ETV Bharat / bharat

ಸತತ 8 ಗಂಟೆಗಳ ಕಾಲ ಈಜು.. ಸ್ವಿಮ್ಮಿಂಗ್​ನಲ್ಲಿ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌'ಗೆ ಸೇರಿದ ಬಾಲಕಿ - ಛತ್ತೀಸ್‌ಗಢ

ಛತ್ತೀಸ್‌ಗಢದ 15 ವರ್ಷದ ಬಾಲಕಿ ಚಂದ್ರಕಲಾ ಓಜಾ ಈಜು ಕ್ಷೇತ್ರದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾಳೆ. 8 ಗಂಟೆಗಳ ಕಾಲ ನಿರಂತರವಾಗಿ ಈಜುವ ಮೂಲಕ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌'ಗೆ ಸೇರ್ಪಡೆಗೊಂಡಿದ್ದಾಳೆ.

girl from Chhattisgarh enters Golden Book of World Record
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಗೊಂಡ ಛತ್ತೀಸ್‌ಗಢದ ಬಾಲ
author img

By

Published : Apr 10, 2023, 11:18 AM IST

ದುರ್ಗ್ (ಛತ್ತೀಸ್‌ಗಢ): ಕೇಂದ್ರ ಕಚೇರಿಯಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಪುರಾಯಿ ಗ್ರಾಮ ಇಂದು ರಾಷ್ಟ್ರದಲ್ಲಿ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣ ಗ್ರಾಮದ 15 ವರ್ಷದ ಬಾಲಕಿ ಚಂದ್ರಕಲಾ ಓಜಾ. ಹೌದು, ದೃಢಸಂಕಲ್ಪದಿಂದ ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಈಕೆ ಸಾಬೀತುಪಡಿಸಿದ್ದಾಳೆ. 8 ಗಂಟೆಗಳ ಕಾಲ ನಿರಂತರವಾಗಿ ಈಜುವ ಮೂಲಕ ಈಕೆ ವಿಶ್ವದಾಖಲೆ ಮಾಡಿದ್ದಾಳೆ. ಭಾನುವಾರ ಬೆಳಗ್ಗೆ 5 ಗಂಟೆಗೆ ಕೆರೆಯಲ್ಲಿ ಈಜಲು ಆರಂಭಿಸಿದ ಈಕೆ ಮಧ್ಯಾಹ್ನ 1 ಗಂಟೆಯವರೆಗೂ ಈಜುತ್ತಿದ್ದಳು. ಈ ವೇಳೆ ಗ್ರಾಮದ ಜನತೆ ಈ ದಾಖಲೆಯನ್ನು ಕಣ್ತುಂಬಿಕೊಂಡಿದ್ದು, ಮಾತ್ರವಲ್ಲದೇ ಆಕೆ ಹುರಿದುಂಬಿಸುತ್ತಿದ್ದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​ನ ಮೂವರು ಸದಸ್ಯರ ತಂಡವೂ ಸ್ಥಳದಲ್ಲಿದ್ದರು.

ವೈದ್ಯಕೀಯ ತಪಾಸಣೆ: ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತಂಡವು ಚಂದ್ರಕಲಾ ಅವರ ಈಜುವಿಕೆಯ ಸಂಪೂರ್ಣ ವಿಡಿಯೋ ರೆಕಾರ್ಡಿಂಗ್ ಮಾಡಿದೆ. ರಾಜ್ಯ ಗೃಹ ಸಚಿವ ತಾಮ್ರಧ್ವಜ್ ಸಾಹು ಕೂಡ ಸ್ಥಳಕ್ಕೆ ಆಗಮಿಸಿ ಚಂದ್ರಕಲಾ ಅವರನ್ನು ಅಭಿನಂದಿಸಿದರು. ದಾಖಲೆ ಬರೆದ ಚಂದ್ರಕಲಾ ಕೆರೆಯಿಂದ ಹೊರ ಬಂದ ಕೂಡಲೇ ಜನ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಬಳಿಕ ವೈದ್ಯರ ತಂಡ ವೈದ್ಯಕೀಯ ತಪಾಸಣೆ ನಡೆಸಿತು.

