ETV Bharat / bharat

CCTV Video..  ಮಾಜಿ ಲವರ್​ಗೆ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆಗೈದ ಪಾಗಲ್​ ಪ್ರೇಮಿ - ಮಾಜಿ ಲವರ್​ನಿಂದ ಹಲ್ಲೆ

ಲಭ್ಯವಾಗಿರುವ ಮಾಹಿತಿ ಪ್ರಕಾರ ನಿನ್ನೆ ರಾತ್ರಿ 11 ಗಂಟೆಗೆ ಹುಟ್ಟುಹಬ್ಬ ಆಚರಿಸಲು ಆಕೆ ತನ್ನ ಮನೆಯಿಂದ ಹೊರಗಡೆ ಬಂದಿದ್ದಳು. ಆದರೆ, ಇದ್ದಕ್ಕಿದ್ದಂತೆ ಕೊಲೆಯಾಗಿರುವ ಮಾಹಿತಿ ಸಿಕ್ಕಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ..

23 Year old stabbed to death
23 Year old stabbed to death
author img

By

Published : Oct 20, 2021, 4:07 PM IST

Updated : Oct 20, 2021, 4:42 PM IST

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಭೀಕರ ಕೊಲೆ ನಡೆದಿದೆ. ಭೇಟಿಯಾಗುವ ಉದ್ದೇಶದಿಂದ ಮಾಜಿ ಲವರ್​ಗೆ ಕರೆಯಿಸಿಕೊಂಡಿರುವ ಪಾಗಲ್​ ಪ್ರೇಮಿಯೊಬ್ಬ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆಗೈದ ಪಾಗಲ್​ ಪ್ರೇಮಿ

ದೆಹಲಿಯ ದ್ವಾರಕಾನಗರದ ಉತ್ತಮ ನಗರ ಪ್ರದೇಶದಲ್ಲಿ ವಾಸವಾಗಿದ್ದ 23 ವರ್ಷದ ಯುವತಿ ಭೀಕರವಾಗಿ ಕೊಲೆಯಾಗಿದ್ದಾರೆ. ಮೃತಳ ಯುವತಿಯನ್ನ ಡಾಲಿ ಬಬ್ಬರ್​ ಎಂದು ಗುರುತಿಸಲಾಗಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ನಿನ್ನೆ ರಾತ್ರಿ 11 ಗಂಟೆಗೆ ಹುಟ್ಟುಹಬ್ಬ ಆಚರಿಸಲು ಆಕೆ ತನ್ನ ಮನೆಯಿಂದ ಹೊರಗಡೆ ಬಂದಿದ್ದಳು. ಆದರೆ, ಇದ್ದಕ್ಕಿದ್ದಂತೆ ಕೊಲೆಯಾಗಿರುವ ಮಾಹಿತಿ ಸಿಕ್ಕಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

23 Year old stabbed to death
ಯುವತಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಯುವಕ

ಇದರಲ್ಲಿ ಆಕೆಯ ಮಾಜಿ ಲವರ್​ ಕೈವಾಡವಿದೆ ಎಂದು ಕುಟುಂಬಸ್ಥರು ಗಂಭೀರವಾದ ಆರೋಪ ಮಾಡಿದ್ದಾರೆ. ಈಗಾಗಲೇ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ಆರಂಭಿಸಿದ್ದಾರೆ. 3 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿರಿ: ವಿಮಾನದಲ್ಲಿ ನಟಿಗೆ ಕಿರುಕುಳ.. ಉದ್ಯಮಿ ಬಂಧಿಸಿದ ಪೊಲೀಸರು

ಸಿಸಿಟಿವಿ ದೃಶ್ಯಗಳು ವೈರಲ್​​​: ಈ ನಡುವೆ 23 ವರ್ಷದ ಯುವತಿಯನ್ನು ಯುವಕರು ಬೆನ್ನಟ್ಟಿ ಬರುತ್ತಿರುವ ವಿಡಿಯೋ ವೈರಲ್​ ಆಗಿದೆ. ಇದರ ಆಧಾರದ ಮೇಲೆಯೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರು ತಿಳಿಸಿರುವ ಮಾಹಿತಿ ಪ್ರಕಾರ, ಯುವತಿಯ ಹುಟ್ಟುಹಬ್ಬವಿದ್ದ ಕಾರಣ ಆಕೆಯನ್ನ ಭೇಟಿ ಮಾಡುವ ಉದ್ದೇಶದಿಂದ ಮಾಜಿ ಲವರ್​​ ಅಂಕಿತ್​​ ಫೋನ್ ಮಾಡಿ ಕರೆಯಿಸಿಕೊಂಡಿದ್ದನಂತೆ. ಮಾಜಿ ಪ್ರೇಯಸಿ ಆತನ ಹತ್ತಿರ ಬರುತ್ತಿದ್ದಂತೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ದಾಳಿಗೆ ಒಳಗಾಗಿರುವ ಯುವತಿ ಅದೇ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಆಗಮಿಸಿದ್ದಳು ಎನ್ನಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ವೈದ್ಯರು ನೀಡಿರುವ ಮಾಹಿತಿ ಪ್ರಕಾರ ಯುವತಿಗೆ ಒಟ್ಟು ಏಳು ಬಾರಿ ಚಾಕುವಿನಿಂದ ತಿವಿಯಲಾಗಿದೆ, ಹೀಗಾಗಿ ಗಂಭೀರವಾಗಿ ಗಾಯಗೊಂಡು ತೀವ್ರವಾಗಿ ರಕ್ತಸ್ರಾವವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

Last Updated : Oct 20, 2021, 4:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.