ETV Bharat / bharat

ರಣಹದ್ದುಗಳ ಗಣತಿ-2022 : ಗುಜರಾತ್​ನಲ್ಲಿ ಇಳಿಕೆ ಕಂಡ ಸಂಖ್ಯೆ - ನಿಸರ್ಗದ ಶುಚಿತ್ವ ಕಾಪಾಡುವ ರಣಹದ್ದು

ಗುಜರಾತ್​ನಿಂದ ಅನೇಕ ರಣಹದ್ದುಗಳು ಕಣ್ಮರೆಯಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ಕೈಗಾರಿಕೋದ್ಯ ಹಾಗೂ ನಿಸರ್ಗದ ಮೇಲೆ ಮಾನವನ ಹಸ್ತಕ್ಷೇಪ

2022 ರಣಹದ್ದುಗಳ ಗಣತಿ: ಗುಜರಾತ್​ನಲ್ಲಿ ಇಳಿಕೆ ಕಂಡ ಸಂಖ್ಯೆ
2022 Vulture census: Declining numbers in Gujarat
author img

By

Published : Dec 16, 2022, 11:50 AM IST

ಗಾಂಧಿನಗರ: ಮನುಷ್ಯರಂತೆ ಪ್ರಾಣಿ ಮತ್ತು ಪಕ್ಷಿಗಳ ಜೀವನ ಚಕ್ರವನ್ನು ಪ್ರಕೃತಿ ಸೃಷ್ಟಿಸಿದೆ. ನಿಸರ್ಗದ ಶುಚಿತ್ವ ಕಾಪಾಡುವ ರಣಹದ್ದುಗಳನ್ನು ಪ್ರಕೃತಿಯ ತೋಟಗಾರ ಎಂದೇ ಕರೆಯಲಾಗುತ್ತದೆ. ಈ ರಣಹದ್ದುಗಳ ಕುರಿತು ಗುಜರಾತ್​ ಅರಣ್ಯ ಇಲಾಖೆ ಗಣತಿ ನಡೆಸಿದೆ. ಇದಕ್ಕಾಗಿ ಕೋಟ್ಯಾಂತರ ರೂಪಾಯಿಯನ್ನು ಸರ್ಕಾರ ವ್ಯಯಿಸಿದೆ. 2022ರ ರಣಹದ್ದು ಗಣತಿ ಅನುಸಾರ, ಅವುಗಳ ಸಂಖ್ಯೆ 2018ಕ್ಕೆ ಹೋಲಿಸಿದರೆ 300ರಿಂದ 400ರಷ್ಟು ಕಡಿಮೆಯಾಗಿದೆ.

ಅಭಿವೃದ್ಧಿ ಕೇಂದ್ರವಿಲ್ಲ: ರಣಹದ್ದುಗಳ ಗಣತಿಗೆ ಕೋಟ್ಯಾಂತರ ರೂಪಾಯಿ ವ್ಯಯಿಸಿದರೂ ಅದರ ತಳಿ ಅಭಿವೃದ್ಧಿಗೆ, ಇನ್​ಹೌಸ್​ ಕೇಂದ್ರಗಳನ್ನು ಮಾಡಿಲ್ಲ. ಗುಜರಾತ್​ನಲ್ಲಿ ಒಂದೇ ಒಂದು ಬ್ರೀಡಿಂಗ್​ ಕೇಂದ್ರ ಕೂಡ ಇಲ್ಲ. ಜುನಗಢದಲ್ಲಿ ತಳಿ ಅಭಿವೃದ್ಧಿ ಕೇಂದ್ರ ನಿರ್ಮಾಣ ಮಾಡಲಾಗಿದೆ. ಆದರೆ, ರಾಜ್ಯ ಮಟ್ಟದಲ್ಲಿ ಅವುಗಳ ಸಂಖ್ಯೆ ಹೆಚ್ಚಿಸುವ ತಳಿ ಅಭಿವೃದ್ಧಿ ಕೇಂದ್ರವಿಲ್ಲ. 2022ರ ರಣಹದ್ದು ಗಣತಿಗೆ ಮಾಹಿತಿ ಪಡೆಯಲು 8ರಿಂದ 10 ಕೋಟಿ ವ್ಯಯಿಸಿ ಲೆಕ್ಕಾಚಾರ ನಡೆಸಲಾಗಿದೆ.

