ಹೈದರಾಬಾದ್ : ಕಸ್ಟಮ್ಸ್ ಇಲಾಖೆ ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ( ಸಿಐಎಸ್ಎಫ್) ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಏರ್ಪೋರ್ಟ್ನಲ್ಲಿ ಕಾರ್ಯಾಚರಣೆ ನಡೆಸಿದ್ದು, ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ 1.15 ಕೋಟಿ ರೂಪಾಯಿ ಮೌಲ್ಯದ ಸುಮಾರು ಎರಡೂವರೆ ಕೆಜಿ ಚಿನ್ನ ಜಪ್ತಿ ಮಾಡಿದೆ.
ದುಬೈನಿಂದ ಬರುತ್ತಿದ್ದ ಐವರು ಪ್ರಯಾಣಿಕರ ಲಗೇಜುಗಳನ್ನು ತಪಾಸಣೆ ನಡೆಸಿದಾಗ ಮಿಕ್ಸರ್ ಗ್ರೈಂಡರ್ ಮೋಟಾರ್ ಮತ್ತು ಜಾರ್ಗಳ ಚಾಕುಗಳಲ್ಲಿ ಚಿನ್ನ ಸಾಗಿಸುತ್ತಿದ್ದದು ಪತ್ತೆಯಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಬಿಜೆಪಿ ಕ್ಯಾಂಪೇನ್ಗೆ ಕಾಂಗ್ರೆಸ್ನ ನಾಯಕ ಚಿದಂಬರಂ ಸೊಸೆ ಭಾವಚಿತ್ರ ಬಳಕೆ!
ದುಬೈನಿಂದ ಬಂದ ವಿಮಾನ ಸಂಖ್ಯೆ FZ-8779ರಲ್ಲಿ ಚಿನ್ನ ಕಳ್ಳಸಾಗಣೆ ನಡೆಲಾಗುತ್ತಿತ್ತು. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ವಿದೇಶಿ ಕರೆನ್ಸಿ ಜಪ್ತಿ : ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ 30 ಸಾವಿರ ಅಮೆರಿಕನ್ ಡಾಲರ್‌ನ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. ದುಬೈನಿಂದ FZ8776 ವಿಮಾನದಲ್ಲಿ ಪ್ರಯಾಣಿಕ ಆಗಮಿಸಿದ್ದು, ಕಸ್ಟಂ ಆ್ಯಕ್ಟ್ 1962ರ ಅನ್ವಯ ವ್ಯಕ್ತಿಯನ್ನು ಬಂಧಿಸಲಾಗಿದೆ.
ಆತ ಸಾಗಿಸುತ್ತಿದ್ದ ಅಮೆರಿಕನ್ ಕರೆನ್ಸಿಯ ಭಾರತದ ಮೌಲ್ಯ 21 ಲಕ್ಷದ 48 ಸಾವಿರ ರೂಪಾಯಿಯಾಗಿದೆ. ಮಾರ್ಚ್ 24ರಂದು ಕೂಡ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಸುಮಾರು 1.3 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ಜಪ್ತಿ ಮಾಡಲಾಗಿತ್ತು.