು ಏಪ್ರಿಲ್ 4 ರಂದು ನೇಪಾಳ ತಲುಪಿದರು. ರಾಜಧಾನಿ ಕಠ್ಮಂಡುವಿನಲ್ಲಿ ಕೆಲ ದಿನಗಳ ಕಾಳ ವಿಶ್ರಾಂತಿ ಪಡೆದ ಅನ್ವಿತಾ ಅಲ್ಲಿಂದ ಅವರು ಲುಕ್ಲಾ ಎಂಬ ಸ್ಥಳವನ್ನು ತಲುಪಿದರು. 9 ದಿನಗಳ ಕಾಲ ಒಟ್ಟು 5,300 ಮೀಟರ್‌ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಮುಟ್ಟಿದ್ದರು. ಅಲ್ಲಿಂದ 7,100 ಮೀ ಎತ್ತರದ ಶಿಖರಗಳನ್ನು ಏರಿ ನಂತರ ವಿಶ್ರಾಂತಿ ಪಡೆದುಕೊಂಡಿದ್ದರು.

ಮೌಂಟ್​ ಎವರೆಸ್ಟ್​​​ ಪರ್ವತಾರೋಹಣದ ತಮ್ಮ ಸಾಹಸದಲ್ಲಿ ಅವರು ಇಬ್ಬರು ಶೇರ್ಪಾಗಳ ನೆರವು ಹಾಗೂ ಮಾರ್ಗದರ್ಶನ ಪಡೆದು ತಮ್ಮ ಸಾಹಸವನ್ನು ಪೂರ್ಣಗೊಳಿಸಿದ್ದಾರೆ. ಎವರೆಸ್ಟ್​ ಏರುವ ವೇಳೆ ಪ್ರತಿಕೂಲ ವಾತಾವರಣ ಹಾಗೂ ಆಮ್ಲಜನಕದ ಏರಿಳಿತಗಳನ್ನು ತಾಳುವ ಮೂಲಕ ಮೌಂಟ್​ ಎವರೆಸ್ಟ್​ ಬೇಸ್​ ಕ್ಯಾಂಪ್​ ತಲುಪಿ, ತಮ್ಮ ಅಂತಿಮ ಗುರಿ ತಲುಪುವಲ್ಲಿ ಯಶಸ್ವಿಯಾಗಗಿದ್ದಾರೆ.

ಅವರ ಸಾಹಸಗಾಥೆ ಶುರುವಾಗಿದ್ದು ಹೀಗೆ: ಏಪ್ರಿಲ್​​​​​​ 17 ರಂದು ಮೌಂಟ್​ ಎವರೆಸ್ಟ್​ ಪರ್ವತಾರೋಹಣದ ಮೂಲ ಕ್ಯಾಂಪ್​ ತಲುಪಿದ್ದ ಅವರು, ಸುಮಾರು 20 ದಿನಗಳ ತರಬೇತಿ- ಮಾರ್ಗದರ್ಶನದ ಬಳಿಕ ಮೇ 12 ರಂದು ತಮ್ಮ ಸಾಹಸವನ್ನು ಆರಂಭ ಮಾಡಿದ್ದರು. ಅಲ್ಲಿಂದ ವಿವಿಧ ಎತ್ತರದ ನಾಲ್ಕು ಪರ್ವತಗಳನ್ನು ದಾಟಿ, ಮೇ 16 ರ ಬೆಳಗ್ಗೆ 9 ಗಂಟೆಗೆ ಅಂತಿಮ ತುದಿಯನ್ನು ತಲುಪುವ ವರೆಗೂ ಎಡಬಿಡದೇ ಪರ್ವತಾರೋಹಣ ಮಾಡಿದ್ದರು.

ಎವರೆಸ್ಟ್​ ತುತ್ತತುದಿ ತಲುಪಿರುವ ಅವರು, ಇದೇ 18 ರಂದು ಅಂದರೆ ನಾಳೆ ಬೇಸ್​ ಕ್ಯಾಂಪ್ ತಲುಪಲಿದ್ದಾರೆ ಎಂದು ಶೇಖರ್​ ಬಾಬು ತಿಳಿಸಿದ್ದಾರೆ. ಇಷ್ಟೇ ಅಲ್ಲ ನೇಪಾಳದಲ್ಲಿ ನಡೆಯಲಿರುವ ಕೆಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಈ ತಿಂಗಳ ಅಂತ್ಯದ ವೇಳೆಗೆ ಹೈದರಾಬಾದ್​ ತಲುಪಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:ಕಾರ್ತಿ ಚಿದಂಬರಂ ಮನೆ, ಕಚೇರಿ ಮೇಲೆ ಸಿಬಿಐ ದಾಳಿ: ಅವರಿಗೇನು ಸಿಗಲಿಲ್ಲ ಎಂದ ಕಾಂಗ್ರೆಸ್​ ನಾಯಕ!

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.