2018ರಲ್ಲಿ ಹೀಗಿತ್ತು ಅಂಕಿ ಅಂಶ: ಅಹಮದಾಬಾದ್​ 50 ಅಹಮದಾಬಾದ್ 50, ಅಮರೇಲಿ 27, ಆನಂದ್ 94, ಅರವಳ್ಳಿ 00, ಬನಸ್ಕಾಂತ 79, ಭರೂಚ್ 00, ಭಾವನಗರ 88, ಬೊಟಾಡ್ 00, ಛೋಟಾ ಉದ್ಪುರ್ 00, ದಾಹೋದ್ 00, ಡ್ಯಾಂಗ್ 08, ದ್ವಾರಕಾ 00, ಗಾಂಧಿನಗರ 10, ಗಿರ್ ಸೋಮನಾಥ್, ಜುನಾ 41, 160 ಕಚ್ 44, ಖೇಡಾ 00, ಮಹಿಸಾಗರ್ 21, ಮೆಹ್ಸಾನಾ 59, ಮೊರ್ಬಿ 00, ನರ್ಮದಾ 00, ನವಸಾರಿ 00, ಪಂಚಮಹಲ್ 08, ಪಟಾನ್ 03, ಪೋರಬಂದರ್ 00, ರಾಜ್‌ಕೋಟ್ 00, ಸಬರ್ಕಾಂತ 63, ಸೂರತ್ 00, ಸುರೇಂದ್ರ ವಾಲ್‌ರೋಡ್ 40, ಸುರೇಂದ್ರ ವಾಲ್‌ರೋಡ್ 40, 001, ಬದರೋಡ್ 54 ರಣಹದ್ದುಗಳು ಪತ್ತೆಯಾಗಿವೆ.

2005ರಿಂದ 2018ರವರೆಗೆ ಶೇ 61ರಷ್ಟು ಕುಸಿತ: ಗುಜರಾತ್​ನಲ್ಲಿ ಪ್ರತಿ ಎರಡು ವರ್ಷಕ್ಕೆ ಒಮ್ಮೆ ರಣಹದ್ದುಗಳ ಗಣತಿ ನಡೆಸಲಾಗುತ್ತದೆ. 2005ರಲ್ಲಿ 2647 ರಣಹದ್ದು ಪತ್ತೆಯಾಗಿವೆ. 2007ರಲ್ಲಿ 1431, 2010ರಲ್ಲಿ 1065, 2012ರಲ್ಲಿ 1043, 2018ರಲ್ಲಿ 820 ಇದೆ. 2022ರ ಗಣತಿಯ ನಿಖರ ಅಂಕಿ ಅಂಶ ಬರಬೇಕಿದೆ. ಆದರೆ, ರಣಹದ್ದುಗಳ ಸಂಖ್ಯೆ ಕಡಿಮೆ ಆಗಿರುವುದು ದಾಖಲಾಗಿದೆ. ಪ್ರಸ್ತುತ ಗುಜರಾತ್​ನಲ್ಲಿ 500ರಿಂದ 600 ರಣಹದ್ದುಗಳಿದ್ದು, 300 ರಣಹದ್ದುಗಳು ಕಡಿಮೆಯಾಗಿದೆ ಎಂದು ವನ್ಯಜೀವ ಸಹಾಯಕ ಮನ್ನ ಭಟ್​ ತಿಳಿಸಿದ್ದಾರೆ.

ಇಳಿಮುಖ ಯಾಕೆ: ರಣಹದ್ದುಗಳ ಸಂಖ್ಯೆ ಇಳಿಕೆ ಮುಖವಾಗುತ್ತಿರುವ ಕುರತು ಈಟಿವಿ ಭಾರತದೊಂದಿಗೆ ಮಾತನಾಡಿದ್ದ ಮಯಾಂಕ್​ ಪಟೇಲ್​, ನಿಸರ್ಗವನ್ನು ಸ್ವಚ್ಛವಾಗಿಡುವ ರಣಹದ್ದುಗಳ ಸಂಖ್ಯೆ ಅನೇಕ ವರ್ಷಗಳಿಂದ ಕಡಿಮೆಯಾಗುತ್ತಿದೆ. ಗುಜರಾತ್​ನಿಂದಲೂ ಅನೇಕ ರಣಹದ್ದುಗಳು ಕಣ್ಮರೆಯಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ಕೈಗಾರಿಕೋದ್ಯ ಹಾಗೂ ನಿಸರ್ಗದ ಮೇಲೆ ಮಾನವನ ಹಸ್ತಕ್ಷೇಪ. ಅರಣ್ಯಗಳನ್ನು ಬೆಳೆಸುವುದು ಮತ್ತು ಸತ್ತ ಹಸುಗಳನ್ನು ವ್ಯವಸ್ಥಿತವಾಗಿ ಡಂಪ್​ ಮಾಡುವ ಮೂಲಕ ರಣಹದ್ದುಗಳಿಗೆ ಆಹಾರ ಒದಗಿಸುವ ಕಾರ್ಯಗಳು ಆಗಬೇಕು ಎನ್ನುತ್ತಾರೆ

