ತಪಿ (ಗುಜರಾತ್): ಗುಜರಾತ್ ರಾಜ್ಯದಾದ್ಯಂತ ಬಾರಿ ಮಳೆಯಾಗುತ್ತಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ನಿನ್ನೆ ಉಕೈ ಡ್ಯಾಂನಿಂದ ತಾಪಿ ಜಿಲ್ಲೆಯ ತಾಪಿ ನದಿಗೆ ಸುಮಾರು 2 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಉಕೈ ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
-
#WATCH | About 2 lakh cusecs of water was released from Ukai Dam into Tapi river in Tapi district of Gujarat earlier today. pic.twitter.com/aoPpvuRYiN
— ANI (@ANI) September 29, 2021 " class="align-text-top noRightClick twitterSection" data="
">#WATCH | About 2 lakh cusecs of water was released from Ukai Dam into Tapi river in Tapi district of Gujarat earlier today. pic.twitter.com/aoPpvuRYiN
— ANI (@ANI) September 29, 2021#WATCH | About 2 lakh cusecs of water was released from Ukai Dam into Tapi river in Tapi district of Gujarat earlier today. pic.twitter.com/aoPpvuRYiN
— ANI (@ANI) September 29, 2021
ಮುಂದಿನ ಎರಡು ದಿನಗಳಲ್ಲಿ ಗುಜರಾತ್‌ನಾದ್ಯಂತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ಮುನ್ಸೂಚನೆ ನೀಡಿದೆ. ಇಂದು ಮತ್ತು ನಾಳೆ ರಾಜ್ಯದ ಹಲವೆಡೆ ಹೆಚ್ಚು ಮಳೆ ಸುರಿಯವ ಸಾಧ್ಯತೆಗಳಿವೆ.
ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ರಾಜಕೀಯ ದಿಢೀರ್ ಬೆಳವಣಿಗೆ; ಕಾಂಗ್ರೆಸ್‌ನ 15 ಶಾಸಕರು ದೆಹಲಿಗೆ ದೌಡು
ಅಕ್ಟೋಬರ್ 2 ರವರೆಗೆ ಮೀನುಗಾರರು ಅರಬ್ಬಿ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ. ಸಮುದ್ರದಲ್ಲಿ ಇರುವ ಮೀನುಗಾರರನ್ನು ನಿನ್ನೆಯೇ ಸಂಜೆಯೊಳಗೆ ಮರಳಿ ಬರುವಂತೆ ಐಎಂಡಿ ಸೂಚಿಸಿತ್ತು. ಮಳೆಯ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು, ಅಕ್ಟೋಬರ್ 2 ರವರೆಗೆ ಎಲ್ಲ ಮೀನುಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಲಾಗಿದೆ.