ETV Bharat / bharat

21 ವರ್ಷಕ್ಕೆ ಬಿಹಾರದ ಗ್ರಾಮ ಪಂಚಾಯಿತಿ ಅಧ್ಯಕ್ಷೆ: ಈಕೆ ಪದವಿ ಪಡೆದಿದ್ದು ಕರ್ನಾಟಕದಲ್ಲಿ - youngest sarpanch

ಕೇವಲ 21 ವರ್ಷಕ್ಕೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದು ಅಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಅನುಷ್ಕಾ (Anushka Kumari) ಹೊಸ ಮೈಲಿಗಲ್ಲು ಸೃಷ್ಟಿಸಿದರು.

Anushka
Anushka
author img

By

Published : Nov 18, 2021, 8:40 PM IST

ಶಿಯೋಹರ್​(ಬಿಹಾರ): ರಾಜ್ಯಗಳಲ್ಲಿ ನಡೆಯುವ ವಿವಿಧ ಚುನಾವಣೆಗಳಲ್ಲಿ ಘಟಾನುಘಟಿಗಳು ಸ್ಪರ್ಧಿಸಿ ಸೋಲು ಕಾಣುವ ಅನೇಕ ಜ್ವಲಂತ ಉದಾಹರಣೆಗಳು ನಮ್ಮ ಕಣ್ಣು ಮುಂದಿವೆ. ಆದರೆ ಬಿಹಾರದಲ್ಲಿ ಕೇವಲ 21 ವರ್ಷದ ಯುವತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗುವ ಮೂಲಕ ಎಲ್ಲರೂ ತಿರುಗಿ ನೋಡುವಂತೆ ಮಾಡಿದ್ದಾರೆ.

ಬಿಹಾರದ ಶಿಯೋಹರ್​​ನ ಕುಶಾಹರ್​ ಪಂಚಾಯಿತಿ ಮುಖ್ಯಸ್ಥೆಯಾಗಿ ಆಯ್ಕೆಯಾಗುವ ಮೂಲಕ ಅತ್ಯಂತ ಕಿರಿಯ ಗ್ರಾಮಾಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಅನುಷ್ಕಾ ಪಾತ್ರವಾಗಿದ್ದಾರೆ.

ಇದನ್ನೂ ಓದಿ: ಮಹಿಳೆ ಮೇಲೆ JCBಯಿಂದ ದಾಳಿಗೆ ಯತ್ನ: ವಿಡಿಯೋ ವೈರಲ್​

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇದೇ ಮೊದಲ ಸಲ ಸ್ಪರ್ಧಿಸಿರುವ ಅನುಷ್ಕಾ ಚೊಚ್ಚಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲೂ ಇವರು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ತಮ್ಮ ಪ್ರತಿಸ್ಪರ್ಧಿ ರೀಟಾದೇವಿ ವಿರುದ್ಧ 287 ಮತಗಳ ಅಂತರದ ಗೆಲುವು ಪಡೆದಿರುವ ಅನುಷ್ಕಾ ಒಟ್ಟು 2,625 ಮತಗಳನ್ನು ಪಡೆದುಕೊಂಡಿದ್ದಾರೆ.

ಹರಿಯಾಣದಲ್ಲಿ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದು ತದನಂತರ ಕರ್ನಾಟಕದ ಬೆಂಗಳೂರಿನಲ್ಲಿ ಇತಿಹಾಸ ಹಾನರ್ಸ್ (History Honours)​ ಪದವಿ ಪಡೆದುಕೊಂಡಿದ್ದರು. ಉನ್ನತ ವ್ಯಾಸಂಗ ಮಾಡುವ ಆಸೆ ಹೊಂದಿರುವುದಾಗಿಯೂ ಅನುಷ್ಕಾ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.