ETV Bharat / bharat

ಶಾಲೆಯಲ್ಲಿ ಅಭ್ಯಾಸದ ವೇಳೆ ತಲೆಗೆ ಹೊಕ್ಕ ಭರ್ಚಿ.. ಜಾವಲಿನ್‌ನಿಂದ 15 ವರ್ಷದ ಬಾಲಕ ದಾರುಣ ಸಾವು - ತಲೆಗೆ ಚುಚ್ಚಿದ ಜಾವೆಲಿನ್

15 year old boy killed by javelin: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಶಾಲೆಯೊಂದರಲ್ಲಿ ಜಾವಲಿನ್‌ ಅಭ್ಯಾಸದ ವೇಳೆ ಭೀಕರ ಅಪಘಾತ ಸಂಭವಿಸಿದೆ. ಜಾವೆಲಿನ್‌ನಿಂದ 15 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ.

15 year old boy death
ಶಾಲೆಯಲ್ಲಿ ಅಭ್ಯಾಸದ ವೇಳೆ ಭೀಕರ ಅಪಘಾತ: ಜಾವೆಲಿನ್‌ನಿಂದ 15 ವರ್ಷದ ಬಾಲಕ ಸಾವು
author img

By PTI

Published : Sep 7, 2023, 1:55 PM IST

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಶಾಲೆಯೊಂದರಲ್ಲಿ ಅಭ್ಯಾಸದ ವೇಳೆ ಮತ್ತೊಬ್ಬ ವಿದ್ಯಾರ್ಥಿ ಎಸೆದ ಜಾವೆಲಿನ್ ತಲೆಗೆ ಚುಚ್ಚಿದ ಪರಿಣಾಮ 15 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಬಾಲಕ ಹುಜೆಫಾ ದವರೆ ಎಂಬ ಬಾಲಕ ತನ್ನ ಶೂಲೇಸ್ ಕಟ್ಟಲು ಕೆಳಗೆ ಬಾಗಿದಾಗ ಮೊನಚಾದ ವಸ್ತುವು (ಜಾವೆಲಿನ್) ತನ್ನ ಕಡೆಗೆ ಬರುತ್ತಿರುವುದನ್ನು ಗಮನಿಸಿರಲಿಲ್ಲ. ಜಿಲ್ಲೆಯ ಮಂಗಾವ್ ತಾಲೂಕಿನ ಗೋರೆಗಾಂವ್‌ನ ಪುರಾರ್‌ನಲ್ಲಿರುವ ಐಎನ್‌ಟಿ ಇಂಗ್ಲಿಷ್ ಶಾಲೆಯಲ್ಲಿ ಬುಧವಾರ ಮಧ್ಯಾಹ್ನ ವಿದ್ಯಾರ್ಥಿಗಳು ಶಾಲೆಯ ಮೈದಾನದಲ್ಲಿ ಜಾವೆಲಿನ್ ಎಸೆತದ ಅಭ್ಯಾಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾವೆಲಿನ್ ತಲೆಗೆ ಚುಚ್ಚಿದ ನಂತರ ಬಾಲಕ ಸ್ಥಳದಲ್ಲೇ ಸಾವು: ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದ ಜಾವಲಿನ್ ತಂಡದಲ್ಲಿ ಬಾಲಕ ದವರೆ ಕೂಡ ಇದ್ದ. ಅಭ್ಯಾಸದ ಅವಧಿ ನಡೆಯುತ್ತಿರುವಾಗ, ಸಹ ವಿದ್ಯಾರ್ಥಿಯೊಬ್ಬ ಜಾವಲಿನ್ ಎಸೆದಿದ್ದಾನೆ. ಈ ವೇಳೆ ಮೊನಚಾದ ತುದಿಯನ್ನು ಹೊಂದಿರುವ ಉದ್ದನೆಯ ಕೋಲು (ಜಾವಲಿನ್) ತನ್ನ ದಿಕ್ಕಿನಲ್ಲಿ ಹಾರಿ ಬರುತ್ತಿರುವುದನ್ನು ಬಾಲಕ ಗಮನಿಸಿರಲಿಲ್ಲ. ಆಗ ಆತ ತನ್ನ ಶೂಲೇಸ್ ಕಟ್ಟಿಕೊಳ್ಳಲು ಕೆಳಗೆ ಬಾಗಿದ್ದಾಗ ತಲೆಗೆ ಪೆಟ್ಟು ಬಿದ್ದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಜಾವಲಿನ್ ತಲೆಗೆ ಚುಚ್ಚಿದ ನಂತರ ಬಾಲಕ ದವರೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮುನ್ನವೇ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರಿಂದ ತನಿಖೆ ಆರಂಭ: ಸದ್ಯಕ್ಕೆ ಜಿಲ್ಲೆಯ ಗೋರೆಗಾಂವ್ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಜಾವಲಿನ್ ಎಸೆದ ವಿದ್ಯಾರ್ಥಿಯ ನಿರ್ಲಕ್ಷ್ಯವೇನಾದರೂ ಇದೆಯಾ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಶಾಲೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಮತ್ತು ಆಟದ ಮೈದಾನದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನೂ ಸಹ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. (ಪಿಟಿಐ)

ಇದನ್ನೂ ಓದಿ: ಅಸ್ಸೋಂ: ಸಿಆರ್‌ಪಿಎಫ್ ಕಾನ್​ಸ್ಟೇಬಲ್ ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು

ಸ್ಕೂಟಿಗೆ ಹಾಸ್ಯ ನಟನ ಕಾರು ಡಿಕ್ಕಿ.. ಯುವಕನ ಸ್ಥಿತಿ ಗಂಭೀರ: ಅಪಘಾತದ ಬಗ್ಗೆ ಆ್ಯಕ್ಟರ್​ ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.