ETV Bharat / bharat

ಉಕ್ರೇನ್‌ನಿಂದ 2,000 ಭಾರತೀಯರು ತಾಯ್ನಾಡಿಗೆ ವಾಪಸ್‌ : ವಿದೇಶಾಂಗ ಕಾರ್ಯದರ್ಶಿ ಶ್ರಿಂಗ್ಲಾ - ಉಕ್ರೇನ್‌ ಮೇಲೆ ರಷ್ಯಾ ದಾಳಿ

ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ವಿದೇಶಾಂಗ ವ್ಯವಹಾರಗಳ ಸಚಿವರ ನೇರ ಮೇಲ್ವಿಚಾರಣೆಯಲ್ಲಿ ಹಾಗೂ ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಉಕ್ರೇನ್‌ನಲ್ಲಿರುವ ನಮ್ಮ ನಾಗರಿಕರ ಸುರಕ್ಷತೆ, ಭದ್ರತೆ ಮತ್ತು ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ ಎಂದಿದ್ದಾರೆ..

2,000 Indians evacuated from Ukraine: Foreign secretary
ಉಕ್ರೇನ್‌ನಿಂದ 2,000 ಭಾರತೀಯರು ತಾಯ್ನಾಡಿಗೆ ವಾಪಸ್‌: ವಿದೇಶಾಂಗ ಕಾರ್ಯದರ್ಶಿ ಶ್ರಿಂಗ್ಲಾ
author img

By

Published : Feb 28, 2022, 11:37 AM IST

ನವದೆಹಲಿ : ಯುದ್ಧದ ಪರಿಸ್ಥಿಯನ್ನು ಎದುರಿಸುತ್ತಿರುವ ಉಕ್ರೇನ್‌ ದೇಶದ ಹಲವು ನಗರಗಳಲ್ಲಿ ಸಿಲಿಕಿರುವ ಭಾರತೀಯರ ರಕ್ಷಣೆಯೇ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದಿರುವ ಕೇಂದ್ರ ಸರ್ಕಾರ, ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳನ್ನು ದೇಶಕ್ಕೆ ವಾಪಸ್‌ ಕರೆತರಲು ಪರ್ಯಾಯ ರಸ್ತೆ ಮಾರ್ಗಗಳು ಸೇರಿದಂತೆ ಲಭ್ಯ ಇರುವ ಎಲ್ಲಾ ಕಾರ್ಯತಂತ್ರಗಳನ್ನು ಅನುಸರಿಸುತ್ತಿದೆ.

ಭಾರತೀಯರನ್ನು ಉಕ್ರೇನ್‌ನಿಂದ ಸ್ಥಳಾಂತರಿಸುವ ವಿಚಾರವಾಗಿ ಭಾರತ ಸರ್ಕಾರದ ಅಧಿಕಾರಿಗಳು ಜಿನೀವಾದಲ್ಲಿರುವ ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿಯನ್ನು (ಐಸಿಆರ್‌ಸಿ) ಸಂಪರ್ಕಿಸಿದ್ದಾರೆ.

ನಾಗರಿಕರ ಭದ್ರತಾ ಹಿತಾಸಕ್ತಿಗಳನ್ನು ಅರಿತುಕೊಳ್ಳಲು ಮತ್ತು ಉಕ್ರೇನ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಸಾಧ್ಯವಿರುವಲ್ಲೆಲ್ಲಾ ಅವರನ್ನು ಹೊರಗೆ ಕರೆದೊಯ್ಯುವಂತೆ ವಿನಂತಿ ಮಾಡಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹೇಳಿದ್ದಾರೆ.

ಭಾರತವು ಉಕ್ರೇನ್‌ನಿಂದ ಈವರೆಗೆ ಸುಮಾರು 2,000 ನಾಗರಿಕರನ್ನು ಸ್ಥಳಾಂತರಿಸಿದೆ. ಇದರಲ್ಲಿ 1,000 ಮಂದಿಯನ್ನು ಹಂಗೇರಿ ಮತ್ತು ರೊಮೇನಿಯಾದಿಂದ ಚಾರ್ಟರ್ಡ್ ವಿಮಾನಗಳಲ್ಲಿ ಮನೆಗೆ ಕರೆತರಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶ್ರಿಂಗ್ಲಾ ತಿಳಿಸಿದ್ದಾರೆ.

'ರಷ್ಯಾ, ಉಕ್ರೇನ್‌ ಜೊತೆ ಮಾತುಕತೆ'

ರಷ್ಯಾ ಮತ್ತು ಉಕ್ರೇನ್‌ನ ರಾಯಭಾರಿಗಳ ಜೊತೆ ಪ್ರತ್ಯೇಕವಾಗಿ ಮಾತನಾಡಲಾಗಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಸರ್ಕಾರದ ಆಳವಾದ ಕಳವಳವನ್ನು ಅವರಿಗೆ ತಿಳಿಸಲಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ವಿದೇಶಾಂಗ ವ್ಯವಹಾರಗಳ ಸಚಿವರ ನೇರ ಮೇಲ್ವಿಚಾರಣೆಯಲ್ಲಿ ಹಾಗೂ ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಉಕ್ರೇನ್‌ನಲ್ಲಿರುವ ನಮ್ಮ ನಾಗರಿಕರ ಸುರಕ್ಷತೆ, ಭದ್ರತೆ ಮತ್ತು ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ ಎಂದಿದ್ದಾರೆ.

ಈ ಸಂಬಂಧಿತ ಬೆಳವಣಿಗೆಯಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮೊಲ್ಡೋವಿಯನ್‌ ವಿದೇಶಾಂಗ ಸಚಿವ ನಿಕು ಪೊಪೆಸ್ಕು ಅವರೊಂದಿಗೆ ಮಾತನಾಡಿದ್ದಾರೆ. ಉಕ್ರೇನ್-ಮೊಲ್ಡೊವಾ ಗಡಿಯಲ್ಲಿ ಭಾರತೀಯರ ಪ್ರವೇಶವನ್ನು ಸುಲಭಗೊಳಿಸಲು ಬೆಂಬಲವನ್ನು ಕೋರಿರುವುದಾಗಿಯೂ ಶ್ರಿಂಗ್ಲಾ ವಿವರಿಸಿದ್ದಾರೆ.

ಇದನ್ನೂ ಓದಿ: ಉಕ್ರೇನ್‌ನ ಅತಿ ದೊಡ್ಡ 'ಕನಸು' ನಾಶಪಡಿಸಿದ ರಷ್ಯಾ ಸೇನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.