ಹರಿದ್ವಾರ(ಉತ್ತರಾಖಂಡ್): ಹರಿದ್ವಾರದ ಮಹಾಕುಂಭ ಮೇಳಕ್ಕೆ ಭೇಟಿ ನೀಡುವ ಭಕ್ತರಲ್ಲಿ ರಾಷ್ಟ್ರೀಯತೆಯ ಮನೋಭಾವ ಹರಡಲು ಕುಂಭ ಪ್ರದೇಶದಲ್ಲಿ 150 ಅಡಿ (45 ಮೀ) ಎತ್ತರದ ರಾಷ್ಟ್ರ ಧ್ವಜವನ್ನು ಹಾರಿಸಲಾಗುವುದು.
ಈ ಧ್ವಜ ಮುಂದೆ ಭಕ್ತರ ಆಕರ್ಷಣೆಯ ಕೇಂದ್ರವಾಗುವುದಲ್ಲದೇ, ಉತ್ತರಾಖಂಡದ ಅತ್ಯುನ್ನತ ತ್ರಿವರ್ಣ ಧ್ವಜವೂ ಆಗಲಿದೆ. ಕುಂಭಮೇಳ ಅಧಿಷ್ಠಾನವು ಧ್ವಜಕ್ಕೆ ಸ್ಥಳವನ್ನು ಗುರುತಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ರಾಷ್ಟ್ರಧ್ವಜವನ್ನು ನಿಲ್ಲಿಸುವ ಜವಾಬ್ದಾರಿಯನ್ನು ಹರಿದ್ವಾರದ ರೂರ್ಕಿ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಲಾಗಿದೆ.
ಈ ರಾಷ್ಟ್ರೀಯ ಧ್ವಜದ ಸ್ಥಾಪನೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿರುವ ಹರಿದ್ವಾರ - ರೂರ್ಕಿ ಅಭಿವೃದ್ಧಿ ಪ್ರಾಧಿಕಾರದ (ಎಚ್‌ಆರ್‌ಡಿಎ) ಕಾರ್ಯದರ್ಶಿ ಮತ್ತು ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಹರ್ಬೀರ್ ಸಿಂಗ್, ಹಲವರ ಅಭಿಪ್ರಾಯ ಪಡೆಯಲು ನಿರ್ಧರಿಸಿದ್ದರು. ಅದರಂತೆ ಹರ್ ಕಿ ಪೌರಿ ಘಾಟ್ ಬಳಿಯ ಕೆಲವು ಸ್ಥಳಗಳಲ್ಲಿ ಸ್ಥಾಪನೆ ಮಾಡಬಹುದು ಎಂದು ಕೆಲ ಸಲಹೆಗಳನ್ನು ಅವರು ಪಡೆದುಕೊಂಡರು.
ಇದನ್ನೂ ಓದಿ: ದೆಹಲಿ ಗಡಿ ಪ್ರದೇಶಗಳಲ್ಲಿ ನಾಳೆಯವರೆಗೆ ಇಂಟರ್ನೆಟ್ ಸ್ಥಗಿತ!
ಇನ್ನು ಈ ಬೃಹತ್ ರಾಷ್ಟ್ರಧ್ವಜ ಸ್ಥಾಪನೆಗೆ ಒಟ್ಟು 22.50 ಲಕ್ಷ ರೂ. ವೆಚ್ಚವಾಗಲಿದ್ದು, ಟೆಂಡರ್ ಪ್ರಕ್ರಿಯೆ ಕೂಡ ಮಾಡಲಾಗಿದೆ.
ಕುಂಭಮೇಳ ಆಡಳಿತವು ಹರಿದ್ವಾರದ ಮಹಾಕುಂಭ ಮೇಳಕ್ಕೆ ಆಗಮಿಸುವ ಭಕ್ತರಿಗೆ ಭವ್ಯವಾದ ಸ್ವಾಗತ ನೀಡಲು ಒಂದಿಲ್ಲೊಂದು ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದೆ.