ಪುಣೆ (ಮಹಾರಾಷ್ಟ್ರ): ಕೋವಿಶೀಲ್ಡ್ ಲಸಿಕೆಗಳ ಮೊದಲ ರವಾನೆ(ಕನ್ಸೈನ್ಮೆಂಟ್) ಜನವರಿ 16ರಂದು ರಾಷ್ಟ್ರವ್ಯಾಪಿ ಇನಾಕ್ಯುಲೇಷನ್ ಡ್ರೈವ್‌ಲಾಂಚ್‌ಗೆ ಮುಂಚಿತವಾಗಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಹೊರಟಿದ್ದು, ವಾಹನಗಳು ಹೊರಡುವ ಮೊದಲು ಪೂಜೆ ನಡೆಸಲಾಯಿತು.
ತಾಪಮಾನ ನಿಯಂತ್ರಿತ ಮೂರು ಟ್ರಕ್‌ಗಳು ಸೀರಮ್ ಇನ್‌ಸ್ಟಿಟ್ಯೂಟ್‌ನ ಗೇಟ್‌ಗಳಿಂದ ಮುಂಜಾನೆ 5 ಗಂಟೆಯ ಸುಮಾರಿಗೆ ಹೊರಟು ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿದ್ದು, ಅಲ್ಲಿಂದ ಭಾರತದಾದ್ಯಂತ ಲಸಿಕೆಗಳನ್ನು ತಲುಪಿಸಲಾಗುತ್ತದೆ.
ದೆಹಲಿ ತಲುಪಿದ ವ್ಯಾಕ್ಸಿನ್:
ಪುಣೆಯಿಂದ ವ್ಯಾಕ್ಸಿನ್ ಹೊತ್ತು ಸಾಗಿದ ಸ್ಪೈಸ್ಜೆಟ್ ವಿಮಾನ ಈಗಾಗಲೇ ರಾಷ್ಟ್ರರಾಜಧಾನಿ ತಲುಪಿದೆ. 1088 ಕೆಜಿ ತೂಕದ ಒಟ್ಟು 34 ಪೆಟ್ಟಿಗೆಗಳು ದೆಹಲಿ ತಲುಪಿವೆ.
ಇನ್ನುಳಿದಂತೆ ಅಹಮದಾಬಾದ್, ಕೋಲ್ಕತಾ, ಚೆನ್ನೈ, ಬೆಂಗಳೂರು, ಕರ್ನೂಲ್, ಹೈದರಾಬಾದ್, ವಿಜಯವಾಡ, ಗುವಾಹಟಿ, ಲಖನೌ, ಚಂಡೀಗಢ ಮತ್ತು ಭುವನೇಶ್ವರ ಸೇರಿದಂತೆ 13 ಸ್ಥಳಗಳಿಗೆ ತಲುಪಲಿವೆ.
ಟ್ರಕ್‌ಗಳು ಲಸಿಕೆಗಳ 478 ಪೆಟ್ಟಿಗೆಗಳನ್ನು ಹೊತ್ತೊಯ್ದಿದ್ದು, ಪ್ರತಿ ಪೆಟ್ಟಿಗೆಯ ತೂಕ 32 ಕೆ.ಜಿ. ಇದೆ. ಬೆಳಗ್ಗೆ 10ರೊಳಗೆ ಸರಕುಗಳನ್ನು ಈ ಮೇಲಿನ ಸ್ಥಳಗಳಿಗೆ ರವಾನಿಸಲಾಗುವುದು.
ಜನವರಿ 16ರಿಂದ ಪ್ರಾರಂಭವಾಗಲಿರುವ ವ್ಯಾಕ್ಸಿನೇಷನ್ ಡ್ರೈವ್‌ನ ಮೊದಲ ಹಂತದಲ್ಲಿ ಮೂರು ಕೋಟಿ ಆರೋಗ್ಯ ಮತ್ತು ಮುಂಚೂಣಿ ಕಾರ್ಮಿಕರಿಗೆ ಚುಚ್ಚುಮದ್ದು, ನೀಡಲು ಕೇಂದ್ರ ಸರ್ಕಾರ ಸೀರಮ್ ಇನ್‌ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್‌ನಿಂದ 6 ಕೋಟಿ ಡೋಸ್ ಕೋವಿಡ್ ಲಸಿಕೆಗಾಗಿ ಆದೇಶ ನೀಡಿದೆ.