8 ಗಂಟೆ ಕಾಲ 64 ಸುತ್ತು ಈಜು: ಕೆರೆಯಲ್ಲಿ ಚಂದ್ರಕಲಾ ಸುಮಾರು 8 ಗಂಟೆಯಲ್ಲಿ 64 ಸುತ್ತು ಈಜಿದ್ದಾರೆ. ದಾಖಲೆ ನಿರ್ಮಿಸಿದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಚಂದ್ರಕಲಾ "ಈಜಿನಲ್ಲಿ ವಿಶ್ವ ದಾಖಲೆ ನಿರ್ಮಿಸಿರುವುದು ಸಂತಸ ತಂದಿದೆ. ನನ್ನ ಈ ಪ್ರಯತ್ನಕ್ಕೆ ಪೋಷಕರು, ಗ್ರಾಮದ ಜನರು ಹಾಗೂ ಗೃಹ ಸಚಿವರು ಸಂಪೂರ್ಣ ಬೆಂಬಲ ನೀಡಿ ಆಶೀರ್ವಾದ ಮಾಡಿದ್ದಾರೆ" ಎಂದು ಹರ್ಷ ವ್ಯಕ್ತಪಡಿಸಿದರು.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ 160 ಮಕ್ಕಳು: ಪುರಾಯಿ ಗ್ರಾಮದಲ್ಲಿ ಸುಮಾರು 160 ಮಕ್ಕಳು ಖೋಖೋ, ಕಬಡ್ಡಿ ಹಾಗೂ ಈಜುವುದರಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇವರಿಗಾಗಿ ಕ್ರೀಡಾ ಅಕಾಡೆಮಿ ಸ್ಥಾಪನೆಗೆ ಬೇಡಿಕೆ ಬಂದಿದೆ. ಬಜೆಟ್​​ನಲ್ಲಿ ಪುರಾಯಿ ಗ್ರಾಮದಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸುವುದಾಗಿ ಸಿಎಂ ಘೋಷಿಸಿದ್ದಾರೆ. ಶೀಘ್ರವೇ ಅದನ್ನು ಸ್ಥಾಪಿಸಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದರು. ಚಂದ್ರಕಲಾ ಓಜಾ ಅವರು 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌'ಗೆ ಪ್ರವೇಶಿಸುವ ಮೂಲಕ ದೇಶಕ್ಕೆ ಗೌರವ ತಂದಿದ್ದಾರೆ. ದೃಢಸಂಕಲ್ಪದಿಂದ ಪ್ರಯತ್ನ ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಆಕೆ ಸಾಬೀತುಪಡಿಸಿದ್ದಾಳೆ ಎಂದು ಗೃಹ ಸಚಿವರು ಬಾಲಕಿಯ ಸಾಧನೆಯನ್ನು ಶ್ಲಾಘಿಸಿದರು.

ನಿರಂತರವಾಗಿ ಈಜಿದ ದಾಖಲೆ ಇಲ್ಲ: ದಾಖಲೆ ನಿರ್ಮಿಸಿದ ಬಳಿಕ ಗೋಲ್ಡನ್ ಬುಕ್ ನ ಏಷ್ಯಾ ಮುಖ್ಯಸ್ಥ ಮನೀಶ್ ವಿಷ್ಣೋಯ್ ಮಾತನಾಡಿ, "ವಿರಾಮವಿಲ್ಲದೆ ನಿರಂತರ 8 ಗಂಟೆಗಳ ಕಾಲ ಈಜಿದ ದಾಖಲೆ ಇದುವರೆಗೆ ಯಾವುದೇ ವಯೋಮಾನದವರಲ್ಲಿರಲಿಲ್ಲ. ಈಗ ಅಂತಿಮ ಪ್ರಮಾಣಪತ್ರವನ್ನು ನೀಡಲಾಗುವುದು. ಆಕೆಯ ದಾಖಲೆಯು ಈಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಾಗಲಿದೆ. ಇದರಿಂದಾಗಿ ಜಗತ್ತಿನಲ್ಲಿ ಯಾರಾದರೂ ಈಜು ದಾಖಲೆಗಳನ್ನು ಹುಡುಕಿದಾಗ ಚಂದ್ರಕಲಾ ಹೆಸರು ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೈಗೆ ಕೋಳ, ಕಾಲಿಗೆ ಸರಪಳಿ ಬಿಗಿದು ಸಮುದ್ರದಲ್ಲಿ ಈಜಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.