ಶ್ರೀನಗರ(ಜಮ್ಮು ಕಾಶ್ಮೀರ): ಕಣಿವೆನಾಡಿನ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಇತ್ತೀಚೆಗೆ ಭಾರಿ ಹಿನ್ನಡೆ ಅನುಭವಿಸುತ್ತಿದೆ. ಸೋಮವಾರಷ್ಟೇ ಪಕ್ಷ ತೊರೆದ ದೇವೆಂದರ್ ರಾಣಾ ಮತ್ತು ಸುರ್ಜಿತ್ ಸಿಂಗ್ ಸ್ಲಾಥಿಯಾ ಎಂಬುವವರು ಬಿಜೆಪಿ ಸೇರ್ಪಡೆಯಾಗಿದ್ದರು. ಈ ಬೆನ್ನಲ್ಲೇ 17 ನಾಯಕರು ಬಿಜೆಪಿಗೆ ಮಂಗಳವಾರ ಸೇರಿದ್ದಾರೆ.
ಈ ಹದಿನೇಳು ನಾಯಕರು ಸೋಮವಾರ ತಮ್ಮ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಅವರಲ್ಲಿ ಓರ್ವ ಪ್ರಾಂತೀಯ ಕಾರ್ಯದರ್ಶಿ, ಇಬ್ಬರು ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಇಬ್ಬರು ಜಮ್ಮು ಮುನಿಸಿಪಲ್ ಕಾರ್ಪೋರೇಷನ್ನ ಕಾರ್ಪೊರೇಟರ್ಗಳೂ ಇದ್ದರು.
ಸೋಮವಾರ ರಾಜೀನಾಮೆ ನೀಡಿದ್ದ ಇಬ್ಬರು ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇನ್ನು ದೇವೆಂದರ್ ರಾಣಾ ಮತ್ತು ಸುರ್ಜಿತ್ ಸಿಂಗ್ ಸ್ಲಾಥಿಯಾ ಅವರನ್ನು ಸೋಮವಾರ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಹರದೀಪ್ ಸಿಂಗ್ ಪುರಿ ಅವರು ಬರಮಾಡಿಕೊಂಡಿದ್ದರು.
ಈ ಕುರಿತ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ..
ಇದನ್ನೂ ಓದಿ: ಪ್ರಸ್ತುತ ವಿಶ್ವ ಕ್ರಿಕೆಟ್ ಅನ್ನು ಭಾರತ ನಿಯಂತ್ರಿಸುತ್ತಿದೆ: ಪಾಕ್ ಪ್ರಧಾನಿ ಇಮ್ರಾನ್ ಖಾನ್