ಮುಂಬೈ: ಮೊಬೈಲ್ನಲ್ಲಿ ಗೇಮ್ ಆಡುವ ವಿಚಾರಕ್ಕೆ ಜಗಳವಾಗಿ, ಸಹೋದರ ತನಗೆ ಮೊಬೈಲ್ ನೀಡಲಿಲ್ಲ ಎಂದು ನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಮಹಾರಾಷ್ಟ್ರದ ಮುಂಬೈನಲ್ಲಿ ಈ ಘಟನೆ ನಡೆದಿದೆ.
ಥಾಣೆಯ ಸಮತಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. 16 ವರ್ಷದ ಬಾಲಕಿ ಹಾಗೂ ಆಕೆಯ ಕಿರಿಯ ಸಹೋದರನ ಮೊಬೈಲ್ಗಾಗಿ ಕಿತ್ತಾಟ ನಡೆದಿದೆ. ಮೊಬೈಲ್ ಕೇಳಿದರೂ ಸಹೋದರ ಕೊಡದ್ದರಿಂದ ಬೇಸರಗೊಂಡ ಬಾಲಕಿಯು ಮೆಡಿಕಲ್ ಶಾಪ್ಗೆ ತೆರಳಿ ವಿಷ (poisonous drugs)ಖರೀದಿಸಿ ತಂದಿದ್ದಾಳೆ. ಬಳಿಕ ಸಹೋದರನ ಎದುರೆ ಸೇವನೆ ಮಾಡಿದ್ದು, ಆತ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಕೆಲ ಗಂಟೆಗಳ ಬಳಿಕ ಮೃತಪಟ್ಟಿದ್ದಾಳೆ.
ಮೃತ ಬಾಲಕಿಯ ತಂದೆಯು ಆಟೋ ಚಾಲಕರಾಗಿದ್ದು, ಅವರಿಗೆ ನಾಲ್ವರು ಹೆಣ್ಣುಮಕ್ಕಳು ಹಾಗೂ ಓರ್ವ ಮಗನಿದ್ದಾನೆ. ಮಗನ ಬಳಿ ಮಾತ್ರ ಮೊಬೈಲ್ ಇತ್ತು. ಮೊಬೈಲ್ನಲ್ಲಿ ಗೇಮ್ ಆಡುವ ಇಚ್ಚೆಯಿಂದ ಕಿರಿಯ ಸಹೋದರನ ಬಳಿ ಮೊಬೈಲ್ ನೀಡುವಂತೆ ಕೇಳಿದ್ದಳು. ಮೊಬೈಲ್ಗಾಗಿ ಮಕ್ಕಳ ನಡುವೆ ನಡೆದ ಜಗಳದಿಂದ ಬಾಲಕಿ ಜೀವ ಕಳೆದುಕೊಂಡಿದ್ದಾಳೆ.
ಇದನ್ನೂ ಓದಿ: ಯಾದಗಿರಿಯಲ್ಲಿ ಪೈಶಾಚಿಕ ಕೃತ್ಯ: ಮಹಿಳೆಯನ್ನ ನಗ್ನಗೊಳಿಸಿ ಮನ ಬಂದಂತೆ ಥಳಿಸಿದ ದುರುಳರು