ETV Bharat / bharat

ಸೂರತ್‌ನಲ್ಲಿದೆ ವಜ್ರದಿಂದ ಅಲಂಕರಿಸಿದ 19 ಕೆಜಿ ಚಿನ್ನದ ರಾಮಾಯಣ ಪುಸ್ತಕ..! - ಬಂಗಾರದ ರಾಮಾಯಣ ಪುಸ್ತಕ

ವಜ್ರಗಳು ಮತ್ತು ಇತರ ಅಮೂಲ್ಯ ರತ್ನಗಳಿಂದ ಅಲಂಕರಿಸಲ್ಪಟ್ಟ ಚಿನ್ನದ ರಾಮಾಯಣ ಪುಸ್ತಕವನ್ನು ವರ್ಷಕ್ಕೊಮ್ಮೆ ರಾಮನವಮಿಯ ಸಂದರ್ಭದಲ್ಲಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ.

19 kg gold Ramayana decked with diamond
ಗುಜರಾತ್​ ರಾಜ್ಯದ ಸೂರತ್‌ನಲ್ಲಿದೆ ವಜ್ರದಿಂದ ಅಲಂಕರಿಸಿದ 19 ಕೆಜಿ ಚಿನ್ನದ ರಾಮಾಯಣ ಪುಸ್ತಕ
author img

By

Published : Mar 30, 2023, 6:16 PM IST

ಗುಜರಾತ್​ ರಾಜ್ಯದ ಸೂರತ್‌ನಲ್ಲಿದೆ ವಜ್ರದಿಂದ ಅಲಂಕರಿಸಿದ 19 ಕೆಜಿ ಚಿನ್ನದ ರಾಮಾಯಣ ಪುಸ್ತಕ

ಸೂರತ್ (ಗುಜರಾತ್): ಈ ರಾಮನವಮಿ ದಿನದಂದು ಭವ್ಯ ಮೆರವಣಿಗೆ ನಡೆಸಲಾಗುತ್ತದೆ. ಜೊತೆಗೆ ರಾಮ ದೇವರ ದೇವಸ್ಥಾನಗಳಿಗೆ ತೆರಳಿ ಆಶೀರ್ವಾದ ಪಡೆದುಕೊಂಡು ಜನರು ಪುನೀತರಾಗುತ್ತಾರೆ. ಆದರೆ, ಇಲ್ಲೊಂದು ಪ್ರದೇಶದಲ್ಲಿ ಅಮೂಲ್ಯ ರತ್ನಗಳಿಂದ ಅಲಂಕರಿಸಲ್ಪಟ್ಟ ಚಿನ್ನದ ರಾಮಾಯಣ ಪುಸ್ತಕವನ್ನು ವಿಶೇಷವಾಗಿ ಪೂಜಿಸುವ ಸಂಪ್ರದಾಯ ಇಲ್ಲಿದೆ. ಹೌದು, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)ಯಿಂದ ಸೂರತ್‌ನಲ್ಲಿ ಹೊರಡುವ ಭವ್ಯ ಮೆರವಣಿಗೆಯಲ್ಲಿ 19 ಕೆಜಿ ಚಿನ್ನದಿಂದ ತಯಾರಿಸಿರುವ ಅಪರೂಪದ ರಾಮಾಯಣ ಪುಸ್ತಕವನ್ನು ಪ್ರದರ್ಶಿಸಲಾಗುತ್ತದೆ.

ಸ್ವರ್ಣ ರಾಮಾಯಣ ಪುಸ್ತಕ ಸಿದ್ಧಪಡಿಸಿದ್ದು ಹೇಗೆ?: ಈ ವಿಸ್ಮಯಕಾರಿಯಾಗಿ ಕಾಣುವ ಪುಸ್ತಕವನ್ನು ಚಿನ್ನ ಹಾಗೂ ವಿವಿಧ ರತ್ನಗಳಿಂದ ಅಲಂಕರಿಸಲಾಗಿದ್ದು, ಮಾತ್ರವಲ್ಲದೇ ರಾಮಾಯಣ ಮಹಾಕಾವ್ಯವನ್ನು ಬರೆಯಲು ಬಳಸುವ ಶಾಯಿ ಕೂಡ ಚಿನ್ನದಿಂದಲೇ ಮಾಡಲ್ಪಟ್ಟಿದೆ. ಇದಲ್ಲದೆ, ಪುಸ್ತಕವು 10 ಕಿಲೋ ಬೆಳ್ಳಿ, ನಾಲ್ಕು ಸಾವಿರ ವಜ್ರಗಳು, ಮಾಣಿಕ್ಯಗಳು, ಪಚ್ಚೆಗಳು ಮತ್ತು ನೀಲಮಣಿಗಳಿಂದ ವಿಶೇಷವಾಗಿ ಅಲಂಕರಿಸಲ್ಪಟ್ಟಿದೆ. ಇದರ ಮಾರುಕಟ್ಟೆ ಮೌಲ್ಯ ಕೋಟಿಗಟ್ಟಲೆ ಇದೆ.

ಇದನ್ನೂ ಓದಿ: ಶ್ರೀರಾಮನ ಬದುಕು ಪ್ರತಿ ಯುಗದ ಮಾನವೀಯತೆಗೆ ಸ್ಫೂರ್ತಿ: ಪ್ರಧಾನಿ ಮೋದಿ

ಬಂಗಾರದ ರಾಮಾಯಣ ಪುಸ್ತಕದ ವಿಶೇಷವೇನು ಗೊತ್ತಾ?: ವಿಎಚ್‌ಪಿಯ ರ‍್ಯಾಲಿಯಲ್ಲಿ ರಾಮನವಮಿಯ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ಮಾತ್ರ ಸಾರ್ವಜನಿಕ ವೀಕ್ಷಣೆಗೆ ಅಮೂಲ್ಯವಾದ ಪುಸ್ತಕವನ್ನು ತೆರೆಯಲಾಗುತ್ತದೆ. ನಂತರ ಅದನ್ನು ಬ್ಯಾಂಕಿಗೆ ಹಿಂತಿರುಗಿಸಲಾಗುತ್ತದೆ. ಸ್ವರ್ಣ ರಾಮಾಯಣ ಎಂದು ಕರೆಯಲ್ಪಡುವ ಇದರ ಮುಖ್ಯ ಪುಟದಲ್ಲಿ 11.6 ಗ್ರಾಂ ಚಿನ್ನದಿಂದ ಮಾಡಿದ ಶಿವ ಮತ್ತು 5.8 ಗ್ರಾಂ ಚಿನ್ನದಿಂದ ಮಾಡಿದ ಹನುಮಂತನ ವಿಗ್ರಹವಿದೆ. 1981ರಲ್ಲಿ ರಾಮ್ ಭಾಯ್ ಭಕ್ತ ಬರೆದ, 530 ಪುಟಗಳ ಪುಸ್ತಕವನ್ನು 9 ತಿಂಗಳು ಮತ್ತು 9 ಗಂಟೆಗಳಲ್ಲಿ 12 ಜನರು ಪೂರ್ಣಗೊಳಿಸಿದ್ದಾರೆ. ಈ ಪುಸ್ತಕವು ಈ ರಾಮಾಯಣದಲ್ಲಿ ಭಗವಾನ್ ರಾಮನ ಹೆಸರನ್ನು 50 ಮಿಲಿಯನ್ ಬಾರಿ ಉಲ್ಲೇಖಿಸುತ್ತದೆ.

ಇದನ್ನೂ ಓದಿ: ಸನಾತನ ಧರ್ಮಕ್ಕೆ ಯಾರ ಪ್ರಮಾಣಪತ್ರವೂ ಬೇಕಿಲ್ಲ: ಮೋಹನ್​ ಭಾಗವತ್​

ಚಿನ್ನದ ರಾಮಾಯಣದ ಬಗ್ಗೆ ಗುಣವಂತ್ ಭಾಯ್ ಹೇಳಿದ್ದೇನು?: ಸುದ್ದಿಗಾರರೊಂದಿಗೆ ಮಾತನಾಡಿದ ರಂಭಾಯ್ ಭಕ್ತನ ಸಂಬಂಧಿ ಗುಣವಂತ್ ಭಾಯ್ ಅವರು, ''ಪುಟಗಳನ್ನು ಜರ್ಮನಿಯಿಂದ ಆರ್ಡರ್ ಮಾಡಲಾಗಿದೆ. ಆಮದು ಮಾಡಿದ ಕಾಗದಗಳು ಎಷ್ಟು ಗುಣಮಟ್ಟದ್ದಾಗಿರುತ್ತವೆ ಎಂದರೆ ಅದನ್ನು ನೀರಿನಿಂದ ತೊಳೆದರೆ ಶಾಯಿಗೆ ಯಾವುದೇ ಹಾನಿಯಾಗುವುದಿಲ್ಲ'' ಎಂದು ಹೇಳಿದರು. ಗುಣವಂತ್ ಪ್ರಕಾರ, ಕಾಗದವನ್ನು ಪದೇ ಪದೇ ಕೈಯಿಂದ ಮುಟ್ಟಿದರೂ ಕಲೆಯಾಗುವುದಿಲ್ಲ. ಭಕ್ತರು ಪುಸ್ತಕವನ್ನು ಅತ್ಯಂತ ಗೌರವದಿಂದ ಹಿಡಿದು, ದರ್ಶನ ಪಡೆದರೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯೂ ಇದೆ. ವಜ್ರಗಳು ಮತ್ತು ವಿವಿಧ ರತ್ನಗಳಿಂದ ವಿಶೇಷವಾಗಿ ಅಲಂಕರಿಸಲ್ಪಟ್ಟ ಚಿನ್ನದ ರಾಮಾಯಣವನ್ನು ವರ್ಷಕ್ಕೊಮ್ಮೆ ರಾಮನವಮಿ ದಿನದಂದು ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಹೇಳುತ್ತಾರೆ ಅವರು.

ಇದನ್ನೂ ಓದಿ: ರಾಮನವಮಿ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ.. ವಡೋದರಾದಲ್ಲಿ ಪೊಲೀಸರು ಹೈ ಅಲರ್ಟ್

ಇದನ್ನೂ ಓದಿ:ದೇವಸ್ಥಾನದಲ್ಲಿ ಬಾವಿಯ ಮೇಲ್ಛಾವಣಿ ಕುಸಿತ: ಮಹಿಳೆಯರು ಸೇರಿ ಐವರ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.