ಗಿರ್​ ಫೌಂಡೇಷನ್​ ವರದಿ : 2018ರಲ್ಲಿ ರಣಹದ್ದು ಗಣತಿಯನ್ನು ಗಿರ್​ ಫೌಂಡೇಷನ್​ ನಡೆಸಿತ್ತು. ಗುಜರಾತ್​ನ 33 ಜಿಲ್ಲೆಗಳಲ್ಲಿ 820 ವಿಭಿನ್ನ ಪ್ರಭೇಧಗಳು ದಾಖಲಾಗಿದ್ದವು. ಬಿಳಿ ಬೆನ್ನಿನ ರಣಹದ್ದು ಮುಂದಿನ ದಿನಗಳಲ್ಲಿ ಅಳಿವಿನ ಸಾಧ್ಯತೆ ಇದೆ. ಇದರ ಜೊತೆ ಗಿರಿನಾರಿ ರಣಹದ್ದು ಮುಂದಿನ 25 ವರ್ಷಗಳಲ್ಲಿ ಜನಸಂಖ್ಯೆಯಲ್ಲಿ ಎರಡೂ ಜಾತಿಯ ರಣಹದ್ದುಗಳು ನಾಶವಾಗುವ ಸಾಧ್ಯತೆಯನ್ನು ಗಿರ್ ಫೌಂಡೇಶನ್ ತೋರಿಸಿದೆ.

ಆಹಾರ ವಲಯ: ಜುನಾಗಢನಲ್ಲಿ ಆಹಾರ ವಲಯವನ್ನು ತಯಾರಿಸಲಾಗಿದೆ. ರಣಹದ್ದುಗಳಿಗಾಗಿ ರೂಪಿಸಿರುವ ಈ ಆಹಾರ ವಲಯದಲ್ಲಿ ಬೇರೆ ಯಾವುದೇ ಪ್ರಾಣಿಗಳು ಪ್ರವೇಶಿಸದಂತೆ ಕವರ್​ ಮಾಡಲಾಗಿದೆ. ಅಮ್ರೆಲಿ, ಭವ್ನಾಗರ್​, ಮೆಹ್ನಾನ್​, ಕಚ್​, ಡಂಗ್​, ಬಸನಸ್ಕಾಂತ ಮತ್ತು ವಿಜಯನಗರದಲ್ಲೂ ಕೂಡ ರಣಹದ್ದುಗಳಿಗೆ ಆಹಾರ ವಲಯ ಅಭಿವೃದ್ಧಿಗೆ ಕಾರ್ಯಕ್ಕೆ ಮುಂದಾಗಲಾಗಿದೆ.

ರಾಜ್ಯದ ಎರಡು ಜಿಲ್ಲೆಗಳಲ್ಲಿ ರಣಹದ್ದು ಕೇಂದ್ರ: ಸಂರಕ್ಷಣ ಮತ್ತು ತಳಿ ಅಭಿವೃದ್ಧಿ ಕೇಂದ್ರವನ್ನು ಈ ಹಿಂದೆಯೇ ಗುಜರಾತ್​ನ ಸಕ್ಕರ್ಬಾಗ್​ನಲ್ಲಿ ನಿರ್ಮಾಣ ಮಾಡಲಾಗಿದೆ. ಗುಜರಾತ್​ನಲ್ಲಿರುವ ರಣಹದ್ದುಗಳ ಸಂರಕ್ಷಣೆ ಮತ್ತು ಜಾಗೃತಿಯ ಏಕೈಕ ಕೇಂದ್ರ ಇದಾಗಿದೆ. 2018ರ ಏಪ್ರಿಲ್​ 5ರಂದು ರಾಜ್ಯ ಸರ್ಕಾರ ಈ ಸಂಬಂಧ ನಿರ್ಣಯವೊಂದನ್ನು ಪಾಸ್​ ಮಾಡಿದ್ದು, ಮತ್ತೊಂದು ಕೇಂದ್ರ ಸ್ಥಾನಕ್ಕೆ ಅವಕಾಶ ನೀಡಿದೆ. ಇದರ ಅನುಸಾರ ಸುರೇಂದ್ರನಗರ ಮತ್ತು ಬನಸ್ಕಾಂತದಲ್ಲಿ ರಣಹದ್ದು ಸಂರಕ್ಷಣಾ ಕೇಂದ್ರ ಸ್ಥಾಪನೆ ಯೋಜನೆ ರೂಪಿಸಲಾಗಿದೆ.

ಸಚಿವರಿಂದ ಪ್ರಕಟ: ಈಗಾಗಲೇ ಗಣತಿ ಮುಗಿದಿದ್ದು, ಇದರ ಸ್ಪಷ್ಟ ಅಂಕಿ ಅಂಶವನ್ನು ರಾಜ್ಯ ಅರಣ್ಯ ಸಚಿವ ಮುಲು ಬೆರ ಪ್ರಕಟಿಸಲಿದ್ದಾರೆ.

ಇದನ್ನೂ ಓದಿ: ಮೊಟ್ಟಮೊದಲ ಬಾರಿಗೆ ನಾಮಕ್ಕಲ್‌ನಿಂದ ಮಲೇಷ್ಯಾಕ್ಕೆ 90 ಸಾವಿರ ಮೊಟ್ಟೆ ರಫ್ತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.