ETV Bharat / bharat

ಪಾಕ್​ನಲ್ಲಿ ಸಿಲುಕಿದ್ದ 221 ಭಾರತೀಯರು 8 ತಿಂಗಳ ಬಳಿಕ ತವರಿಗೆ ವಾಪಸ್​! - ಪಾಕಿಸ್ತಾನದ ಹಿಂದೂಗಳು ಭಾರತಕ್ಕೆ ವಾಪಸ್

ಮಾರ್ಚ್‌ ಕೊನೆಯ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಾದ್ಯಂತ ಹಬ್ಬುತ್ತಿದ್ದ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಪೂರ್ಣ ಲಾಕ್‌ಡೌನ್ ವಿಧಿಸಿದ್ದರು. ಇದರಿಂದ ಅಂತಾರಾಷ್ಟ್ರೀಯ ಗಡಿ ಮುಚ್ಚಲಾಯಿತು. ಪಾಕ್​ನಲ್ಲಿ ಇದ್ದ ಭಾರತೀಯರು ತವರಿಗೆ ಮರಳಲು ಸಾಧ್ಯವಾಗಲಿಲ್ಲ. ಸರ್ಕಾರವು ಈಗ ಆರ್ಥಿಕ ಚಟುವಟಿಕೆಗಳನ್ನು ಪುನಾರಂಭಿಸಿ, ಅಂತಾರಾಷ್ಟ್ರೀಯ ಗಡಿ ಪ್ರವೇಶಕ್ಕೆ ಅವಶ್ಯಕತೆಯ ಆಧಾರದ ಮೇಲೆ ತೆರೆದಿದೆ.

Pakistan return
ಪಾಕ್​ನಿಂದ ವಾಪಸ್
author img

By

Published : Nov 24, 2020, 9:28 AM IST

ನವದೆಹಲಿ: ಕೊರೊನಾ ವೈರಸ್ ಪ್ರೇರೇಪಿತ ನಿರ್ಬಂಧದಿಂದಾಗಿ ಪಾಕಿಸ್ತಾನದಲ್ಲಿ ಸಿಲುಕಿಕೊಂಡಿದ್ದ 221ಕ್ಕೂ ಹೆಚ್ಚು ಭಾರತೀಯರು ಅಟ್ಟಾರಿ-ವಾಗಾ ಅಂತಾರಾಷ್ಟ್ರೀಯ ಗಡಿಯ ಮೂಲಕ ನವೆಂಬರ್​ 23ರಂದು ತವರಿಗೆ ಮರಳಿದರು.

ಈ ಪೈಕಿ 135 ಮಂದಿ ನೋರಿ (ಭಾರತಕ್ಕೆ ಮರಳಲು ಯಾವುದೇ ಅಡೆತಡೆ ಇಲ್ಲ) ವೀಸಾ ಹೊಂದಿರುವವರು, 11 ಮಂದಿ ಪಾಕಿಸ್ತಾನಿ ಪ್ರಜೆಗಳು ಮತ್ತು 75 ಭಾರತೀಯರು ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್‌ ಕೊನೆಯ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಾದ್ಯಂತ ಹಬ್ಬುತ್ತಿದ್ದ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಪೂರ್ಣ ಲಾಕ್‌ಡೌನ್ ವಿಧಿಸಿದ್ದರು. ಇದರಿಂದ ಅಂತಾರಾಷ್ಟ್ರೀಯ ಗಡಿ ಮುಚ್ಚಲಾಯಿತು. ಪಾಕ್​ನಲ್ಲಿ ಇದ್ದ ಭಾರತೀಯರು ತವರಿಗೆ ಮರಳಲು ಸಾಧ್ಯವಾಗಲಿಲ್ಲ. ಸರ್ಕಾರವು ಈಗ ಆರ್ಥಿಕ ಚಟುವಟಿಕೆಗಳನ್ನು ಪುನಾರಂಭಿಸಿ, ಅಂತಾರಾಷ್ಟ್ರೀಯ ಗಡಿ ಪ್ರವೇಶಕ್ಕೆ ಅವಶ್ಯಕತೆಯ ಆಧಾರದ ಮೇಲೆ ತೆರೆದಿದೆ.

ಸುಮಾರು ಎಂಟು ತಿಂಗಳ ನಂತರ ಭಾರತದಲ್ಲಿ ಇರುವ ತಮ್ಮ ಕುಟುಂಬಸ್ಥರನ್ನು ಭೇಟಿಯಾಗಲು ತೆರಳುತ್ತಿರುವುದು ತುಂಬಾ ಸಂತಸ ತಂದಿದೆ ಎಂದು ಆಗಮಿಸುತ್ತಿರುವವರು ಹೇಳಿದರು.

ಪಾಕಿಸ್ತಾನದಿಂದ ಹಿಂದಿರುಗಿದ ಎಲ್ಲ ಭಾರತೀಯರಿಗೆ ಕೋವಿಡ್​-19 ಪರೀಕ್ಷೆಯನ್ನು ಗಡಿಯಲ್ಲಿ ನಡೆಸಲಾಗುತ್ತಿದೆ. ಪಾಸಿಟಿವ್ ವರದಿ ಬಂದರೆ ಅವರನ್ನು ನೇರವಾಗಿ ಗುರುನಾನಕ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಪಾಕಿಸ್ತಾನದ ಕೋರಿಕೆಯ ಮೇರೆಗೆ ಭಾರತದಲ್ಲಿ ಸಿಲುಕಿರುವ 512 ಪಾಕಿಸ್ತಾನಿ ಪ್ರಜೆಗಳನ್ನು ಈಗಾಗಲೇ ವಿವಿಧ ಬ್ಯಾಚ್‌ಗಳಲ್ಲಿ ತವರಿಗೆ ಕಳುಹಿಸಲಾಗಿತ್ತು. ಇಂದು ಭಾರತೀಯ ನಾಗರಿಕರು ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.