ಗುವಾಹಟಿ(ಅಸ್ಸೋಂ): ಕಳೆದೊಂದು ತಿಂಗಳಿಂದಲೂ ಅಸ್ಸೋಂ ಪ್ರವಾಹಕ್ಕೆ ಸಿಲುಕಿ ನಲುಗಿದೆ. ಐವರು ವರುಣಾರ್ಭಟದಿಂದ ಜೀವ ಕಳೆದುಕೊಂಡಿದ್ದಾರೆ. ಒಟ್ಟು 22 ಜಿಲ್ಲೆಯ ಅಂದಾಜು 6,47,606 ಮಂದಿ ಪ್ರವಾಹಕ್ಕೆ ಸಿಲುಕಿದ್ದಾರೆ ಎಂದು ಅಸ್ಸೋಂನ ಪ್ರವಾಹ ವರದಿ ಮತ್ತು ಮಾಹಿತಿ ನಿರ್ವಹಣಾ ವ್ಯವಸ್ಥೆ ಮಾಹಿತಿ ನೀಡಿದೆ.
ಪ್ರವಾಹದಿಂದ ಪ್ರಭಾವಿತವಾದ ಜಿಲ್ಲೆಗಳು ಎಂದರೆ ಬಾರ್ಪೆಟಾ, ಬಿಸ್ವನಾಥ್, ಬೊಂಗೈಗಾಂವ್, ಚಿರಾಂಗ್, ದಾರಂಗ್, ಧೇಮಾಜಿ, ಧುಬ್ರಿ, ದಿಬ್ರುಗರ್, ಗೋಲ್ಪರಾ, ಗೋಲಘಾಟ್, ಜೋರ್ಹತ್, ಕಮರೂಪ್ (ಗ್ರಾಮಾಂತರ), ಕಮರೂಪ್ (ಮೆಟ್ರೋ), ಲಖಿಂಪುರ್, ಮಜುಲಿ, ಮೊರಿಗಾಂವ್, ನಾಗಾನ್, ನಲ್ಬಾರಿ ಸೋನಿತ್ಪುರ್, ದಕ್ಷಿಣ ಸಾಲ್ಮರ, ಟಿನ್ಸುಕಿಯಾ ಇತ್ಯಾದಿ ಸೇರಿ 22 ಜಿಲ್ಲೆಗಳಲ್ಲಿ ಒಟ್ಟು 57 ಕಂದಾಯ ವಲಯಗಳು ಇನ್ನೂ ಪ್ರವಾಹದ ನೀರಿನಲ್ಲಿ ಮುಳುಗಿವೆ ಎಂದು ತಿಳಿಸಿದೆ.
ಇದುವರೆಗೆ 1295 ಕಂದಾಯ ಗ್ರಾಮಗಳು ಪ್ರವಾಹದಿಂದ ಪ್ರಭಾವಿತವಾಗಿವೆ. ಇವುಗಳಲ್ಲಿ ಮೊರಿಗಾಂವ್ ಜಿಲ್ಲೆಯು ಅಗ್ರ ಸ್ಥಾನದಲ್ಲಿದೆ. ಜಿಲ್ಲೆಯ ಒಟ್ಟು 251 ಗ್ರಾಮಗಳು ಪ್ರವಾಹದಿಂದ ತತ್ತರಿಸಿವೆ. ಆದರೆ, ಜನಸಂಖ್ಯೆಯ ದೃಷ್ಟಿಯಿಂದ ನಲ್ಬರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಜನರು ಭಾರೀ ಪ್ರವಾಹಕ್ಕೆ ತುತ್ತಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1,10,731 ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚಿನ ವರದಿ ಪ್ರಕಾರ ಐವರು ಪ್ರವಾಹಕ್ಕೆ ಬಲಿಯಾಗಿದ್ದಾರೆ.
ಓದಿ: ಆಸ್ಪತ್ರೆಯ 4 ನೇ ಮಹಡಿ ಮೇಲಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆಗೆ ಯತ್ನ: Live Video